ಲಾಡ್ಜ್ ನಲ್ಲಿ ಕ್ವಾರಂಟೈನ್‌ಗೆ ವಿರೋಧ
Team Udayavani, May 16, 2020, 4:27 PM IST
ಸಾಂದರ್ಭಿಕ ಚಿತ್ರ
ಭದ್ರಾವತಿ: ನಗರಕ್ಕೆ ಚೆನ್ನೈನಿಂದ ಆಗಮಿಸಿರುವ ದಂಪತಿಗೆ ನಗರದ ಬಿ.ಎಚ್.ರಸ್ತೆಯಲ್ಲಿರುವ ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೆ„ನ್ ಮಾಡಿರುವದನ್ನು ಅಲ್ಲಿನ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ತೀವ್ರ ಆಕೋÅಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.
ಜನರ ಆಕ್ರೋಶ ಹೆಚ್ಚಾದಂತೆ ಸ್ಥಳಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಬಂದ ನಂತರ ಜನರನ್ನು ನಿಯಂತ್ರಿಸಿ ಹೊರರಾಜ್ಯದಿಂದ ಬಂದ ದಂಪತಿಗಳನ್ನು ಪದ್ಮ ರೆಸಿಡೆನ್ಸಿಯ ಕೊಠಡಿಯಲ್ಲಿ ಕ್ವಾರಂಟೈನ್ ನಲ್ಲಿಡಲಾಯಿತು. ನಗರಸಭಾ ಆಯುಕ್ತ ಮನೋಹರ್ ಮಾತನಾಡಿ, ಭದ್ರಾವತಿ ಮೂಲದ ದಂಪತಿಗಳು ಇಲ್ಲಿಗೆ ಇಂದು ಚೆನ್ನೈನಿಂದ ಬಂದಿದ್ದು, ಸದರಿ ಮಹಿಳೆ ಗರ್ಭಿಣಿ ಆಗಿದ್ದು, ಸರ್ಕಾರದ ಕೋವಿಡ್-19 ನಿಯಮಾವಳಿಗಳಂತೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದೆ. ಇಬ್ಬರಿಗೂ ಕೊರೋನಾ ನೆಗೆಟಿವ್ ಬಂದಿದೆ. ನಿಯಮಾನುಸಾರವಾಗಿ ಹೊರರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್
ಹೊರತುಪಡಿಸಿ ಬೇರೆಡೆ ಕ್ವಾರಂಟೈನ್‌ನಲ್ಲಿ ಇರಸಬೇಕಾದ ಕಾರಣ ಇವರಿಬ್ಬರನ್ನು ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಾಜಿ ಶಾಸಕರ ಭೇಟಿ: ಸ್ಥಳಕ್ಕೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಗಾಯತ್ರಿ, ಸಹಾಯಕ ಅಧಿ ಕಾರಿ ನೀಲೇಶ್, ನಗರಸಭೆ ಇಂಜಿನೀಯರ್ ರುದ್ರೇಗೌಡ, ನಂಜಪ್ಪ, ಡಾ| ಸುನಿತಾ ನಂಬಿಯಾರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.