ವಿರೋಧದ ನಡುವೆಯೂ ಕ್ವಾರೆಂಟೈನ್
Team Udayavani, May 15, 2020, 5:40 PM IST
ಭದ್ರಾವತಿ: ಕ್ವಾರಂಟೈನ್ ಕುರಿತಂತೆ ಜನರೊಂದಿಗೆ ಚರ್ಚಿಸಿದ ತಹಶೀಲ್ದಾರ್ ಶಿವಕುಮಾರ್.
ಭದ್ರಾವತಿ: ನಗರಕ್ಕೆ ಹೊರರಾಜ್ಯ ಮತ್ತು ಹೊರಜಿಲ್ಲೆಯಿಂದ ಬಂದಿರುವ ಸುಮಾರು 50 ಜನರನ್ನು ತಾಲೂಕಿನ ಗ್ರಾಮಾಂತರ ಪ್ರದೇಶಗಳ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ತಾಲೂಕಿನ ದೇವರ ನರಸಿಪುರದಲ್ಲಿನ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ವಸತಿ ಶಾಲೆಯಲ್ಲಿ 25 ಜನರನ್ನು ಹಾಗೂ ಹೆಂಚಿನ ಸಿದ್ದಾಪುರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ವಸತಿಶಾಯಲ್ಲಿ 25 ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನೂ ಹೆಚ್ಚಿನ ಜನರು ಆಗಮಿಸಿದರೆ ಅವರಿಗೂ ಸಹ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಶಿವಕುಮಾರ್ ತಿಳಿಸಿದರು.
ಕೆಲವೆಡೆ ವಿರೋಧ: ತಹಶೀಲ್ದಾರರು ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಆನವೇರಿ ಸೇರಿದಂತೆ ಕೆಲವೆಡೆಗಳಲ್ಲಿ ಗ್ರಾಮಸ್ಥರು ಅಲ್ಲಿನ ವಸತಿಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ವಿರೋಧಿಸುತ್ತಲೇ ಇದ್ದಾರೆ. ಕೆಲವೆಡೆ ಗ್ರಾಮದ ರಸ್ತೆಗೆ ಮಣ್ಣುಸುರಿದು ಅಡ್ಡಹಾಕುವ ಪ್ರಯತ್ನ ಸಹ ಮಾಡಿದ್ದಾರೆ. ತಾಲೂಕಿಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಇನ್ನೂ ಹೆಚ್ಚಿನ ಜನರು ಆಗಮಿಸಿದರೆ ಅವರಿಗೆ ಕ್ವಾರಂಟೈನ್ ಅಲ್ಲಿಡಲು ವಿದ್ಯಾರ್ಥಿ ವಸತಿಶಾಲೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಾಗುತ್ತದೆ. ಅಂತಹ ಸಂದರ್ಭ ಬಂದರೆ ವಿರೋಧವನ್ನು ಹತ್ತಿಕ್ಕಲು ಪೊಲೀಸ್ ಭದ್ರತೆ ಬಳಸಿಕೊಂಡು ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೂದ್‌ಪೀರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.