Shimoga; ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ: ಆಯನೂರು ಮಂಜುನಾಥ್
Team Udayavani, Dec 11, 2023, 2:33 PM IST
ಶಿವಮೊಗ್ಗ: ಬೆಳಗಾವಿಯಲ್ಲಿ ಅದಿವೇಶನ ನಡೆಯುತ್ತಿದೆ. ಕುಡಿಯುವ ನೀರಿನ ಹಾಹಾಕಾರ ಸೇರಿ ಉತ್ತರ ಕನ್ನಡ ಹತ್ತಾರು ಜಲ್ವಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿಲ್ಲ. ಈ ಕುರಿತು ವಿರೋಧ ಪಕ್ಷ ಚರ್ಚೆ ಮಾಡುತ್ತದೆಂದು ನಿರೀಕ್ಷೆಯಿತ್ತು. ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂರಿಕ ಹೋರಾಟದಿಂದ ಭಾರತೀಯ ಜನತಾ ಪಕ್ಷ ತನ್ನ ದೌರ್ಬಲ್ಯ ತೊರಿಸಿಕೊಂಡಿದೆ. ಸರ್ವ ಸಮ್ಮತ ಇಲ್ಲದೆ ಭಿನ್ನಮತ ಸ್ಪೋಟಗೊಂಡಿದೆ. ವಿರೋಧ ಪಕ್ಷದ ನಾಯಕನ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಯತ್ನಾಳ್ ಬಹಿರಂಗ ಅಸಮಾಧಾನ ತೊಂಡಿಕೊಂಡಿದ್ದಾರೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನಿಲ್ಲ. 26 ಜನ ಬಿಜೆಪಿಯ ಸಂಸದರು ಇಲ್ಲಿಯವರೆಗೆ ಬರಗಾಲದ ಬಗ್ಗೆ ಮಾತಾಡಿಲ್ಲ. ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರ ಹಣ ತರುವುದನ್ನು ಮರೆತಿದ್ದಾರೆ. ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಪುಡಿ ರೌಡಿ ಮಣಿಕಂಠನ ವಿಷಯ ಇಟ್ಟುಕೊಂಡು ಅಧಿವೇಶನ ಬಾಯ್ಕಾಟ್ ಮಾಡುತ್ತಾರೆ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ಇಟ್ಟುಕೊಂಡಿಲ್ಲ ಎಂದರು.
ರಾಜ್ಯಾಧ್ಯಕ್ಷರು ದೆಹಲಿಗೆ ಹೋದ ಪುಟ್ಟಾ, ಬಂದ ಪುಟ್ಟ ಎಂದಾಗಿದೆ. ಟೀಕೆ ಟಿಪ್ಪಣಿಗಳಲ್ಲಿ ಮಾತ್ರ ವಿರೋಧ ಮಾಡುತ್ತಿದೆ. ಸದನವನ್ನು ವಿರೋಧ ಪಕ್ಷ ವಿಫಲಗೊಳಿಸಿದೆ. ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿ ನಾಯಕರು ಹೊರಬೇಕು ಎಂದರು.
ಕರ್ನಾಟಕದ ಸಂಕಷ್ಟಗಳಿಗೆ ಧ್ವನಿಯಾಗದ ವಿರೋಧ ಪಕ್ಷದ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ತನ್ನ ಇತಿಮಿತಿಗಳಲ್ಲಿ ಪರಿಹಾರ ನೀಡಲು ಮುಂದಾಗಿದೆ. ಆದರೆ ಕೇಂದ್ರ ಸರ್ಕಾರ ಏನು ಮಾಡಿದೆ. ಕರ್ನಾಟಕದ 25 ಜನ ಸಂಸದರು 5 ಜನ ಮಂತ್ರಿಗಳು ಏನು ಮಾಡುತ್ತಿದ್ದಾರೆ. ಏನು ಪ್ರಶ್ನೆ ಕೇಳದೆ ಇರುವ ಸಂಸದರು ರಾಜ್ಯದ ಜನರ ಕ್ಷೇಮೆ ಕೇಳಬೇಕು ಎಂದು ಆಯನೂರು ಆಗ್ರಹಿಸಿದರು.
ಸರ್ಕಾರದ ಭವಿಷ್ಯ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಭವಿಷ್ಯ ಹೇಳುವವರು ಇವರು. ರಸ್ತೆ ಬದಿಯಲ್ಲಿ ಗಿಣಿ ಇಟ್ಟುಕೊಂಡು ಭವಿಷ್ಯ ಹೇಳುತ್ತಾರೆ. ಯತ್ನಾಳ್, ಕುಮಾರಸ್ವಾಮಿ, ಈಶ್ವರಪ್ಪ ಭವಿಷ್ಯ ಹೇಳುತ್ತಾರೆ. ಅವರ ಭವಿಷ್ಯವೇ ಅವರಿಗೆ ಗೊತ್ತಿಲ್ಲ. ಹೋರಿ ಹಿಂದೆ ಓಡುವ ನರಿಗಳ ಥರ ಕಾಣುತ್ತಿದ್ದಾರೆ ಹೊರತು ಬೇಟೆಯಾಡುವ ಹುಲಿಗಳ ತರ ಕಾಣುತ್ತಿಲ್ಲ. ಈಶ್ವರಪ್ಪ ರಾಜಕೀಯ ಮುತ್ಸದಿ ಅಲ್ಲ. ಅವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಟೀಕಿಸಿದರು.
ಸಂಸದ ರಾಘವೇಂದ್ರ ಅವರಿಗೆ ಮಠಾಧೀಶರು ಸನ್ಮಾನ ಕಾರ್ಯಕ್ರಮ ವಿಚಾರಕ್ಕೆ ಮಾತನಾಡಿ, ಬಿಜೆಪಿಯ ಪ್ರಾಯೋಜಿತ ಮಠಾಧೀಶರಾಗಿ ಸನ್ಮಾನ ಮಾಡಿದ್ದಾರೋ ಗೊತ್ತಿಲ್ಲ. ಸಮಾಜದ ಯಾವ ಮುಖಂಡರಿಗೂ ಆಹ್ವಾನ ನೀಡಿಲ್ಲ. ರಾಘವೇಂದ್ರ ಅವರನ್ನು ಒಲೈಸುವ ಕೆಲಸ ಮಠಾಧೀಶರು ಮಾಡುತ್ತಿದ್ದಾರೆ. ಸಾರ್ಥಕ ಸನ್ಮಾನ ಮಾಡುವುದಾದರೆ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಸನ್ಮಾನ ಮಾಡಲಿ ಅಧಿಕಾರತನ, ಶ್ರೀಮಂತಿಗೆ ಬೆಂಬಲಿಸುವ ಕಾರ್ಯ ಸ್ವಾಮೀಜಿಗಳಿಗೆ ತರವಲ್ಲ. ಬಿಜೆಪಿ ಗೆ ಸಂಸದ ಸ್ಥಾನ ತಂದು ಕೊಟ್ಟವನು ನಾನು. ನಾನು ನಾಲ್ಕು ಸದನ ಹೋಗಿ ಬಂದಿದ್ದೇನೆ ನಾನು ನೆನಪಾಗಲಿಲ್ಲ. ಮುಖ್ಯಮಂತ್ರಿ ಮಗ ಎಂದು ಸಾಧಕನಾಗಿ ಕಂಡರಾ ರಾಘವೇಂದ್ರ? ಸ್ವಾಮೀಜಿಗಳು ಪಕ್ಷಕ್ಕೆ ಸೀಮಿತರಾಗಬಾರದು. ಸ್ವಾಮೀಜಿಗಳು ಸಹ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳಿಂದ ಇದಾಗಬಾರದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!
Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Zeeshan Siddique: ಬಾಬಾ ಸಿದ್ದಿಕಿ ಪುತ್ರ ಝೀಶಾನ್ ಸಿದ್ದಿಕಿ ಎನ್‌ಸಿಪಿಗೆ ಸೇರ್ಪಡೆ…
ಕಾನೂನು ಸಮರದಲ್ಲಿ ಪವಾರ್ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್ ಬಣಕ್ಕೆ ಮೇಲುಗೈ
Wayanad Bypolls: ಚುನಾವಣ ರಾಜಕಾರಣದ ಅಖಾಡಕ್ಕಿಳಿದ ಪ್ರಿಯಾಂಕಾ, ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.