ಬಿಜೆಪಿ ಹೆಣ್ಣು ಮಕ್ಕಳ ಮಾನ ಉಳಿಸುವ ಪರವಾಗಿದೆ, ನೀವು :ಮಾನ ಕಳೆಯುವ ಪರವಾಗಿದ್ದೀರಿ: ಆರಗ
ಕಾಂಗ್ರೆಸ್ ವಿರುದ್ಧ ಆರಗ ಜ್ಞಾನೇಂದ್ರ ಆಕ್ರೋಶ
Team Udayavani, Aug 1, 2023, 2:53 PM IST
ತೀರ್ಥಹಳ್ಳಿ: ಉಡುಪಿಯಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಿಕರಿಸುತ್ತಾರೆ. ಇಂತಹ ವಿಕೃತ ಸ್ವಭಾವ ಯಾಕೆ ಬಂತು ? ಆ ಮೂವರು ವಿದ್ಯಾರ್ಥಿನಿಯರು ಕೇರಳದವರಾಗಿದ್ದು, ಅವರ ಹಿನ್ನಲೆ ಏನು ಎಂದು ತನಿಖೆ ನಡೆಸಿದ್ದೀರಾ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಆ.1ರ ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿಡಿಯೋ ಚಿತ್ರೀಕರಣ ಮಾಡಿ ಯಾರಿಗೆ ಕೊಡುತ್ತಿದ್ದಾರೆ? ತನಿಖೆ ನಡೆಯಬೇಕು ತಾನೇ, ತನಿಖೆ ಮಾಡಲಿ ಎಂದರೆ ಶಾಲಾ ಮಕ್ಕಳು ಹುಡುಗಾಟಕ್ಕೆ ಹಾಗೆ ಮಾಡಿದ್ದಾರೆ ಎನ್ನುತ್ತಾರೆ. ತಮಾಷೆಗೆ ಮಾಡಿದ್ದೂ ಅದು ಮಕ್ಕಳಾಟ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋಗುವಾಗ ಕ್ಯಾಮರಾ ಇಟ್ಟರೆ ಮಾನಸಿಕವಾಗಿ ಏನಾಗುತ್ತಿತ್ತು, ಯೋಚನೆ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಡಿದ್ದೂ ತಮಾಷೆಗೊ ಬೆರೆದಕ್ಕೋ ನೋಡಣ, ಮೊದಲು ತನಿಖೆ ನೆಡೆಸಿ. ಇದರ ಹಿಂದೆ ಕೇರಳದ ನಂಟಿದ್ಯಾ? ಪಿಎಫ್ ಐ ಸಂಘಟನೆ ಕೈವಾಡ ಇದ್ಯಾ? ಟೆರರಿಸ್ಟ್ ಗಳಿಗೆ ಫೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡುವ ಹುನ್ನಾರ ಇತ್ತಾ? ಜಿಹಾದಿಗಳಿದ್ದಾರ? ನಿಮ್ಮ ಸರ್ಕಾರ ತನಿಖೆ ಮಾಡಿತಾ? ನೀವು ಬಿಜೆಪಿಯನ್ನು ದೂರುತ್ತೀರಾ? ಬಿಜೆಪಿ ಹೆಣ್ಣು ಮಕ್ಕಳ ಮಾನ ಉಳಿಸುವ ಪರವಾಗಿದೆ. ನೀವು ಮಾನ ಕಳೆಯುವ ಪರವಾಗಿದ್ದೀರಾ, ನಿಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.