ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್
Team Udayavani, Sep 24, 2020, 10:07 AM IST
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಸಮೀಪದ ರಂಜದಕಟ್ಟೆಯಲ್ಲಿ ಸೇತುವೆಯೊಂದು ಕುಸಿತವಾಗಿದ್ದು, ಇದರಿಂದ ಶಿವಮೊಗ್ಗ – ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್ ಆಗಿದೆ.
ರಂಜದಕಟ್ಟೆಯಲ್ಲಿರುವ ಬಿಂತದ ಹಳ್ಳಕ್ಕೆನಿರ್ಮಿಸಿರುವ ಸೇತುವೆ ಕುಸಿತವಾಗಿದೆ. ಈ ಬಾರಿಯ ಸುರಿದ ಭಾರಿ ಮಳೆ ಹಾಗೂ ಭಾರಿ ವಾಹನಗಳ ಸಂಚಾರದಿಂದ ಸೇತುವೆ ಕುಸಿದಿದೆ ಎನ್ನಲಾಗಿದೆ.
ಈ ಸೇತುವೆ ಮೂಲಕ ಹಲವು ಪ್ರದೇಶಗಳ ಜನರ ಓಡಾಟ ನಡೆಯುತ್ತಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇದೇ ಮಾರ್ಗವಾಗಿ ಪ್ರತಿದಿನ ನೂರಾರು ರೋಗಿಗಳು ಉಡುಪಿ, ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಆದರೆ ಇದೀಗ ಸೇತುವೆ ಕುಸಿತದಿಂದ ಆ್ಯಂಬುಲೆನ್ಸ್ ಸೇರಿದಂತೆ ಹಲವಾರು ವಾಹನಗಳು ಹರಸಾಹಸ ಪಡಬೇಕಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ಮೋದಿ ಸೂಚನೆ? ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಸುಧಾಕರ್
ಪಿಡಬ್ಲೂಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷವೇ ಸೇತುವೆ ಕುಸಿತಕ್ಕೆ ಕಾರಣ ಎಂದು ಸ್ಥಳೀಯರ ಆರೋಪಿಸುತ್ತಿದ್ದಾರೆ.
ತೀರ್ಥಹಳ್ಳಿ ಹೆದ್ದಾರಿ ಬದಲಿ ಮಾರ್ಗಗಳು
1. ಉಡುಪಿ, ಆಗುಂಬೆ, ಸಾಗರ, ಶಿವಮೊಗ್ಗ ಹೋಗುವವರು ತೀರ್ಥಹಳ್ಳಿ ಮಾರ್ಗದಲ್ಲಿ ಕಲ್ಮನೆ, ಉಂಟೂರುಕಟ್ಟೆ ಕೈಮರ ನಂತರ ಸಿಗುವ ಬಿಳುಕೊಪ್ಪ ಇಲ್ಲಿ ಶಾಲಾ ಸಮೀಪ ಇರುವ ರಸ್ತೆಯಲ್ಲಿ ಸಾತ್ಗೋಡು (7 KM) ಸಂಚರಿಸಿ ಅಲ್ಲಿಂದ ಬಲಭಾಗದಿಂದ ಮುಕ್ತಿಹರಿಹರಪುರ, ಬೊಬ್ಬಿ ಮಾರ್ಗವಾಗಿ ತೀರ್ಥಹಳ್ಳಿ ಮಾರ್ಗ ಸಂಪರ್ಕಿಸಬಹುದು.
2. ಆಗುಂಬೆ, ಕಮ್ಮರಡಿ, ರಾಮಕೃಷ್ಣಪುರ, ದೇವಂಗಿ, ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದು.
3. ಆಗುಂಬೆ ಕೊಪ್ಪ, ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದು.
4. ಉಡುಪಿ, ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಕವಲೇದುರ್ಗ, ಕೊಂಡ್ಲೂರು, ತೀರ್ಥಹಳ್ಳಿ ಸಂಪರ್ಕಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.