ರಾಹುಲ್ ಬಾಲಿಶ ವರ್ತನೆ
Team Udayavani, Jul 22, 2018, 6:25 AM IST
ಶಿವಮೊಗ್ಗ/ಬೆಂಗಳೂರು: ಲೋಕಸಭೆಯಲ್ಲಿ ವಿಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಉಂಟಾಗಿರುವ ಸೋಲು 2019ರ ಲೋಕಸಭಾ ಚುನಾವಣೆ ಫಲಿತಾಂಶದ ಮುನ್ಸೂಚನೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿ ಎನ್‌ಡಿಎ ಪರ 325 ಮತಗಳು
ಚಲಾವಣೆಗೊಂಡಿರುವುದನ್ನು ಗಮನಿಸಿದರೆ ಬಿಜೆಪಿಯು 2019ರ ಲೋಕಸಭೆ ಚುನಾವಣೆಯಲ್ಲಿ ಇದಕ್ಕಿಂತ ಹೆಚ್ಚಿನ ಬಹುಮತ
ಗಳಿಸುವುದು ನಿಶ್ಚಿತ.
2019ರ ಲೋಕಸಭೆ ಚುನಾವಣೆಯು ಬಿಜೆಪಿಯ ಧನಾತ್ಮಕ ಕಾರ್ಯಸೂಚಿ ಮತ್ತು ವಿಪಕ್ಷಗಳ ನಕರಾತ್ಮಕ ಕಾರ್ಯಸೂಚಿ ನಡುವಿನಹೋರಾಟವಾಗಲಿದೆ.
ಎನ್‌ಡಿಎ ಮೈತ್ರಿಕೂಟ ಮತ್ತೂಮ್ಮೆ ಕೇಂದ್ರ ಸರ್ಕಾರದ ಗಮನಾರ್ಹ ಸಾಧನೆಗಳ ಆಧಾರದ ಮೇಲೆ ಜಯಗಳಿಸಲಿದೆ ಎಂದು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವರ್ತನೆಯಂತೂ ಅತ್ಯಂತ ಬಾಲಿಶವಾಗಿತ್ತು. ಆ ನಡವಳಿಕೆಯು ರಾಹುಲ್ ನಾಯಕತ್ವದ ಬಗ್ಗೆ ದೇಶದ ಜನತೆಯಲ್ಲಿರುವ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ,ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಜನರ ಮೇಲೆ ಸಾಲದ ಹೊರೆ ಬಿದ್ದಿದೆ. ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಸಿದ್ದರಾಮಯ್ಯ ಅವರು 5 ವರ್ಷದಲ್ಲಿ 2,86,479 ಕೋಟಿ ಸಾಲ ಮಾಡಿದ್ದಾರೆ. ಅದನ್ನು ಕುಮಾರಸ್ವಾಮಿ ಅವರು 2,92,220 ಕೋಟಿ ರೂ.ಗೆ ಏರಿಕೆ ಮಾಡಿದ್ದಾರೆ. ಪ್ರತಿ ಪ್ರಜೆ ಮೇಲೆ 46,886 ರೂ.ಸಾಲದ ಹೊರೆ ಇದೆ.
2017-18ರಲ್ಲಿ ಮನ್ನಾ ಮಾಡಿದ ಸಹಕಾರ ಬ್ಯಾಂಕುಗಳ ಸಾಲ ಮನ್ನಾದ 4 ಸಾವಿರ ಕೋಟಿ ಹಣ ಮರುಪಾವತಿಯಾಗಿಲ್ಲ. ಈಗ ಘೋಷಣೆ ಯಾಗಿರುವ ಸಾಲ ಮನ್ನಾವನ್ನು 4 ಹಂತದಲ್ಲಿ ಮಾಡುತ್ತೀನಿ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ. ಮೊದಲು ರಾಷ್ಟ್ರೀಕೃತ ಬ್ಯಾಂಕುಗಳ ಜತೆ ಸಮಾಲೋಚನೆ ನಡೆಸದೆ ಸಾಲ ಮನ್ನಾ ಘೋಷಣೆ ಆಗಿದೆ. ರಾಜ್ಯ ಸರಕಾರಕ್ಕೆ ಇನ್ನೊಂದು ತಿಂಗಳು ಬೇಕಾದರೂ ಸಮಯ ಕೊಡೋಣ ಎಂದರು.
ಜು.29ರಂದು ಬೆಳಗಾವಿಯ ಚಿಕ್ಕೋಡಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕೇಂದ್ರ ಸರಕಾರದಿಂದ ರೈತರ ಬೆಳೆಗಳಿಗೆ ಬೆಂಬಲ ಘೋಷಣೆ ಸಂಬಂಧ ರೈತರ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.
– ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.