ಕಾರ್ಗಲ್ ಪಪಂ ಆಯವ್ಯಯ ಮಂಡನೆ
Team Udayavani, Mar 31, 2021, 9:11 PM IST
ಸಾಗರ: ತಾಲೂಕಿನ ಜೋಗ- ಕಾರ್ಗಲ್ ಪಪಂನ 2021-22ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ಕೆ.ಎನ್. ವಾಸಂತಿ ರಮೇಶ್ ಮಂಗಳವಾರ ಮಂಡಿಸಿದರು. ಚೊಚ್ಚಲ ಬಜೆಟ್ ಮಂಡಿಸಿದ ಮಾತನಾಡಿದ ಅವರು, ಪಪಂಗೆ ಉನ್ನತೀಕರಣಗೊಂಡು 20 ವರ್ಷಗಳು ಸಂದಿವೆ. ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಂಪನ್ಮೂಲ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಸ್ವೀಕೃತವಾಗುವ ಒಟ್ಟು ಆದಾಯ 1961.02 ಲಕ್ಷ ರೂ.ನಲ್ಲಿ 1926.47 ಲಕ್ಷ ರೂ. ವ್ಯಯಿಸಲಾಗುತ್ತಿದೆ ಎಂದರು. ವಿರೋಧ ಪಕ್ಷದ ನಾಯಕ ರಾಜು ಮಾತನಾಡಿ, ಅಧ್ಯಕ್ಷರು ಮಂಡಿಸಿದ ಬಜೆಟ್‌ನಲ್ಲಿ ದೂರದೃಷ್ಟಿ ಇಲ್ಲ. ಸಂಪನ್ಮೂಲದ ಕ್ರೋಢೀಕರಣದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದರು.
ಸದಸ್ಯ ವಾಟೇಮಕ್ಕಿ ನಾಗರಾಜ್ ಮಾತನಾಡಿ, ಹಿಂದಿನ ಆಡಳಿತದ ನ್ಯೂನತೆಗಳನ್ನು ಸರಿಪಡಿಸಲು ಈ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಶಾಸಕ ಎಚ್. ಹಾಲಪ್ಪ ಅವರ ಮಾರ್ಗದರ್ಶನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಅನುದಾನದ ಭರವಸೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.