ಹೋಂ ಕ್ವಾರಂಟೈನ್ ಆದೇಶ ಉಲ್ಲಂಘಿಸಿ ಕ್ರಿಕೆಟ್ ಆಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲು
Team Udayavani, Mar 26, 2020, 12:22 PM IST
ಶಿವಮೊಗ್ಗ: ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ಧ ಕಾರಣ ಹೋಂ ಕ್ವಾರಂಟೈನ್ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಹೊರಗಡೆ ಸುತ್ತಾಡಿ ಕ್ರಿಕೆಟ್ ಆಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಬುದಾಬಿಯಿಂದ ಸ್ವ-ಗ್ರಾಮ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ಇತ್ತೀಚೆಗೆ ಹಿಂದಿರುಗಿದ್ದ ಇಬ್ಬರು ಯುವಕರು ಹೋಂ ಕ್ವಾರಂಟೈನ್ ಆದೇಶ ಪಾಲಿಸದೇ ಸುತ್ತಾಡುತ್ತಿದ್ದರು. ಅವರ ವಿರುದ್ಧ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಹಮ್ಮದ್ ಸುಯಬ್ ಖಾನ್ ಬಿನ್ ಮಸ್ತಾನ್ ಖಾನ್ (30 ವರ್ಷ) ಹಾಗೂ ಮಹಮ್ಮದ್ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್ (28 ವರ್ಷ) ಇವರ ಮೇಲೆ ಪ್ರಕರಣ ದಾಖಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಹಾಗೂ ತೀರ್ಥಹಳ್ಳಿ ಸಿಪಿಐ ಗಣೇಶಪ್ಪ ಅವರು ಹೋಂ ಕ್ವಾರಂಟೈನ್ ನಲ್ಲಿರುವವರನ್ನು ತಪಾಸಣೆ ಮಾಡುವಾಗ ಇಬ್ಬರು ಮನೆಯಿಂದ ಹೊರಬಂದು ಸುತ್ತಾಡಿದ್ದಲ್ಲದೆ ಕ್ರಿಕೆಟ್ ಆಡಿರುವುದು ತಿಳಿದುಬಂದಿತ್ತು.
ಕೋವಿಡ್-19 ಪೀಡಿತ ದೇಶಗಳಿಂದ ಬಂದು ಹೊರಗಡೆ ಓಡಾಡಿದ ಇಬ್ಬರ ಪಾಲಕರಾದ ಮಸ್ತಾನ್ ಖಾನ್ ಅಲಿಯಾಸ್ ಬಾಬಾ ಜಾನ್ 65 ವರ್ಷ ಹಾಗೂ ಖತೀಜಾ ಬೀ 56 ವರ್ಷ ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 38/2020 ಕಲಂ 188, 269, 270, 271 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.