Shimoga; ರಾಜ್ಯದಲ್ಲಿ ಜಾತಿಗಣತಿ ಜಾರಿಗೆ ತರಬೇಕು: ಬಿ.ಕೆ ಹರಿಪ್ರಸಾದ್
ನನ್ನ ಧ್ವನಿ ಯಾರು ಕಡಿಮೆ ಮಾಡಲು ಸಾಧ್ಯವಿಲ್ಲ
Team Udayavani, Oct 30, 2023, 1:18 PM IST
ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಇಡಿ ದೇಶದಲ್ಲಿ ಜಾತಿಗಣತಿ ನಡೆಸಬೇಕೆಂದು ತೀರ್ಮಾನ ಕೈಗೊಂಡಿದೆ. ರಾಜ್ಯದ ಜಾತಿಗಣತಿ ಬಹಿರಂಗಪಡಿಸಬೇಕು, ಜಾತಿಗಣತಿ ಜಾರಿಗೆ ತರಬೇಕು ಎಂದು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೂಲ ಆಶಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಕಷ್ಟ ಇರಬಾರದು ಎನ್ನುವುದು. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರ ಆಶಯ ಈಡೇರಿಲ್ಲ. ಕೆಲವೇ ಕೆಲವು ಸಮುದಾಯಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬಂದಿವೆ. ಅಸ್ಪೃಶ್ಯತೆ ನಿವಾರಣೆಯಾಗಬೇಕು ಎನ್ನುವುದು ಸಂವಿಧಾನದ ಆಶಯ. ಪ್ರವರ್ಗ 1 ರಲ್ಲಿ 101 ಜಾತಿಗಳಿವೆ, ಕೇವಲ 4-5 ಜಾತಿಗಳು ರಾಜಕೀಯವಾಗಿ ಪ್ರಬಲವಾಗಿವೆ. ಕೆಲವು ಜಾತಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಲ್ಲ. ಹಿಂದುಳಿದ ವರ್ಗದಲ್ಲಿ 197 ಸಮಾಜಗಳಿವೆ. 190 ಜಾತಿಗಳು ಇನ್ನು ಕೆಟ್ಟ ಸ್ಥಿತಿಯಲ್ಲಿವೆ ಎಂದರು.
ಮೀಸಲಾತಿ ಭಿಕ್ಷೆಯಲ್ಲ: ಸರಕಾರದ ಖಜಾನೆ ನಮ್ಮ ಶ್ರಮಜೀವಿಗಳು ರಕ್ತ ಬೆವರು ಸುರಿಸಿ ಖಜಾನೆ ತುಂಬಿದ್ದಾರೆ. ಈ ಹಣ ಪೋಲಾಗದೆ ಸದುಪಯೋಗವಾಗ ಬೇಕಾದರೆ ಜಾತಿಗಣತಿ ಆಗಬೇಕು. ಮೀಸಲಾತಿ ಎಂಬುದು ಭಿಕ್ಷೆಯಲ್ಲ. ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಮೀಸಲಾತಿ ಜಾರಿಯಿಂದ ಅಭಿವೃದ್ಧಿ ಕುಂಠಿತವಾಗದು ಎಂದರು.
ಇದನ್ನೂ ಓದಿ:Road mishap: ಶಾಲಾ ವ್ಯಾನ್ – ಬಸ್ ಢಿಕ್ಕಿ; ಚಾಲಕ, ಐವರು ವಿದ್ಯಾರ್ಥಿಗಳು ಮೃತ್ಯು
ಕಾತರಾಜ್ ವರದಿ ಜಾರಿ ಅಸೆಂಬ್ಲಿಯಲ್ಲಿ ಚರ್ಚೆಗೆ ಬರಬೇಕು. ವರದಿ ಜಾರಿ ವೇಳೆ ಎಲ್ಲಾ ರಾಜಕೀಯ ಪಕ್ಷಗಳ ಮೇಲ್ವರ್ಗದವರು ವಿರೋಧ ಮಾಡಿದ್ದರು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದರು.
ನಾನು 30 ವರ್ಷ ದೆಹಲಿಯಲ್ಲಿದ್ದವನು. ಇದು ನಮ್ಮ ರಾಜ್ಯ ಹಾಗಾಗಿ ಪ್ರೀತಿ ಜಾಸ್ತಿ. ಈಗ ಇಲ್ಲಿ ಹೆಚ್ಚು ಓಡಾಡುತ್ತೇದ್ದೇನೆ ಎಂದು ಹರಿಪ್ರಸಾದ್ ಹೇಳಿದರು.
ಧ್ವನಿ ಕಡಿಮೆ ಮಾಡಲು ಸಾಧ್ಯವಿಲ್ಲ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರಕ್ಕೆ ಮಾತನಾಡಿದ ಅವರು, ಇದೆಲ್ಲಾ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕೇಳಬೇಕು. ನನ್ನ ಧ್ವನಿ ಯಾರು ಕಡಿಮೆ ಮಾಡಲು ಸಾಧ್ಯವಿಲ್ಲ. ಜೀವನ ಪೂರ್ತಿ ಧ್ವನಿ ಏರಿಸಿಕೊಂಡು ಬಂದಿದ್ದೇನೆ. ಆ ಧ್ವನಿ ಹಾಗೆಯೇ ಇರುತ್ತದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.