ಒಂದೇ ಚುನಾವಣೆಯಿಂದ ದೇಶಕ್ಕೆ ಹಲವು ಲಾಭ : ಚಕ್ರವರ್ತಿ ಸೂಲಿಬೆಲೆ
| ದೇಶದ ಅಭಿವೃದ್ಧಿಗೆ ಪೂರಕ | ತಗ್ಗಲಿದೆ ಆರ್ಥಿಕ ಹೊರೆ | ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳಿಂದ ವಿರೋಧ
Team Udayavani, Mar 29, 2021, 9:22 PM IST
ಶಿವಮೊಗ್ಗ: ದೇಶದ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ, ಉಪ ಚುನಾವಣೆಗಳ ಹೆಸರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಅಧಿಕಾರಿಗಳು ಪ್ರಗತಿ ಕಡೆಗೆ ಗಮನಹರಿಸಲಾಗುತ್ತಿಲ್ಲ. ರಕ್ಷಣಾ ಇಲಾಖೆ ಶ್ರಮ ಕೂಡ ಇದರಲ್ಲೇ ವ್ಯಯವಾಗುತ್ತಿದೆ. ವರ್ಷಕ್ಕೊಂದು ಚುನಾವಣೆ ನಡೆದರೆ ಇಡೀ ವ್ಯವಸ್ಥೆಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ. ಈ ಉದ್ದೇಶದಿಂದಲೇ “ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ನರೇಂದ್ರ ಮೋದಿ ವಿಚಾರ್ ಮಂಚ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ “ಒಂದು ದೇಶ, ಒಂದು ಚುನಾವಣೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಕಿ ಅಂಶಗಳ ಪ್ರಕಾರ, ಲೋಕಸಭೆ ಚುನಾವಣೆಗೆ 2009 ರಲ್ಲಿ 1115 ಕೋಟಿ ರೂ., 2014 ರಲ್ಲಿ 3870 ಕೋಟಿ ರೂ. ಖರ್ಚಾಗಿದೆ. ಮುಂಬರುವ ಚುನಾವಣೆಗಳಿಗೆ ಬಹುಶಃ ಐದೂವರೆ ಸಾವಿರ ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ. ವೆಬ್‌ಸೈಟ್‌ವೊಂದರ ವರದಿ ಪ್ರಕಾರ, ದೇಶದಲ್ಲಿ ಚುನಾವಣೆಗಳಿಗೆ ಹತ್ತು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ, ಏಕ ಕಾಲಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸಿದರೆ ಚುನಾವಣಾ ಆಯೋಗವೇ ಹೇಳುವಂತೆ ಇದರ ಅರ್ಧ ಖರ್ಚಿನಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಿಂದ ದೇಶದ ಮೇಲೆ ಚುನಾವಣೆಯಿಂದಾಗಿ ಬೀಳುತ್ತಿರುವ ಆರ್ಥಿಕ ಹೊರೆ ತಗ್ಗಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ ಅವರನ್ನಂತೂ ಸೋಲಿಸಲಾಗುತ್ತಿಲ್ಲ. ಕನಿಷ್ಠ ಅವರು ತಂದಿರುವ ಕಾಯ್ದೆಗಳನ್ನಾದರೂ ಹಿಂತೆಗೆಯುವಂತೆ ಒತ್ತಡ ಹೇರುವ ಉದ್ದೇಶದಿಂದ ಪ್ರತಿಪಕ್ಷಗಳು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿವೆ. ಆದರೆ, ಮೋದಿ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ. ಒಂದು ಚುನಾವಣೆಗೆ ಎಂಎಲ್‌ಎ ಮತ್ತು ಎಂಪಿಗಳು 30 ಸಾವಿರ ಕೋಟಿ ರೂ. ಖರ್ಚು ಮಾಡುತ್ತಾರೆ. ಆಯೋಗದ ಅ ಧಿಕಾರಿಯೊಬ್ಬರು ಹೇಳುವಂತೆ, ಚುನಾವಣೆ ಪ್ರಕ್ರಿಯೆಯಲ್ಲಿ ಆದಷ್ಟು ಬೇಗ ಬದಲಾವಣೆ ತಂದರೆ ಕಪ್ಪು ಹಣ ಸಂಗ್ರಹ ಆಗುವುದನ್ನು ತಡೆಯಬಹುದು ಎಂದಿದ್ದಾರೆ. ಇದೆಲ್ಲದಕ್ಕೂ ನರೇಂದ್ರ ಮೋದಿ ಅವರು ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆ ಸಹಕಾರಿಯಾಗಿದೆ ಎಂದರು. ಈ ಚುನಾವಣೆ ವ್ಯವಸ್ಥೆ ಜಾರಿಗೆ ತಂದಲ್ಲಿ ಫೆಡರಲ್ ವ್ಯವಸ್ಥೆ ಹಾಳಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಇದೇ ಕಾಂಗ್ರೆಸ್‌ನವರು 1955, 57 ಮತ್ತು 62 ರಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆ ಅಡಿಯಲ್ಲೇ ಚುನಾವಣೆ ಮಾಡಿದ್ದಾರೆ. ಆಗ ಫೆಡರಲ್ ರಚನೆಗೆ ಧಕ್ಕೆ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಮಂತ್ರಿಗಿರಿಗಾಗಿ ಪಕ್ಷಾಂತರ ಮಾಡಲಾಗುವುದಿಲ್ಲ, ರಾಜೀನಾಮೆ ನೀಡಿದ್ದಲ್ಲಿ ಐದು ವರ್ಷ ಕಾಯಲೇಬೇಕು. ಜತೆಗೆ, ಏಕ ವ್ಯಕ್ತಿಯ ಮುಖ ನೋಡಿ ಮತದಾನ ಮಾಡಲಾಗುತ್ತದೆ ಹೀಗೆ ನಾನಾ ಭಯ ಅವರಲ್ಲಿ ಮನೆ ಮಾಡಿರುವುದೇ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಇದನ್ನು ವಿರೋಧಿಸುವುದಕ್ಕೆ ಮೂಲ ಕಾರಣ ಎಂದರು.
ನರೇಂದ್ರ ಮೋದಿ ವಿಚಾರ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ರವಿ ಚಾಣಕ್ಯ ಮಾತನಾಡಿ, ಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಕಾಯ್ದೆಗಳು ಹೊರಬರಲಿವೆ. ಮೋದಿ ಅವರು ಜಾರಿಗೆ ತಂದ ಕಾಯ್ದೆ ವಾಪಸ್ ಪಡೆದಿಲ್ಲ. ಪಡೆಯುವುದೂ ಇಲ್ಲ ಎಂದರು.
ಕಾಂಗ್ರೆಸ್‌ಗೆ ಮಾತನಾಡುವ ತಾಕತ್ತಿಲ್ಲ ಕಾಂಗ್ರೆಸ್ ನವರಿಗೆ ದೇಶ ಅಂದರೇನು ಗೊತ್ತಿಲ್ಲ. ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಕಲಾಪದಲ್ಲಿ ಮಾತನಾಡಲು ತಾಕತ್ತೂ ಇಲ್ಲ. ಉತ್ತಮ ವಿಚಾರಗಳ ಬಗ್ಗೆ ಚರ್ಚಿಸದೇ ವಿರೋಧಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಕಾಂಗ್ರೆಸ್, ಜೆಡಿಎಸ್ ಮಿತ್ರರು ದೇಶದ ಬಗ್ಗೆ ಗಮನ ಕೊಡಬೇಕು. ಭ್ರಷ್ಟಾಚಾರ ಅಥವಾ ಪಕ್ಷದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಟೀಕೆ ಮಾಡಲಿ. ಆದರೆ, ಅಭಿವೃದ್ಧಿ ವಿಚಾರಕ್ಕೆ ಸಹಕರಿಸಲಿ ಎಂದರು. ಈ ರೀತಿಯ ಚರ್ಚೆ ನಡೆಸಬೇಕಾದ ಸ್ಥಿತಿಯೇ ನಾಚಿಗೇಡಿನ ಸಂಗತಿಯಾಗಿದೆ. ಸ್ವಾತಂತ್ರÂಕ್ಕಾಗಿ ಹೋರಾಟ ಮಾಡಿದ್ದರ ಹಿಂದಿನ ಉದ್ದೇಶ ಭಾರತ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು. ಆ ಕೆಲಸವನ್ನೇ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.