ದಾಖಲೆಯ 18 ಲಕ್ಷ ರೂ.ಗೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಖರೀದಿಸಿದ ಪ್ರಸನ್ನ ಕುಮಾರ್ ಸಮನವಳ್ಳಿ
Team Udayavani, Jun 13, 2022, 7:07 PM IST
ಸೊರಬ: ಹೋರಿ ಹಬ್ಬದಲ್ಲಿ ರಾಜ್ಯಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯನ್ನು ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಅವರು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ಹೊರಿ ಹಬ್ಬದ ಅಖಾಡ ಯಾವುದೇ ಇರಲಿ, ಚಾಮುಂಡಿ ಎಕ್ಸ್‌ಪ್ರೆಸ್ ಬಂದಿತೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ. ಅಂತಹ ಅಭಿಮಾನಿಗಳ ಪಡೆ ಹೊಂದಿರುವ ಚಿಕ್ಕಲಿಂಗದಹಳ್ಳಿಯ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯನ್ನು ಪ್ರಸನ್ನ ಕುಮಾರ್ ಅವರು 18 ಲಕ್ಷ ರೂ., ಗೆ ಖರೀದಿ ಮಾಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಹೋರಿಯು ಬಹುತೇಕ ಎಲ್ಲಾ ಹೋರಿ ಹಬ್ಬಗಳಲ್ಲೂ ಬಂಪರ್ ಬಹುಮಾನ ಪಡೆದಿದೆ. ನಿಯತ್ತಿನ ಹಬ್ಬಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್ ಸಾಕ್ಷಿಯಾಗಿದೆ.
ಇದನ್ನೂ ಓದಿ : ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಸರಿಯಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ಸಚಿವ ಸುಧಾಕರ್
ಈ ಹೋರಿಯ ವಿಶೇಷ ಅಂದ್ರೆ ಅಖಾಡದಲ್ಲಿ ಪೀಪಿ, ಬಲೂಲ್, ಜೂಲಗಳನ್ನು ಹೊತ್ತು ಯಾರೊಬ್ಬರ ಕೈಗೂ ಸಿಗದೇ ಓಡುತ್ತೆ. ಮನೆಯಲ್ಲಿ ಮಾತ್ರ ಸೌಮ್ಯ ಸ್ವಭಾದಿಂದ ಇರುತ್ತದೆ.
ಜನಪದ ಕ್ರೀಡೆಯಾಗಿರುವ ಹೋರಿ ಹಬ್ಬ ಉಳಿಯಬೇಕು. ತಾವು ಸಹ ಹೋರಿ ಹಬ್ಬದ ಅಭಿಮಾನಿಯಾಗಿದ್ದು, ಈಗಾಗಲೇ ತಮ್ಮ ಬಳಿ ಏಕದಂತ, ರೇಣುಕಾಂಬ ಎಕ್ಸ್‌ಪ್ರೆಸ್, ಸಮನವಳ್ಳಿ ಅಧ್ಯಕ್ಷ, ಸಮನವಳ್ಳಿ ಸಾಹುಕಾರ ಎಂಬ ಹೋರಿಗಳಿವೆ. ತಮ್ಮ ಪುತ್ರ ಪರೀಕ್ಷಿತ್ ಕೆಲ ದಿನಗಳಿಂದ ಆಟವಾಡುವಾಗ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಆಟವಾಡುತ್ತಿದ್ದನು. ಅಷ್ಟರಲ್ಲೇ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಮಾರಾಟಕ್ಕಿರುವ ವಿಷಯ ತಿಳಿದು ಖರೀದಿಸಿದ್ದೇನೆ. ತಮ್ಮ ಪುತ್ರನ ಮೂಲಕ ಭಗವಂತ ನುಡಿಸಿದ್ದಾನೆ ಎಂದು ಭಾವಿಸುತ್ತೇನೆ. ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯು ಇನ್ನು ಮುಂದೆ ಸಮನವಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಅಖಾಡಕ್ಕೆ ಇಳಿಯಲಿದೆ. ಹೋರಿ ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ನಿತ್ಯ ನೂರಾರು ಮಂದಿ ಆಗಮಿಸುತ್ತಿದ್ದಾರೆ. ಹೋರಿಯಿಂದ ಮತ್ತಷ್ಟು ಪ್ರಚಾರವಾಗುತ್ತಿದ್ದೇನೆ. ನನ್ನ ಮನೆಗೆ ಆಗಮಿಸಿದ ಅದೃಷ್ಟ ಲಕ್ಷ್ಮಿ ಎಂದೇ ಭಾವಿಸುತ್ತೇನೆ ಎನ್ನುತ್ತಾರೆ ಹೋರಿ ಮಾಲೀಕ ಪ್ರಸನ್ನ ಕುಮಾರ್ ಸಮನವಳ್ಳಿ ಅವರು.
ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯು ತಾಲೂಕಿಗೆ ಆಗಮಿಸಿರುವುದು ಹೋರಿ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.