ಚರಕ ಉತ್ಸವಕ್ಕೆ ಚಾಲನೆ; ಕಾಯಕ ಪ್ರಶಸ್ತಿ ಪ್ರದಾನ
Team Udayavani, Mar 26, 2022, 2:29 PM IST
ಸಾಗರ: ಭಾರತೀಯ ಶ್ರಮ ಸಂಸ್ಕೃತಿಯನ್ನು ಉಳಿಸುವ, ಆ ಮೂಲಕ ಕರಕುಶಲಕರ್ಮಿಗಳಿಗೆ ಆತ್ಮಗೌರವ ಒದಗಿಸುವ ಕಾರ‍್ಯವನ್ನು ಚರಕ ಮಾಡುತ್ತಿದೆ ಎಂದು ಬಿಜಾಪುರದ ಬಂಜಾರ ಕಸೂತಿ ಒಕ್ಕೂಟದ ನಿರ್ದೇಶಕಿ ಆಶಾ ಪಾಟೀಲ್ ಹೇಳಿದರು.
ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಯದಲ್ಲಿ ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಚರಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ, ಖಾದಿ ವಸ್ತುಗಳ ಬಳಕೆ ಇತ್ಯಾದಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಚರಕ ಶ್ರಮ ಸಂಸ್ಕೃತಿಗೆ ಮನ್ನಣೆ ದೊರಕಿಸಿದೆ. ಕಾಯಕವೇ ಕೈಲಾಸ, ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತುಗಳು ಚರಕದಲ್ಲಿ ಕಾರ‍್ಯ ರೂಪಕ್ಕೆ ಬಂದಿವೆ. ಯುವ ಪೀಳಿಗೆಗೆ ಆದರ್ಶ ತೋರಿಸುವ ಕಾರ‍್ಯವನ್ನು ಚರಕದಲ್ಲಿ ಮಹಿಳೆಯರು ಮಾಡುತ್ತಿದ್ದಾರೆ ಎಂದರು.
ದೇಸೀ ಸಂಸ್ಥೆಯ ಶಾರದಾ ಗಣೇಶ್‌ಮಾತನಾಡಿ, ಚರಕ ಸಂಸ್ಥೆಯ ಉದ್ದೇಶ ಮತ್ತು ಸಫಲತೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಸಾಧ್ಯವಾಗಿರುವುದು ಚರಕದ ಒಂದು ಸಾಧ್ಯತೆ ಮಾತ್ರವಾಗಿದೆ. ಶೋಷಣೆ, ಪರಿಸರ ನಾಶ ಇತ್ಯಾದಿಗಳಿರುವ ಸಮಾಜವನ್ನು ಸರಿ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಅಗತ್ಯವಾದ ಜೀವನಶೈಲಿಯನ್ನು ಚರಕ ಪ್ರತಿಪಾದಿಸುತ್ತದೆ. ಚರಕದ ಮೂಲಕ ಅಂತಹ ವ್ಯಕ್ತಿತ್ವದ ನಿರ್ಮಾಣವಾದಾಗ ಪ್ರಸನ್ನ ಅವರ ಕನಸು ನನಸಾಗುತ್ತದೆ; ಗುರಿ ಈಡೇರಿದಂತಾಗುತ್ತದೆ ಎಂದರು.
ಹೆಗ್ಗೋಡು ಗ್ರಾಪಂ ಅಧ್ಯಕ್ಷೆ ಸುಮ ಅಧ್ಯಕ್ಷತೆ ವಹಿಸಿದ್ದರು. ೧೮ನೇ ವರ್ಷದ ಕಾಯಕ ಪ್ರಶಸ್ತಿ ವಿಭಾಗದಲ್ಲಿ ತಲಾ ೫ ಸಾವಿರ ರೂ. ನಗದು, ಫಲಕಗಳನ್ನೊಳಗೊಂಡ ೧೦ ವೈಯಕ್ತಿಕ ಪ್ರಶಸ್ತಿ ಹಾಗೂ ಅತ್ಯುತ್ತಮ ಕೆಲಸ ನಿರ್ವಹಿಸಿದ ವಿಭಾಗಗಳಿಗೆ 10 ಸಾವಿರ ರೂ. ನಗದು ಹಾಗೂ ಫಲಕಗಳನ್ನೊಳಗೊಂದು ಗುಂಪು ಕಾಯಕ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಪುರಸ್ಕೃತರಾದ ಜಿ.ಕೆ.ಶ್ರೀಧರ ಮತ್ತು ಲಕ್ಷ್ಮೀನಾರಾಯಣ ಮಾತನಾಡಿದರು.
ಚರಕ ಸಂಸ್ಥೆಯ ಪ್ರಸನ್ನ, ಅಧ್ಯಕ್ಷೆ ಗೌರಮ್ಮ, ಮಹಾಲಕ್ಷ್ಮೀ, ರಮೇಶ್, ಇಂದುಕುಮಾರ್, ಶೈಲಜಾ ಪೀಟರ್, ರುದ್ರಯ್ಯ ಮುಂತಾದವರು ಹಾಜರಿದ್ದರು. ಮಧುರಾ ಪ್ರಾರ್ಥಿಸಿದರು. ಪದ್ಮಶ್ರೀ ಸ್ವಾಗತಿಸಿದರು. ಪವಿತ್ರ ವಂದಿಸಿದರು. ಕೌಸ್ತುಭ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.