ಚನ್ನಯ್ಯ ಸಮಾಜದ ಸವಲತ್ತುಗಳು ಇತರರ ಪಾಲು: ಬಸವರಾಜ ದೊಡ್ಮನಿ ಆಕ್ರೋಶ
Team Udayavani, Apr 19, 2022, 5:17 PM IST
ಸಾಗರ: ರಾಜ್ಯದಲ್ಲಿ ಶೇ. 16ರಷ್ಡು ಇರುವ ಚನ್ನಯ್ಯ ಸಮಾಜದವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟದ ಮಾರ್ಗವನ್ನು ಹಿಡಿಯುವ ಸಂದರ್ಭ ಬಂದಿದೆ. ಈ ಕಾರಣಕ್ಕಾಗಿ ನಮ್ಮ ಸಮುದಾಯ ಎಲ್ಲಾ ಜನರು ಒಂದಾಗಿ ಸಾಗಬೇಕು ಎಂದು ಚನ್ನಯ್ಯ ಸಮಾಜದ ರಾಜ್ಯ ಅಧ್ಯಕ್ಷ ಬಸವರಾಜ ದೊಡ್ಮನಿ ಕರೆ ನೀಡಿದರು.
ಮಂಗಳವಾರ ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ನಮಗೆ ಮೀಸಲಾತಿ ನೀಡಿದೆ. ಆದರೆ ಇದು ಪ್ರಬಲ ಜಾತಿಗಳ ಪಾಲಾಗುತ್ತಿದೆ. ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದಾರೆ. ಇದರಿಂದ ಅನ್ಯ ಮೀಸಲು ಸಮುದಾಯಗಳಿಗೆ ಅನ್ಯಾಯ ಆಗುತ್ತಿದೆ. ನಮ್ಮ ಸಮುದಾಯದ ಅಭಿವೃದ್ಧಿಗೆ ನಾವೇ ಹೋರಾಡಬೇಕಿದೆ. ಒಗ್ಗಟ್ಟು ಶಕ್ತಿ ಪ್ರದರ್ಶನ ಆಗಬೇಕಿದೆ ಎಂದು ಹೇಳಿದರು.
ಸಾಗರ ತಾಲೂಕು ಚನ್ನಯ್ಯ ಸಮಾಜದ ಅಧ್ಯಕ್ಷ ರೇವಪ್ಪ ಕೆ. ಹೊಸಕೊಪ್ಪ ಮಾತನಾಡಿ, ಸಾಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಹೊಸನಗರದಲ್ಲಿ ಈಗಾಗಲೇ ರಾಜಕೀಯದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದೇವೆ. ಆದರೆ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಮುಂಬರುವ ದಿನಗಳಲ್ಲಿ ನಮಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಮತ್ತು ರಾಜಕೀಯ ಪ್ರಾತಿನಿಧ್ಯ ದೊರಕಿಸಿ ಕೊಡುವ ರಾಜಕೀಯ ಪಕ್ಷವನ್ನು ಮಾತ್ರ ಬೆಂಬಲಿಸುವ ಬಗ್ಗೆ ನಾವು ಚಿಂತಿಸಿದ್ದೇವೆ ಎಂದರು.
ಚನ್ನಯ್ಯ ಸಮಾಜ ಈಗ ಜಿಲ್ಲೆಗಳು ಮತ್ತು ರಾಜ್ಯಾದ್ಯಂತ ಅತಿ ಹೆಚ್ಚಿನ ಜನಸಂಖ್ಯೆ ಮತ್ತು ಮತಗಳನ್ನು ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ಎಚ್ವೆತ್ತುಕೊಂಡು ಮತಗಳ ಚಲಾವಣೆ ಮಾಡುತ್ತೇವೆ. ಸ್ವತಂತ್ರ ಬಂದು 75 ವರುಷಗಳಾದರೂ ಚನ್ನಯ್ಯ ಸಮಾಜದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಿಲ್ಲ. ಈ ಕಾರಣಕ್ಕೆ ಸರಕಾರ ಕೆಲವು ಜಾತಿಗಳನ್ನು ಮೀಸಲು ಪಟ್ಟಿಯಿಂದ ಕೈಬಿಡಬೇಕು ಎಂದು ಹೇಳಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಚನ್ನಯ್ಯ ಬಲಗೈ ಸಮಾಜ ಅಭಿವೃದ್ಧಿ ಹೊರಾಟ ಸಮಿತಿಯ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಎಚ್.ಕೆ. ಬಸವಂತಪ್ಪ ಕೋಟೆ, ಚಂದ್ರಪ್ಪ ಜಿ. ಗುಡ್ನಾಪುರ, ರಾಜೇಂದ್ರ ಬಂದಗದ್ದೆ ಸಾಗರ, ಯಲ್ಲಪ್ಪ ಬಿ. ಬೇಡನಕೊಪ್ಪ, ಬೂದೇಶ ಬಿ.ಎಚ್., ಎ.ಕೆ. ನಾಗರಾಜ, ಮಂಜಪ್ಪ ಅಲಗೇರಿಮಂಡ್ರಿ, ಎಚ್.ಕೆ. ಶಿವಾನಂದ ಕಾನಗೋಡು, ಹೊಳಲಿಂಗ, ಎ.ಕೆ. ನಾಗರಾಜ, ಮಂಜಪ್ಪ, ಆಲಗೇರಿಮಂಡ್ರಿ, ಬಿ.ಎಚ್., ಹಾಲೇಶ್ ಜಿ. ಚಿಕ್ಕಸವಿ, ವಿಶ್ವನಾಥ ಹಾರೋಗಳಿಗೆ, ಹೊಳೆಲಿಂಗ ಬಿ.ಎಚ್., ಸುಜಾತ ರಿಪ್ಪನ್‌ಪೇಟೆ, ರಂಗಪ್ಪ ಹೊನ್ನೇಸರ, ರೇವಣಪ್ಪ ಸಾಂಡಾ, ಬಿದರಗೇರಿಬ ರೇವಣಪ್ಪ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.