ಶೃಂಗೇರಿ ಶಾರದಾ ಪೀಠಕ್ಕೆ ನ್ಯಾ| ಎಸ್.ಎ. ಬೋಬ್ಡೆ
Team Udayavani, Jan 15, 2021, 4:20 AM IST
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಕ್ಕೆ ಗುರುವಾರ ಸುಪ್ರೀಂ ಕೋರ್ಟ್‌ನ ಮು| ನ್ಯಾ| ಎಸ್.ಎ. ಬೋಬ್ಡೆ ಭೇಟಿ ನೀಡಿದ್ದರು.
ಬೆಳಗ್ಗೆ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೊರಡಕಲ್ಲು ಹೆಲಿಪ್ಯಾಡಿಗೆ ಆಗಮಿಸಿದ ನ್ಯಾಯಮೂರ್ತಿಗಳು, ಅಲ್ಲಿ ಪೊಲೀಸ್ ಧ್ವಜವಂದನೆ ಸ್ವೀಕರಿಸಿದರು. ಬಳಿಕ ಶ್ರೀ ಮಠಕ್ಕೆ ಆಗಮಿಸಿದರು. ಶ್ರೀ ಮಠದ ಎದುರು ಶ್ರೀ ಮಠದ ಆಡಳಿತಾಧಿ ಕಾರಿ ಡಾ| ವಿ.ಆರ್. ಗೌರಿಶಂಕರ್ ಫಲ ಪುಷ್ಪ ನೀಡಿ ನ್ಯಾಯಮೂರ್ತಿಗಳನ್ನು ಸ್ವಾಗತಿಸಿದರು. ಶ್ರೀ ಮಠದ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ ಅವರು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನರಸಿಂಹವನದಲ್ಲಿರುವ ಗುರುಭವನಕ್ಕೆ ಶ್ರೀಮಠದಿಂದ ಕಾಲ್ನಡಿಗೆಯಲ್ಲಿ ತೆರಳಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನ್ಯಾಯಮೂರ್ತಿಗಳೊಂದಿಗೆ ಅವರ ಪುತ್ರ ಶ್ರೀನಿವಾಸ್ ಇದ್ದರು.
ರಾಮಮಂದಿರಕ್ಕೆ ಸಹಾಯ ಮಾಡಿ: ಶೃಂಗೇರಿ ಶ್ರೀ :
ಶೃಂಗೇರಿ: ಶ್ರೀರಾಮನ ಪವಿತ್ರ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲು ಪ್ರತಿಯೊಬ್ಬ ಆಸ್ತಿಕನೂ ಕೈಲಾದ ದೇಣಿಗೆ ಸಮ ರ್ಪಿಸಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣೆ ಅಭಿಯಾನದ ಅಂಗವಾಗಿ ಗುರುವಾರ ಅವರು ಅನುಗ್ರಹ ಸಂದೇಶ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.