ಉಸಿರಿರೋವರೆಗೂ ಅಭಿವೃದ್ಧಿಗೆ ಬದ್ಧ

"ನಮ್ಮೊಲುಮೆ ಭಾವಭಿನಂದನಾ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

Team Udayavani, Mar 1, 2021, 4:44 PM IST

CM Yadiyurappa

ಶಿವಮೊಗ್ಗ: ಬದುಕಿನ ಕೊನೆಯ ಉಸಿರು ಇರುವವರೆಗೂ ರಾಜ್ಯದ, ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ತಿಳಿಸಿದರು.

ಭಾನುವಾರ μÅàಡ್‌ಂಪಾರ್ಕ್‌ನಲ್ಲಿ ನಡೆದ ಸಿಎಂ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ “ನಮ್ಮೊಲುಮೆ ಭಾವಭಿನಂದನಾ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಮಾವ, ತಾತನ ಜತೆ ಮಾರ್ಕೆಟ್‌ ನಲಗಲಿ ತರಕಾರಿ ಮಾರಾಟ ಮಾಡುತ್ತಿದ್ದೆ. ಈಗಲೂ ನಾನು ಮಂಡ್ಯಕ್ಕೆ ಹೋದರೆ ನಾನು ನಿಂಬೆಹಣ್ಣು ಮಾರಿದ್ದು ನೆನೆಸಿಕೊಳ್ಳುತ್ತಾರೆ. ಈ ಮಟ್ಟಕ್ಕೆ ಬೆಳೆಯಲು ಕಾರಣ, ಸಂಘ ಪರಿವಾರ. ದಿವಂಗತ ಅಜಿತ್‌ಕುಮಾರ್‌ ಅವರು ಸಂಘಟನೆ ದೃಷ್ಟಿಯಿಂದ ಬೆಂಗಳೂರಿನಿಂದ ಶಿಕಾರಿಪುರಕ್ಕೆ ಕಳುಹಿಸಿದರು.

ವಿಶೇಷ ಕಾರಣಕ್ಕಾಗಿ ಶಿಕಾರಿಪುರಕ್ಕೆ ಬಂದಿದ್ದೇನೆ. ಈಗ ಸಿಎಂ ಆಗಿ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆ ಆಗಬಾರದು. ಯಾವುದೇ ಸಾಧನೆ ಮಾಡಬೇಕಾದರೂ ದೃಢ ನಂಬಿಕೆ ಇದ್ದರೆ ಸಾಕು. ಹೋರಾಟದ ಮೂಲಕ ಈ ಸ್ಥಿತಿಗೆ ಬಂದಿದ್ದೇನೆ ಎಂದರು.

ತಪ್ಪು ಹೆಜ್ಜೆ ಇಡದೇ ಎರಡೂ ಕಾಲು ವರ್ಷ ರಾಜ್ಯದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ಮುಂದೆ ಬರುವವರಿಗೆ ಕೆಲಸ ಮಾಡಲು ಏನು ಇರಬಾರದು. ದೊಡ್ಡ ಕೈಗಾರಿಕೆಗಳು  ಬರಬೇಕು. ಉದ್ಯೋಗ ಸಿಗಬೇಕು. ಅಪೇಕ್ಷೆಯಂತೆ ಕೆಲಸ ಮಾಡುವೆ. ಮಂತ್ರಿ ಮಂಡಲದಿಂದ ಪ್ರಾಮಾಣಿಕ ಪ್ರಯತ್ನ ಮಾಡುವೆ. ಯಾರು ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳದೆ ತಲೆ ಬಾಗದೇ ಮುಂದೆ ನಡೆಯಬೇಕು ಎಂದರು.

ನೊಂದಾಗ ಸಾಂತ್ವನ ನೀಡಿದ್ದೀರಿ. ತಲೆ ಒಡೆದಾಗ ಬದುಕಿದರೆ ಕುಟುಂಬಕ್ಕಲ್ಲ ಸಮಾಜಕ್ಕಾಗಿ ಬದುಕುವ ಸಂಕಲ್ಪ ಮಾಡಿದ್ದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. ಅನೇಕ ಹಿರಿಯ ಸಹಕಾರದಿಂದ ಬಿಜೆಪಿ ದೊಡ್ಡದಾಗಿ ಬೆಳೆದು ನಿಂತಿದೆ. ಮುಂದಿನ ವಿಧಾನಸಭೆಯಲ್ಲಿ ಸ್ವಂತ ಬಲದ ಮೇಲೆ ಅಧಿ ಕಾರಕ್ಕೆ ಬರುತ್ತೇವೆ. ಮಹಿಳೆಯರಿಗೆ ಸ್ವಾಭಿಮಾನದ ಬದುಕು, ಪರಿಶಿಷ್ಟರಿಗೆ ಉತ್ತಮ ಬದುಕು ಕಲ್ಪಿಸಲಾಗುವುದು ಎಂದರು.

ಕೋವಿಡ್‌ ಕಾರಣಕ್ಕೆ ತೆರಿಗೆ ಸಂಗ್ರಹ ಆಗಿರಲಿಲ್ಲ. ಸಾಲ ಮಾಡಿ ಕೆಲಸ ಮಾಡಿದ್ದೇವೆ. ಎಂಟರಂದು ಬಜೆಟ್‌ ಮಂಡನೆ ಮಾಡುವೆ. ನೂರಾರು ಕನಸುಗಳಿವೆ. ದೇವರ ಇಚ್ಛೆ ಇದ್ದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ  ಮಾಡೋಣ ಎಂದು ಭಾವನಾತ್ಮಕವಾಗಿ ಮಾತನಾಡಿದರು.

ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ಯಡಿಯೂರಪ್ಪ ಅವರ ಜೀವನದಲ್ಲಿ ಅವರಿಗೆ ಗೊತ್ತಿಲ್ಲದೆ ಅದೆಷ್ಟೋ ಘಟನೆಗಳು ನಡೆದಿವೆ. ಯಡಿಯೂರಪ್ಪ ಹಾಗೂ ನಾವೆಲ್ಲರೂ ಜನಸಂಘದಿಂದ ಬಂದವರು. ನಾವು ದೊಡ್ಡ ದೊಡ್ಡ ಘೋಷಣೆಗಳನ್ನು ಕೂಗಿದವರು. ನಾವು ರಾಷ್ಟ್ರೀಯ ವಿಚಾರಗಳನ್ನಿಟ್ಟುಕೊಂಡು ಹೊರಟಾಗ ಯಡಿಯೂರಪ್ಪ ರಾಷ್ಟ್ರೀಯ ವಿಚಾರ, ರೈತ, ಕಾರ್ಮಿಕ ಹೀಗೆ ಎಲ್ಲ ವಿಚಾರಗಳ ಬಗ್ಗೆ ಹೋರಾಟ ಆರಂಭಿಸಿದ್ದರು.

ಯಡಿಯೂರಪ್ಪ ಅವರಿಗೆ ಸವಾಲುಗಳನ್ನು ಎದುರಿಸುವುದು ಎಂದರೆ ಖುಷಿ. ರಾಮ ಮಂದಿರ ಹೋರಾಟಕ್ಕೆ ಅಯೋಧ್ಯೆಗೆ ಹೋದಾಗ ಪೊಲೀಸರು ನಮ್ಮನ್ನು ಬಂ ಧಿಸಿ ಚಿತ್ರಕೂಟ ಕಾಡಿನಲ್ಲಿ ಬಿಟ್ಟಿದ್ದರು.

ಊಟ ನೀರು ಇಲ್ಲದೆ ಒಂದು ರಾತ್ರಿ ನಾವು ಚಿತ್ರಕೂಟ ಕಾಡಿನಲ್ಲಿ ಕಳೆದಿದ್ದೆವು. ಶ್ರೀನಗರದಲ್ಲಿ ತ್ರಿರಂಗ ಧ್ವಜ ಹಾರಿಸಲು ಯಡಿಯೂರಪ್ಪ ಅವರು ವಿಮಾನದಲ್ಲಿ ತೆರಳಿದ್ದರು. ಆದರೆ ಅಲ್ಲಿಂದ ಅವರು ಬದುಕಿಬರುತ್ತಾರೆ ಎಂಬ ನಂಬಿಕೆ ಇರಲಿಲ್ಲ. ಶ್ರೀನಗರದಲ್ಲಿ ತಿರಂಗಾ ಧ್ವಜ ಹಾರಿಸಿ ಬಂದ ಗಂಡು ಯಡಿಯೂರಪ್ಪ. ತನ್ನ ಸ್ವಂತ ಜೀವನಕ್ಕಿಂತ ಜನರಿಗಾಗಿ ಯಡಿಯೂರಪ್ಪ ಸಮಯ ನೀಡಿದ್ದೇ ಹೆಚ್ಚು ಎಂದು ಬಣ್ಣಿಸಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ರಾಜ್ಯದಲ್ಲಿ ತಾಯಿಯ ಪ್ರೀತಿ ಹಾಗೂ ತಂದೆಯ ಭದ್ರತೆ ನೀಡಿದ್ದಾರೆ. ಪುರಸಭೆ ಸದಸ್ಯನಾಗಿದ್ದ ನನಗೆ ಸಂಸತ್‌ ಸದಸ್ಯನಾಗುವ ಮಟ್ಟಿಗೆ ಆಯ್ಕೆ ಮಾಡಿದ ಎಲ್ಲರಿಗೆ ಧನ್ಯವಾದಗಳು. ಅವರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಶಿವಮೊಗ್ಗಕ್ಕೆ ಶಿಕ್ಷಣ, ವಾಣಿಜ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿರಲಿಲ್ಲ. ಹೀಗಿರುವಾಗ, ಅಭಿವೃದ್ಧಿ ಮಾಡಿದ್ದಾರೆ. ಪ್ರವಾಸೋದ್ಯಮ, ಕೃಷಿ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಶಕೆ ಆರಂಭಿಸಿದ್ದಾರೆ. ಗಾಮೆಂìಟ್ಸ್‌ ಕೈಗಾರಿಕೆ ಆರಂಭಿಸಿದ್ದಾರೆ.

15 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಸಂಕಲ್ಪದಿಂದ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಶಿವಮೊಗ್ಗ ಕೂಡ ಎರಡನೇ ಮೂರನೇ ಸ್ಥಾನದಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಳೆ ಜೈಲು ಆವರಣದಲ್ಲಿ ಸ್ವತಂತ್ರ ಪಾರ್ಕ್‌ ಮೊದಲನೇ ಹಂತ ಜನಾರ್ಪಣೆ ಆಗಿದೆ ಎಂದರು.

ಆರ್‌ಎಸ್‌ಎಸ್‌ ಹಿರಿಯ ಮುಖಂಡ ಪಟ್ಟಾಭಿರಾಮ್‌ ಮಾತನಾಡಿ, ಯಡಿಯೂರಪ್ಪ ಅವರು ಗುರುತಿಸಿದ್ದು ಆರ್‌.ಎಸ್‌.ಎಸ್‌ ಎಂದು ಹೇಳಲು ಹೆಮ್ಮೆ ಆಗುತ್ತದೆ. ಎಲ್ಲರಿಗೂ ಬೆಳೆಸಿದೆ. ಆದರೆ, ಎಲ್ಲರೂ ಬೆಳೆದಿದ್ದಾರೆ ಎಂದಂತಿಲ್ಲ. ಆದರೆ ಯಡಿಯೂರಪ್ಪ ಅವರಲ್ಲಿ ಬೆಳೆಯುವ ಗುಣಗಳಿದ್ದವು. ಅದಕ್ಕಾಗಿ ಸಿದ್ಧಿಯ ಮೂಲಕ ಸಾಧನೆ ಮಾಡಿದ್ದಾರೆ. ಸಂಘದ ಅಪೇಕ್ಷೆಗೆ ಅನುಗುಣವಾಗಿ ಬೆಳೆದು ನಿಂತಿದ್ದಾರೆ. ಎಲ್ಲ ಏಳು ಬೀಳುಗಳನ್ನು ಸಂಘ ಪ್ರಶ್ನಿಸಿಲ್ಲ. ಅವರ ರಾಜಕೀಯ ಬ್ರೇಕಿಂಗ್‌ ಪಾಯಿಂಟ್‌ ಆಗಿದ್ದು, ಮತ್ತೂರಿನಲ್ಲಿ. ರಾಜ್ಯಾಧ್ಯಕ್ಷರಾಗಿ ಬೆಳೆದಿದ್ದಾರೆ. ಸಂಘ, ರಾಷ್ಟ್ರ, ಕುಟುಂಬಕ್ಕೆ ಒಳ್ಳೆದಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌. ರುದ್ರೇಗೌಡ ಮಾತನಾಡಿ, ಐವತ್ತು ವರ್ಷಗಳ ಸಾರ್ಥಕ ಬದುಕು ಸಾಗಿಸಿದ್ದಾರೆ. ಬದುಕಿನುದ್ದಕ್ಕೂ ಸಾಕಷ್ಟು ಕಷ್ಟಗಳನ್ನು ಯಡಿಯೂರಪ್ಪ ಅವರು ಕಂಡಿದ್ದಾರೆ. ಅವರ ಧಾರಾಳತೆ, ಸರಳತೆ ಹಾಗೂ ಇನ್ನೊಬ್ಬರನ್ನು ದೂಷಿಸದೆ ಇರುವ ಗುಣದಿಂದಾಗಿಯೇ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದರು. ದೇವರು ಯಡಿಯೂರಪ್ಪ ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಸಚಿವ ಬೈರತಿ ಬಸವರಾಜ್‌ ಪ್ರಾರ್ಥಿಸಿದರು.

ಡಿ.ಎಚ್‌.ಶಂಕರಮೂರ್ತಿ, ಭೈರತಿ ಬಸವರಾಜ್‌, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್‌. ರುದ್ರೇಗೌಡ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಅಶೋಕ್‌ ನಾಯ್ಕ, ಆಯನೂರು ಮಂಜುನಾಥ, ಸುಕುಮಾರ ಶೆಟ್ರಾ, ಭಾರತಿ ಶೆಟ್ಟಿ, ಪಟ್ಟಾಭಿರಾಮ್‌, ಜ್ಯೋತಿ ಪ್ರಕಾಶ್‌, ಬಿ.ವೈ. ವಿಜಯೇಂದ್ರ, ನಟ ಜಗ್ಗೇಶ್‌, ಕೋಮಲ್‌, ಶ್ರುತಿ, ತಾರಾ, ಕೆ.ಕಲ್ಯಾಣ್‌, ಡಿ.ಎಸ್‌.ಅರುಣ್‌, ಮೇಯರ್‌ ಸುವರ್ಣ ಶಂಕರ್‌ ಇತರರಿದ್ದರು.

ಸುನಿಲ್‌ ಪುರಾಣಿಕ್‌ ನಿರ್ದೇಶನದ ಬಿಎಸ್‌ ವೈ ಸಾಧನೆಗಳ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ನಂತರ ಗಾಯಕ ವಿಜಯ್‌ ಪ್ರಕಾಶ್‌ ಸಂಗೀತ ಸಂಯೋಜಿಸಿ, ಸಾಹಿತ್ಯ ರಚನೆ ಮಾಡಿದ ಹಾಡನ್ನು ಸಿಎಂ ಎದುರು ಹಾಡಿದರು. ಕೆ.ಪ್ರಸನ್ನಕುಮಾರ್‌ ಬರೆದಿರುವ “ರಾಜಕಾರಣದ ತ್ರಿವಿಕ್ರಮ’ ಪುಸ್ತಕವನ್ನು ಡಿ.ಎಚ್‌.ಶಂಕರಮೂರ್ತಿ ಬಿಡುಗಡೆ ಮಾಡಿದರು. ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.