ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ: ಮಧು
Team Udayavani, Jul 21, 2017, 12:37 PM IST
ಶಿಕಾರಿಪುರ: ಶಿಕಾರಿಪುರದ ಜನ ತುಂಬಾ ಪ್ರಭಾವಿ ಜನಗಳು. ಅವರು ಮನಸ್ಸು ಮಾಡಿದರೆ ಶಿಕಾರಿಪುರದಲ್ಲಿ ಯಡಿಯೂರಪ್ಪನವರನ್ನು ಸೋಲಿಸಬಹುದು. 35 ವರ್ಷದ ಅವರ ರಾಜಕಾರಣ ಈಗ ಕೊನೆಯಾಗುವ ಸಮಯ ಬಂದಿದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮಧು ಯಾಸ್ಕಿ ಗೌಡ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್
ಕೇಂದ್ರದಲ್ಲಿ ಅಧಿ ಕಾರ ಕಳೆದುಕೊಂಡಾಗ ಅದಕ್ಕೆ ಪುನರ್ಜನ್ಮ ನೀಡಿದ್ದು ಕರ್ನಾಟಕ. ಈ ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಲೆಯೂ ಇಲ್ಲ. ಇಲ್ಲಿ ಎನಿದ್ದರೂ ಕಾಂಗ್ರೆಸ್‌ನ ಅಲೆ ಮಾತ್ರ. ಬೂತ್ ಮಟ್ಟದಲ್ಲಿ ನಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಬೇಕು. ಪಕ್ಷ ಸಂಘಟನೆಯಾಗದಿದ್ದರೆ ಪಕ್ಷಕ್ಕೆ ಶಕ್ತಿ ಬರುವುದಿಲ್ಲ. ಈ ಬಾರಿ ಶಿಕಾರಿಪುರದ ಜನತೆ ಯಡಿಯೂರಪ್ಪನವರನ್ನು ಸೋಲಿಸಿ ದಾಖಲೆ
ನಿರ್ಮಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅತ್ಯಂತ ಭ್ರಷ್ಟ
ರಾಜಕಾರಣಿಯಾಗಿದ್ದು ಜೈಲಿಗೆ ಹೋಗಿ ಬಂದದ್ದು ಇತಿಹಾಸ. ಈಗಲೂ ನಮ್ಮ ಸರ್ಕಾರ ಮನಸ್ಸು ಮಾಡಿದರೆ 24 ಗಂಟೆಗಳ ಒಳಗೆ
ಅವರನ್ನು ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಜೈಲಿಗೆ ಕಳಿಸಬಹುದು. ಮುಖ್ಯಮಂತ್ರಿಗಳು ಈ ಬಾರಿ ಚುನಾವಣಿಯಲ್ಲಿ ಕಾಂಗ್ರೆಸ್
ಶಾಸಕರನ್ನು ಆಯ್ಕೆ ಮಾಡಲು ಸಂಕಲ್ಪಮಾಡಿದ್ದು ಅದಕ್ಕೆ ಶಿಕಾರಿಪುರದ ಜನತೆ ಕೈ ಜೋಡಿಸಿ ಯಡಿಯೂರಪ್ಪನವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ ನಮ್ಮ ರಾಜ್ಯ ಸರ್ಕಾರದ ಹಲವು ಜನಪರ
ಯೋಜನೆಗಳಿಗೆ ಅನುದಾನ ನೀಡಿದ್ದು ಶಿಕಾರಿಪುರದ ಶಾಸಕರು ತಮ್ಮ ತಂದೆಯವರ ಅಧಿಕಾರದ ಅವಧಿಯಲ್ಲಿನ ಜಾರಿಯಾದ
ಯೋಜನೆಗಳು ಎಂದು ಸುಳ್ಳು ಹೇಳುತ್ತಿರುವುದು ಸರಿಯಲ್ಲ ಎಂದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮಂಜುನಾಥ ಭಂಡಾರಿ, ಜಿಪಂ ಸದಸ್ಯ ನರಸಿಂಗ ನಾಯ್ಕ, ಉಳ್ಳಿ ದರ್ಶನ್.
ಮಹೇಶ್ ಹುಲ್ಮಾರ್, ಭಂಡಾರಿ ಮಾಲತೇಶ್, ಜಿನಳ್ಳಿ ದೊಡ್ಡಪ್ಪ, ಮಾರವಳ್ಳಿ ಉಮೇಶ್, ಜಿದ್ದು ಮಂಜುನಾಥ ಮುಂತಾದ ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.