ವಿನ್ಯಾಸಕಾರರು-ನೇಕಾರರ ಮಧ್ಯೆ ಸಮನ್ವಯ ಅಗತ್ಯ  

ಚರಕ ಉತ್ಸವದಲ್ಲಿ ಕೊಡು- ಕೊಳ್ಳುವವರ ಸಮಾವೇಶಕ್ಕೆ ಚಾಲನೆ ನೀಡಿ ಪವಿತ್ರ ಮುದ್ದಯ್ಯ ಪ್ರತಿಪಾದನೆ

Team Udayavani, Mar 28, 2022, 5:13 PM IST

sagara

ಸಾಗರ: ಕೈಮಗ್ಗ ಸೇರಿದಂತೆ ಎಲ್ಲ ಕರಕುಶಲಕರ್ಮಿಗಳು ಮಾರುಕಟ್ಟೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಸವಾಲುಗಳು ಹೆಚ್ಚಾಗಿವೆ. ಗ್ರಾಮೀಣ ಕೈಗಾರಿಕೆಯಾಗಿರುವ ಕೈಮಗ್ಗ ನೇಕಾರಿಕೆ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯಾ ಗಬೇಕಾದರೆ ಈ ಕ್ಷೇತ್ರದಲ್ಲಿಯ ವಿನ್ಯಾಸಕಾರರು ಹಾಗೂ ನೇಕಾರರು ಒಟ್ಟಿಗೆ ಸೇರಿ ಕೆಲಸ ಮಾಡುವ ಸಮನ್ವಯದ ಅಗತ್ಯವಿದೆ ಎಂದು ಬೆಂಗಳೂರಿನ ವಸ್ತ್ರ ವಿನ್ಯಾಸಕರಾದ ಪವಿತ್ರ ಮುದ್ದಯ್ಯ ಪ್ರತಿಪಾದಿಸಿದರು.

ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಯದಲ್ಲಿ ಭೀಮನಕೋಣೆ ಕವಿಕಾವ್ಯ ಟ್ರಸ್ಟ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ನಡೆದ ಎರಡು ದಿನಗಳ ಚರಕ ಉತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೊಡು- ಕೊಳ್ಳುವವರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೈಮಗ್ಗ ಕ್ಷೇತ್ರದಲ್ಲಿಯ ನಮ್ಮ ನಡುವಿನ ಬಹುತೇಕ ವಿನ್ಯಾಸಕಾರರು ಸಾಂಪ್ರದಾಯಿಕ ನೇಕಾರರಿಂದಲೇ ವಿನ್ಯಾಸದ ವಿವಿಧ ಬಗೆಗಳನ್ನು ಕಲಿತಿರುತ್ತಾರೆ. ವಿನ್ಯಾಸ ಎಂಬುದು ಕೇವಲ ನಮ್ಮ ತೃಪ್ತಿಗೆ ಎನ್ನುವಂತಾಗಬಾರದು. ಬದಲಿಗೆ ಆಯಾ ಕಾಲದ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ಜೊತೆಗೆ ಆರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳುವ ಮಾದರಿಯನ್ನು ಅನುಸರಿಸಬೇಕು ಎಂದರು.

ಕೋವಿಡ್‌ನಿಂದಾಗಿ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ನೇಕಾರರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹೊಸ ಯೋಜನೆಯ ಮೂಲಕ ಅವರ ನೆರವಿಗೆ ನಿಲ್ಲಬೇಕಿತ್ತು. ಆದರೆ ಕೋವಿಡ್‌ ಪರಿಹಾರ ರೂಪದಲ್ಲಿ ಒಬ್ಬ ನೇಕಾರನಿಗೆ ವರ್ಷಕ್ಕೆ ಕೇವಲ 2 ಸಾವಿರ ರೂ. ಪರಿಹಾರ ನೀಡಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಾಂಪ್ರದಾಯಿಕ ವಿಧಾನದಲ್ಲಿ ವಸ್ತುಗಳನ್ನು ತಯಾರಿಸುವ ಗ್ರಾಮೀಣ ಶ್ರಮಿಕರನ್ನು ತರಬೇತುಗೊಳಿಸುವ ಕಾರ್ಯ ಆಗಬೇಕು. ಆಧುನಿಕ ತಾಂತ್ರಿಕ ಮಾಹಿತಿ ಇರುವವರು ಗ್ರಾಮೀಣ ಕರಕುಶಲಕರ್ಮಿಗಳ ಜತೆ ಬೆರೆತು ಕೆಲಸ ಮಾಡಬೇಕು. ಚರಕ ಅಂತಹ ಅವಕಾಶ ಸೃಷ್ಟಿಸುತ್ತಿದೆ. ಕೊಡು- ಕೊಳ್ಳುವವರ ಸಮಾವೇಶದ ಮೂಲಕ ಅದು ಸಾಧ್ಯವಾಗುತ್ತದೆ ಎಂದರು.

ವಿಜಯಪುರದ ಬಂಜಾರ ಕಸೂತಿ ಒಕ್ಕೂಟದ ನಿರ್ದೇಶಕಿ ಆಶಾ ಪಾಟೀಲ್‌ ಮಾತನಾಡಿ, ಕೈಮಗ್ಗ ನಮ್ಮ ನಡುವಿನ ಪ್ರಮುಖ ಕರಕುಶಲ ಕಲೆ ಆಗಿದೆ. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಅಪ್ಪಟ ದೇಸಿತನದ ಈ ಕಲೆಗೆ ಅಗತ್ಯವಿರುವಷ್ಟು ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಎದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.

ನಮ್ಮ ಯೋಚನಾ ಲಹರಿಯಲ್ಲಿ ಆಧುನಿಕತೆ ಇರಬೇಕು. ಆದರೆ ಕೇವಲ ಉಡುಗೆ ತೊಡುಗೆ, ಭಾಷೆ, ಆಹಾರ ಸೇವನೆಯಲ್ಲಿ ಆಧುನಿಕತೆಯನ್ನು ಅನುಸರಿಸಿದರೆ ಸಾಲದು. ಇಂತಹ ಸಂಸ್ಕೃತಿ ನಮ್ಮ ಮಾನವೀಯ ಸಂಬಂಧಗಳನ್ನು ದೂರ ಮಾಡುತ್ತದೆ. ಕೈಮಗ್ಗ ನೇಕಾರಿಕೆಯಂತಹ ಈ ನೆಲದ ಕಲೆಗೆ ಸಂಬಂಧಗಳನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ನೇಕಾರರಾದ ಸಂಗಪ್ಪ ಮಂಟೆ ಮಾತನಾಡಿ, ನೇಕಾರರು ಉಳಿದರೆ ಮಾತ್ರ ಕೈಮಗ್ಗ ಕ್ಷೇತ್ರ ಜೀವಂತವಾಗಿರಲು ಸಾಧ್ಯ. ಒಂದು ಮಗು ಮೃತಪಟ್ಟರೆ ಮತ್ತೂಂದು ಮಗು ಪಡೆಯಬಹುದು. ಆದರೆ ತಾಯಿಯೇ ಮೃತಪಟ್ಟರೆ ಮಗುವನ್ನು ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಬಂಜಾರ ಕಸೂತಿ ಒಕ್ಕೂಟದ ಸೀಮಾ, ತುಲಾ ಸಂಸ್ಥೆಯ ಸುಷ್ಮಿತಾ, ಗುಜರಾತ್‌ನ ವಾರ್ಧಾದ ಮಗನ್‌ ಸಂಗ್ರಹಾಲಯದ ಸೋನು ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌, ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್‌, ಇಂಧುಕುಮಾರ್‌, ಮಹಾಲಕ್ಷ್ಮಿ, ಪ್ರಸನ್ನ ಇದ್ದರು. ಪದ್ಮಶ್ರೀ ನಿರೂಪಿಸಿದರು. ಚರಕ ಸಂಸ್ಥೆಯ ಉಡುಪುಗಳನ್ನು ಧರಿಸಿದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ನಿರಾಮಯ ಕಲಾತಂಡದ ರಾಮಚಂದ್ರ ಹೆಗಡೆ ಕೊಂಡದಕುಳಿ, ರಾಮಕೃಷ್ಣ ಹಿಲ್ಲೂರು, ಪ್ರಸನ್ನ ಶೆಟ್ಟಿಗಾರ್‌, ಅಶ್ವಿ‌ನಿ ಮುಂತಾದ ಕಲಾವಿದರಿಂದ ‘ ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.