ಲಿಂಗನಮಕ್ಕಿ ಭರ್ತಿಗೆ ಕ್ಷಣಗಣನೆ
•ಒಂದೆಡೆ ಹಬ್ಬದ ತಯಾರಿ ನಡೆದರೆ ಇನ್ನೊಂದೆಡೆ ಜನರಿಗೆ ಪ್ರವಾಹದ್ದೇ ಚಿಂತೆ
Team Udayavani, Sep 2, 2019, 1:02 PM IST
ಹೊನ್ನಾವರ: ಹಡಿನಬಾಳ ಹೊಳೆಯಲ್ಲಿ ಕೆಂಪು ನೀರಿನ ರುದ್ರ ನರ್ತನ
ಹೊನ್ನಾವರ: ತಾಲೂಕಿನ ಹಡಿನಬಾಳ, ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದ್ದು ಮಳೆಗಾಲದ ಆರಂಭದಲ್ಲಿ ಕಾಣುತ್ತಿರುವ ಕೆಂಪು ನೀರು ಇನ್ನೂ ಭೀಕರವಾಗಿ ಕಾಣುತ್ತಿದ್ದು ಗುಡ್ಡದ ಮಣ್ಣನ್ನು ಕಿತ್ತು ತರುತ್ತಿದೆ. ಲಿಂಗನಮಕ್ಕಿ ಅಣೆಕಟ್ಟು ಭರ್ತಿಯ ಹಂತ ತಲುಪಿದ್ದು, ನೀರು ಬಿಡಲು ಕ್ಷಣಗಣನೆ ಆರಂಭವಾಗಿದೆ.
ಮುಂಜಾನೆ 8ಕ್ಕೆ ಲಿಂಗನಮಕ್ಕಿ ಜಲಮಟ್ಟ 1817.80ಕ್ಕೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಹದವಾದ ಮಳೆ ಬೀಳುತ್ತಿರುವುದರಿಂದ 1818 ತಲುಪಿದ ಕೂಡಲೇ ಸ್ವಲ್ಪಸ್ವಲ್ಪ ನೀರು ಬಿಡುವ ಸಿದ್ಧತೆಯಲ್ಲಿ ಕೆಪಿಸಿ ಇದೆ. ಮಳೆ ಜೋರಾದರೆ ಹೆಚ್ಚು ನೀರು ಬಿಟ್ಟರೆ ಸಮಸ್ಯೆ ಆಗುವುದರಿಂದ ಗರಿಷ್ಠಮಟ್ಟಕ್ಕೆ ಒಂದು ಅಡಿ ಮೊದಲು ಸ್ವಲ್ಪ ನೀರು ಬಿಡುವ ಸಂಭವವಿದೆ. 10-20 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ ಅದು ಅರಿವಿಗೆ ಬರದೆ ಹರಿದು ಹೋಗಲಿದೆ. ಹೆಚ್ಚು ನೀರು ಬಿಟ್ಟು ಸಮಸ್ಯೆ ಮಾಡುವ ತೊಂದರೆಯನ್ನು ಕೆಪಿಸಿ ಖಂಡಿತ ತೆಗೆದುಕೊಳ್ಳಲಿಕ್ಕಿಲ್ಲ. ಹಿಂದಿನ ಅನುಭವದಿಂದ ಅದು ಪಾಠ ಕಲಿತಿದೆ. ಇಂದು ಮುಂಜಾನೆ ಒಳಹರಿವು 18,000 ಕ್ಯೂಸೆಕ್ ಇದೆ, ಹೊರಹರಿವು ಇಲ್ಲ. ಇತ್ತ ಗೇರುಸೊಪ್ಪ ಅಣೆಕಟ್ಟು ವಿದ್ಯುತ್ ಉತ್ಪಾದನೆ ಮುಂದುವರಿಸಿದ್ದು ಲಿಂಗನಮಕ್ಕಿ ನೀರನ್ನು ಸ್ವೀಕರಿಸಲು ಸಿದ್ಧವಾಗಿದ್ದು ಇದು ಸಮತೋಲನ ಅಣೆಕಟ್ಟು ಆಗಿರುವುದರಿಂದ 55 ಮೀಟರ್ ಎತ್ತರ ದಾಟುವ ಮೊದಲು ನೀರು ಬಿಡಬೇಕಾಗುತ್ತದೆ. ರವಿವಾರ, ಸೋಮವಾರ ಚೌತಿಯ ರಜೆ ಮರೆತು ಕೆಪಿಸಿ ಮತ್ತು ತಾಲೂಕು ಆಡಳಿತ ನೇಮಿಸಿದ ನೋಡಲ್ ಅಧಿಕಾರಿಗಳು ನೆರೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.