2ನೇ ಅಲೆಯಲ್ಲಿ ತಾಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್
Team Udayavani, May 22, 2021, 11:52 AM IST
ಶಿವಮೊಗ್ಗ: ಹೋಂ ಐಸೋಲೇಷನ್ ನಿಂದ ಸಾಕಷ್ಟು ಸಮಸ್ಯೆಗಳು ಎದುರಾದಹಿನ್ನೆಲೆಯಲ್ಲಿ ಮತ್ತೆ ಕೋವಿಡ್ ಕೇರ್‌ಸೆಂಟರ್‌ಗಳು ಶುರುವಾಗುತ್ತಿವೆ. ಕಳೆದ ಬಾರಿ ಜಿಲ್ಲಾಮಟ್ಟದಲ್ಲಿದ್ದ ಸೆಂಟರ್‌ಗಳು ಕೋವಿಡ್ ಎರಡನೇ ಅಲೆ ಅಬ್ಬರದಿಂದ ತಾಲೂಕು ಕೇಂದ್ರಗಳಿಗೂ ವಿಸ್ತರಣೆಯಾಗಿವೆ.
ಕಳೆದ ವರ್ಷ ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್ ನೀಡಲುಅವಕಾಶ ಇಲ್ಲದ ಯಾವುದೇ ಗುಣಲಕ್ಷಣಗಳಿಲ್ಲದವರಿಗೆಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿತ್ತು.ಎರಡನೇ ಅಲೆಯಲ್ಲಿ ಹೋಂ ಐಸೋಲೇಷನ್‌ಗೊಳಪಟ್ಟವರಪ್ರಮಾಣ ಹೆಚ್ಚಾಗಿರುವುದರಿಂದ ಕೋವಿಡ್ ಕೇರ್ ಸೆಂಟರ್‌ಗಳ ಅಗತ್ಯ ಇರಲಿಲ್ಲ. ಪಾಸಿಟಿವ್ ಪ್ರಕರಣಗಳ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಕಂಡು ಬಂದ ಪರಿಣಾಮ, ಹೋಂ ಐಸೋಲೇಷನ್‌ನಲ್ಲಿ ಕುಟುಂಬಸ್ಥರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತೆ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗುತ್ತಿದೆ.
ಕಳೆದ ಬಾರಿ ಜಿಲ್ಲಾಮಟ್ಟದಲ್ಲಿದ್ದ ಕೋವಿಡ್ ಕೇರ್ ಸೆಂಟರ್‌ಗಳು ಈಗತಾಲೂಕು ಮಟ್ಟಕ್ಕೆ ವಿಸ್ತರಣೆಯಾಗಿವೆ.ಕಳೆದ ವರ್ಷ ಪ್ರತ್ಯೇಕ ಮಲಗುವಕೋಣೆ, ಶೌಚಾಲಯ, ವಿವಿಧಮೂಲಸೌಕರ್ಯ ಇದ್ದವರಿಗೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶನೀಡಲಾಗುತಿತ್ತು. ಈ ಬಾರಿ ಅಷ್ಟೊಂದು ಮುನ್ನೆಚ್ಚರಿಕೆ ವಹಿಸದ ಪರಿಣಾಮ ಮನೆಮಂದಿಗೆಲ್ಲ ಸೋಂಕು ಬಂದಿದೆ. ಜತೆಗೆಹೋಂ ಐಸೋಲೇಷನ್‌ಗೆ ಒಳಗಾದವರ ಮೇಲೆ ನಿಗಾ ಇಡಲು ಸ್ಥಳೀಯ ಆಡಳಿತ ವಿಫಲವಾಗಿದೆ.
ಮನೆ ಮುಂದೆ ರೆಡ್ ರಿಬ್ಬನ್‌ಬಿಟ್ಟರೆ ಬೇರೇನೂ ವ್ಯವಸ್ಥೆ ಇಲ್ಲ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿಗಾ ವಹಿಸುತ್ತಿಲ್ಲ. ಸೋಂಕಿತರ ಮನೆಯವರು ವಿವಿಧ ಕಾರಣಗಳಿಗೆ ಊರಲ್ಲೆಲ್ಲ ತಿರುಗಾಡುತ್ತಿದ್ದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕೊನೆ ಕ್ಷಣದಲ್ಲಿಎಚ್ಚರಗೊಂಡಿದ್ದು ಹೋಂ ಐಸೋಲೇಷನ್‌ಗೆ ಕೊಡದೆ ಕೋವಿಡ್ ಕೇರ್ ಸೆಂಟರ್‌ಗೆಆಸಕ್ತಿ ವಹಿಸಿದೆ. ಪ್ರಸ್ತುತ 6841 ಸಕ್ರಿಯಪ್ರಕರಣಗಳಲ್ಲಿ 3960 ಮಂದಿ ಹೋಂಐಸೋಲೇಷನ್‌ನಲ್ಲಿ ಇದ್ದಾರೆ. ಹೋಂಐಸೋಲೇಷನ್‌ಗೆ ಒಳಪಟ್ಟ ಶೇ.90ರಷ್ಟು ಮನೆ ಮಂದಿಗೆಲ್ಲ ಸೋಂಕು ತಗುಲಿದೆ.
ಎಲ್ಲ ತಾಲೂಕಲ್ಲೂ ಕೇಂದ್ರ: ಎರಡನೇ ಅಲೆ ಆರಂಭದಲ್ಲಿ ಯಾವುದೇ ಕೇರ್‌ಸೆಂಟರ್ ಆರಂಭವಾಗಿರಲಿಲ್ಲ. ನಂತರಶಿವಮೊಗ್ಗದಲ್ಲಿ ಮೂರು ಕೇಂದ್ರಗಳನ್ನುತೆರೆಯಲಾಗಿತ್ತು.
ಈಗ ಶಿವಮೊಗ್ಗ ನಗರದಲ್ಲಿ ಎರಡುಸೆಂಟರ್ ಸೇರಿ ಎಲ್ಲಾ ತಾಲೂಕುಕೇಂದ್ರಗಳಲ್ಲಿ ಒಂದೊಂದು ಕೇಂದ್ರಶುರುವಾಗಿದೆ. ಇದಕ್ಕಾಗಿ ಮೊರಾರ್ಜಿಶಾಲೆಗಳನ್ನು ಬಳಸಿಕೊಳ್ಳಲಾಗಿದೆ.ಭದ್ರಾವತಿಯಲ್ಲಿ ಮತ್ತೂಂದು ಸೆಂಟರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಸಿಸಿಸಿಯಲ್ಲಿ 30ರಿಂದ 100 ಬೆಡ್ ವ್ಯವಸ್ಥೆ ಇದೆ. ಪ್ರಸ್ತುತ 559 ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯ, ವೈದ್ಯಕೀಯೇತರ,ಅಡುಗೆ ಸಿಬ್ಬಂದಿ ನೇಮಕ ಮಾಡಲಾಗಿದೆ.ಸೊರಬದಲ್ಲಿ 100 ಬೆಡ್, ಭದ್ರಾವತಿಯಲ್ಲಿ 100 ಬೆಡ್, ಶಿಕಾರಿಪುರದಲ್ಲಿ 100,ಸಾಗರ ತಾಲೂಕಿನಲ್ಲಿ 60 ಬೆಡ್ ಹಾಗೂ ಬಂದಗದ್ದೆಯಲ್ಲಿ 77 ಬೆಡ್‌ನ ಕೇರ್ ಸೆಂಟರ್ ಮಾಡಲಾಗಿದೆ.
ಕಳೆದ ಬಾರಿ 9 ಸೆಂಟರ್‌ಗಳನ್ನುತೆರೆಯಲಾಗಿದ್ದು ಯಾವುದೇ ಲಕ್ಷಣಗಳಿಲ್ಲದವ್ಯಕ್ತಿಗಳನ್ನು ಇಲ್ಲಿ ಐಸೋಲೇಷನ್‌ಮಾಡಲಾಗಿತ್ತು. ಇದರಿಂದ ಕುಟುಂಬಸ್ಥರಿಗೆ ಸೋಂಕು ತಗಲುವುದು ತಪ್ಪಿತ್ತು.
ಸೋಂಕಿತರಿಗೆ ಸಿಗಲಿದೆ ಎಲ್ಲ ಅಗತ್ಯ ಸೇವೆ :
ಕೋವಿಡ್‌ಕೇರ್ ಸೆಂಟರ್‌ನಲ್ಲಿ ಅಲ್ಪಸ್ವಲ್ಪ ಲಕ್ಷಣಗಳನ್ನು ಹೊಂದಿರುವ ಹಾಗೂ ಆರೋಗ್ಯದ ತೀವ್ರ ಸಮಸ್ಯೆ ಇರದವರಿಗೆಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುತ್ತಿದೆ. ಇಲ್ಲಿ ಅವರಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಊಟ, ತಿಂಡಿ, ಕಾಫಿ, ಟೀ,ಬೇಸಿಕ್ ಮೆಡಿಸಿನ್ ಇರುತ್ತದೆ. 10 ದಿನ ಇಲ್ಲಿಯೇ ಇರಿಸಿಕೊಂಡು ಗುಣಮುಖರಾದ ನಂತರ ಮನೆಗೆ ಕಳುಹಿಸಲಾಗುತ್ತಿದೆ.
ಮಠಗಳಿಂದಲೂ ಆರೈಕೆ ಕೇಂದ್ರ :
ಆದಿಚುಂಚನಗಿರಿ ಶಾಖಾ ಮಠ, ಹುಂಚ ಹೊಂಬುಜಜೈನ ಮಠ, ಶಿವಮೊಗ್ಗದ ಸೇವಾ ಭಾರತಿ ಟ್ರಸ್ಟ್‌ನಿಂದ ಕೇರ್ ಸೆಂಟರ್ ಆರಂಭಿಸಲಾಗಿದೆ.ಅನೇಕ ಸಂಘ-ಸಂಸ್ಥೆಗಳು ಲಕ್ಷಾಂತರ ರೂ. ಮೌಲ್ಯದಪರಿಕರಗಳನ್ನು ಕೋವಿಡ್ ಕೇರ್ ಸೆಂಟರ್ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ದಾನ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.