ಲಸಿಕೆಯಲ್ಲೂ ಪಕ್ಷಬೇಧ ಸಲ್ಲ
Team Udayavani, Jun 26, 2021, 6:16 PM IST
ಸಾಗರ: ಕೋವಿಡ್ ಪ್ರತಿಬಂಧಕ ಲಸಿಕೆ ನೀಡುವ ವಿಚಾರದಲ್ಲಿ ಮೊದಲು ಆರ್‌ಎಸ್‌ಎಸ್, ಬಿಜೆಪಿಯವರು. ನಂತರ ಇತರ ಪಕ್ಷದವರು ಎಂಬ ಧೋರಣೆಯ ಮೂಲಕ ಸಾಗರದ ಶಾಸಕರು ದೇಶದಲ್ಲಿಯೇ ಮಾದರಿ ಎನ್ನಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ವ್ಯಂಗ್ಯದ ಚಾಟಿ ಬೀಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವತಿಯಿಂದ 31 ವಾರ್ಡ್ ವ್ಯಾಪ್ತಿಯಲ್ಲಿ ಬಡಜನರಿಗೆ ಕಿಟ್ ವಿತರಣೆ ಮಾಡುವಲ್ಲಿ ಕೂಡ ಇದೇ ರೀತಿ ತಾರತಮ್ಯ ಮಾಡಲಾಗಿದೆ. ಮೊದಲು ತಮ್ಮ ಪಕ್ಷದವರಿಗೆ ಕೊಟ್ಟು ಉಳಿದಿದ್ದರೆ ಮಾತ್ರ ಇತರ ಪಕ್ಷದ ಅನುಯಾಯಿಗಳಿಗೆ ಸಿಕ್ಕಿದೆ. ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪಕ್ಷಬೇಧ ಮರೆತು ಕೆಲಸ ಮಾಡುವ ಮನಸ್ಥಿತಿ ಶಾಸಕರು ಬೆಳೆಸಿಕೊಳ್ಳದೆ ಇರುವುದು ದುರಂತದ ಸಂಗತಿ ಎಂದರು.
ರಾಜ್ಯದಲ್ಲಿರುವುದು ಕೊಲೆಗಡುಕರಸರ್ಕಾರ. ಕೊರೊನಾ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದ ಬಹುತೇಕ ಜನರು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಸಾಗರದಲ್ಲಿ ಸಹ ಕೊರೊನಾಸಂದರ್ಭದಲ್ಲಿ ಸ್ಥಳೀಯ ಶಾಸಕರು ಅಧಿಕಾರಿಗಳ ಸಭೆ ನಡೆಸಿದ್ದು ಬಿಟ್ಟರೆ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಶಾಸಕರು ಹೇಳಿದಅಂಗಡಿಯಲ್ಲಿ ಕಿಟ್‌ಗೆ ಬೇಕಾದಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಅಷ್ಟು ದೊಡ್ಡ ಮೊತ್ತದ ಹಣಕ್ಕೆ ಟೆಂಡರ್‌ಕರೆದಿಲ್ಲ. ಇಲ್ಲಿಯೂ ಶಾಸಕರು ಶೇ. 10ರ ವ್ಯವಹಾರ ನಡೆಸಿದ್ದಾರೆ. ದಿನಸಿ ಕಿಟ್ ವಿತರಣೆ ಮಾಡುವಾಗ ಸಹ ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಕೊಡಲಾಗಿದೆ ಎಂದರು.
ಇದನ್ನೂ ಓದಿ: ಧಾರವಾಡದಿಂದ ಬೆಂಗಳೂರಿಗೆ ಯಕೃತ್ತು ರವಾನೆ:ಏರ್ ಪೋರ್ಟ್ ವರೆಗೆ ಜಿರೋಟ್ರಾಫಿಕ್ ಮಾಡಿದ ಪೊಲೀಸರು
ಕ್ಷೇತ್ರವ್ಯಾಪ್ತಿಯಲ್ಲಿ ಮರಳು ಮಾಫಿಯಾಕ್ಕೆ ಬೆಂಬಲ ನೀಡುತ್ತಾ,ತಮ್ಮ ರೌಡಿಸಂ ಪಟಾಲಂ ಮೂಲಕ ಮರಳು ಲಾರಿ ಮಾಲೀಕರಿಂದ ತಿಂಗಳಿಗೆ ಇಂತಿಷ್ಟು ಕಮಿಷನ್ ಅನ್ನು ಶಾಸಕರು ಪಡೆಯುತ್ತಿದ್ದಾರೆ. ಜೂ. 5ಕ್ಕೆ ಸ್ಥಗಿತಗೊಳ್ಳಬೇಕಾದ ಮರಳುಸಾಗಾಣಿಕೆ ಜೂ.25 ಆದರೂ ಮುಂದುವರಿಯುವಲ್ಲಿ ಶಾಸಕರಕುಮ್ಮಕ್ಕು ಇದೆ. ಜಿಲ್ಲೆಯ ಸಂಸದರು ಕೂಡ ತಮ್ಮ ಟ್ರಸ್ಟ್ ಮೂಲಕ ಆಹಾರದ ಕಿಟ್ ಕೊಟ್ಟಿದ್ದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. 2007-08ರಲ್ಲಿ20 ಕೋಟಿ ರೂ. ಕಿಕ್ ಬ್ಯಾಕ್‌ನ್ನು ಚೆಕ್ ಮೂಲಕ ಟ್ರಸ್ಟ್‌ಗೆ ಪಡೆದವರು, ಅದರ ಬಡ್ಡಿಯಲ್ಲಿಯೇ ಆರಾಮವಾಗಿ ಕಿಟ್‌ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ . ಆರ್.ಜಯಂತ್ ಮಾತನಾಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಗ್ಗೆ ರಾಜ್ಯದ ಆರೋಗ್ಯ ಸಚಿವರೇ ಅಪಸ್ವರ ಎತ್ತಿದ್ದಾರೆ. ಐಸಿಯುಗೆ ದಾಖಲಾದ ಶೇ. 50ರಷ್ಟು ರೋಗಿಗಳು ಮೃತಪಟ್ಟಿದ್ದಾರೆ. ಮೆಗ್ಗಾನ್ ವೈದ್ಯರು ಸಹಿ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಾರೆ ಎಂದು ಆರೋಗ್ಯ ಸಚಿವರೇ ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ಆರೈಕೆ ಸಿಕ್ಕಿದ್ದರೆ ನೂರಾರು ಕೊರೊನಾ ಸೋಂಕಿತರ ಪ್ರಾಣ ಉಳಿಯುತ್ತಿತ್ತು. ಮೆಗ್ಗಾನ್‌ನಲ್ಲಿ ನಡೆದ ಘಟನೆ ಚಾಮರಾಜನಗರಕ್ಕಿಂತ ಘೋರವಾದದ್ದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಾವಿಗೆ ಹೊಣೆಗಾರಿಕೆಯನ್ನು ನಿಗದಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರ ಬ್ಲಾಕ್ ಅಧ್ಯಕ್ಷ ಐ.ಎನ್. ಸುರೇಶಬಾಬು ಮಾತನಾಡಿದರು. ಗೋಷ್ಠಿಯಲ್ಲಿ ಪ್ರಮುಖರಾದ ಅನಿತಾಕುಮಾರಿ, ಮಧುಮಾಲತಿ, ತಸ್ರಿಫ್ ಇಬ್ರಾಹಿಂ, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ತುಕಾರಾಮ್ ಬಿ. ಶಿರವಾಳ ಇದ್ದರು.
ಮೆಗ್ಗಾನ್ ಪ್ರಕರಣದಹಿನ್ನೆಲೆಯಲ್ಲಿ ಆರೈಕೆ, ಆಕ್ಸಿಜನ್, ಲಸಿಕೆ ಸಮರ್ಪಕವಾ ಗಿದ್ದರೆ ಶೇ. 90ರಷ್ಟು ಜನರನ್ನು ರಕ್ಷಿಸಬಹು ದಿತ್ತು ಎಂಬ ರಾಹುಲ್ ಗಾಂಧಿಯವರ ಮಾತು ಸತ್ಯ ಎಂಬುದು ಗೊತ್ತಾಗುತ್ತದೆ.- ಬಿ.ಆರ್. ಜಯಂತ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸರ್ಕಾರ ಹಠ ಮಾಡುತ್ತಿದೆ. ಕೊನೆಪಕ್ಷ ಎಸ್ ಎಸ್‌ಎಲ್‌ಸಿ ಮಕ್ಕಳಿಗೆ ಹಾಗೂಶಿಕ್ಷಕರಿಗೆ ಲಸಿಕೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ಪೋಷಕರನ್ನು ತೀವ್ರ ಆತಂಕಕ್ಕೆಈಡು ಮಾಡಿದೆ.-ಐ.ಎನ್. ಸುರೇಶ್‌ಬಾಬು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.