ಲಸಿಕೆ ನೀಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ
Team Udayavani, Jun 5, 2021, 2:59 PM IST
ಶಿವಮೊಗ್ಗ: ದೇಶದ ಜನರಿಗೆ ಲಸಿಕೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸದೆ ಲಸಿಕೆ ನೀಡದೆ ಜನರಿಗೆ ಸಂಪೂರ್ಣ ಮೋಸ ಮಾಡಿದೆ. ಸ್ವಂತ ಲಾಭಕ್ಕಾಗಿ ದೇಶದ ಜನರನ್ನು ಬಲಿ ಕೊಟ್ಟಿದ್ದಾರೆ.ಇದುವರೆಗೂ ಶೇ.3.17ರಷ್ಟು ಮಾತ್ರ ಲಸಿಕೆನೀಡಲಾಗಿದೆ. ಮೊದಲ ಹಂತದಲ್ಲಿ 20 ಕೋಟಿಜನರಿಗೆ 2ನೇ ಹಂತದಲ್ಲಿ 4.37ಕೋಟಿ ಜನರಿಗೆಮಾತ್ರ ಲಸಿಕೆ ನೀಡಲಾಗಿದೆ. 140ಕೋಟಿ ಇರುವಭಾರತದಂತಹ ದೇಶಕ್ಕೆ ಇದು ಸಾಕಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ 8 ಕೋಟಿ ಲಸಿಕೆಯನ್ನು ಹೊರದೇಶಗಳಿಗೆ ನೀಡಿತ್ತು. ದೇಶದ ಎಲ್ಲಾ ಜನರಿಗೂ ಉಚಿತವಾಗಿಯೇ ಲಸಿಕೆ ನೀಡಬೇಕು. ಆದರೆ ಭಾರತ ಸರ್ಕಾರ ಮಾತ್ರ ಲಸಿಕೆವಿಷಯದಲ್ಲಿ ನಿರ್ಲಕ್ಷé ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ ಲಸಿಕೆ ಹಾಕಿಸಲು ಒತ್ತಾಯಿಸಿ ತನ್ನ ಹೋರಾಟವನ್ನು ಮುಂದುವರಿಸುತ್ತಿದೆ. ಎಲ್ಲಾ ವಿಧಾನಸಭಾ ವ್ಯಾಪ್ತಿಯಲ್ಲೂ ಕೂಡ ಜಿಲ್ಲಾಧಿಕಾರಿಗಳಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಲಸಿಕೆಗಾಗಿ ಕೇಂದ್ರ ಸರ್ಕಾರ 35 ಸಾವಿರ ಕೋಟಿ ನಿಗದಿಪಡಿಸಿತ್ತು. ಆದರೆ ಈ ಹಣ ಎಲ್ಲಿ ಹೋಯಿತು ಎಂದು ಗೊತ್ತಿಲ್ಲ. ಮೋದಿಯವರ ಜನಪ್ರಿಯತೆ ದಿನ ದಿನಕ್ಕೆ ಪಾತಳಕ್ಕೆಕುಸಿಯುವುದಂತು ನಿಜವಾಗಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲಾಡಳಿತ ಸಾವು ಮತ್ತು ಸೋಂಕಿತರ ವಿಷಯದಲ್ಲಿ ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿದೆ. ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದೆ ಮತ್ತು ಖಾಸಗಿ ಆಸ್ಪತ್ರೆಗಳ ಪರವಾಗಿ ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂಬ ನಿಯಮವನ್ನೇ ಖಾಸಗಿ ಆಸ್ಪತ್ರೆಗಳು ಮೀರಿವೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾರಂಗೇಗೌಡ, ಮುಖಂಡರಾದ ಎಸ್.ಪಿ.ದಿನೇಶ್,ಶಬ್ಬೀರ್‌ಖಾನ್, ವಿಶ್ವನಾಥಕಾಶಿ, ಎಂ.ಚಂದನ್,ಚಂದ್ರಶೇಖರ್, ಬಾಲಾಜಿ, ಎನ್.ಡಿ. ಪ್ರವೀಣ ಇನ್ನಿತರರು ಉಪಸ್ಥಿತರಿದ್ದರು.
ಈಗಿನ ಮೇಯರ್ ಸುನೀತಾ ಅಣ್ಣಪ್ಪ ಮತ್ತು ಉಪ ಮೇಯರ್ ಶಂಕರ್‌ಗನ್ನಿ ಡಮ್ಮಿಯಾಗಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಸಿ ಕಿಟ್ ನೀಡುವಿಕೆಗೆ ಸಂಬಂಧಿ ಸಿದಂತೆ ಪತ್ರಿಕಾಗೋಷ್ಠಿ ನಡೆಸಿರುವುದು ಶಿಷ್ಟಾಚಾರಕ್ಕೆ ವಿರೋಧವಾಗಿದೆ. ಏಕೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ 45 ಸಾವಿರ ದಿನಸಿ ಕಿಟ್ ಕೊಡುತ್ತಿರುವುದು ಬಿಜೆಪಿಯಿಂದ ಅಲ್ಲ. ಅದು ಮಹಾನಗರ ಪಾಲಿಕೆಯಿಂದ ಆದರೆ ಇವರು ತಮ್ಮ ಪಕ್ಷದಿಂದಲೆ ಕಿಟ್ ಕೊಡುತ್ತೇವೆ ಎಂಬ ಭ್ರಮೆಯಿಂದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅದಲ್ಲದೆ ಅನೇಕ ಬಾರಿ ಮೇಯರ್ ಬದಲು ಚನ್ನಬಸಪ್ಪನವರೆ ಪತ್ರಿಕಾಗೋಷ್ಠಿಗಳು ಮಾಡುತ್ತಿರುವುದರಿಂದ ಅವರು ಡಮ್ಮಿಯಾಗಿದ್ದಾರೆ. –ಎಚ್.ಸಿ.ಯೋಗೀಶ್, ಪಾಲಿಕೆ ಸದಸ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ
ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಯಾವ ರಾಜಕಾರಣಿಯೂ ಮಾಡಿಲ್ಲ: ಕಿಮ್ಮನೆ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.