![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 13, 2022, 6:15 PM IST
ಸಾಗರ: ಬೆಳೆ ವಿಮೆ ಕಟ್ಟುವ ದಿನಾಂಕವನ್ನು ಮುಂದೂಡಬೇಕು ಹಾಗೂ ಬೆಳೆ ವಿಮೆಯನ್ನು ರೈತರಿಗೆ ಸಬೂಬು ಹೇಳದೆ ವಿತರಿಸುವಂತಾಗಬೇಕು ಎಂದು ಮಾಜಿ ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದರು.
ಬುಧವಾರ ತಾಲೂಕಿನ ಬರದವಳ್ಳಿ, ಕಾನ್ಲೆ, ಬೀಸನಗದ್ದೆ, ಮುಂತಾದ ನೆರೆಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ ತಾಳಗುಪ್ಪದ ಗುಂಡಿಬೈಲ್ ಗದ್ದೆ ಮುಳುಗಡೆ ವೀಕ್ಷಿಸಿ ಮಾತನಾಡಿ, ಮಲೆನಾಡಿನ ಮಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದು ಪ್ರಕೃತಿಯ ನಿಯಮ, ಆದರೆ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡು ಅನಾಹುತ ತಪ್ಪಿಸುವ ಕೆಲಸ ಮಾಡಬೇಕು. ಜನರಿಗೆ ಪರಿಹಾರ ಕೊಡುವ ಕೆಲಸ ಸರ್ಕಾರ ಜನಪ್ರತಿನಿಧಿಗಳು ಮಾಡಬೇಕು. ಅದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ತಾಳಗುಪ್ಪ ಹೋಬಳಿಯಲ್ಲಿ ಬೆಳೆ ವಿಮೆ ಸಮರ್ಪಕ ವಿಂಗಡನೆಯಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆ ಪರಿಹಾರವನ್ನಾದರೂ ಕಣ್ಣೊರೆಸುವ ತಂತ್ರವನ್ನಾಗಿಸದೆ ಅಧಿಕಾರಿಗಳು ಸಮರ್ಪಕವಾಗಿ ವಿತರಿಸಬೇಕು ಎಂದರು.
ಬೆಳೆವಿಮೆ ಕುಂಟುನೆಪ ಹೇಳಿ ಇಲ್ಲವಾಗಿಸುವ ಕೆಲಸ ನಡೆಯಿತ್ತದೆ. ನಾನು ಎಂಎಲ್‌ಎ ಆಗಿದ್ದಾಗ ಕಂಪನಿಗಳ ಜತೆ ಮಾತನಾಡಿ ಸಮರ್ಪಕ ಪರಿಹಾರ ನೀಡುವಂತೆ ಮಾಡಿದ್ದೆ. ಅದೇ ರೀತಿ ರೈತರ ಸಂಕಷ್ಟಕ್ಕೆ ಶಾಸಕರು ಸ್ಫಂದಿಸಬೇಕು. ನೆರೆ ಹತ್ತುವ ಜಾಗ ಗುರುತಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೇವಲ ಪ್ರತೀ ಮಳೆಗಾಲಕ್ಕೂ ಸುಳ್ಳು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಿದರೆ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದರು.
ನೆರೆ ಪರಿಹಾರ ವೀಕ್ಷಣೆಯಲ್ಲಿ ಗಣಪತಿ ಹುಲ್ತಿಕೊಪ್ಪ, ಅಶೋಕ್ ಬರದವಳ್ಳಿ, ಶಿವಮೂರ್ತಿ, ಲೋಕೇಶ್ ಗಾಳಿಪುರ, ಸಿರಿವಂತೆ ಗ್ರಾಪಂ ಅಧ್ಯಕ್ಷ ಮನೋಜ್ ಜನ್ನೆ ಹಕ್ಲು, ಮಾದೇವಪ್ಪ, ರಾಜೇಶ್ ಸೈದೂರು, ಮಂಜುನಾಥ ಕಗ್ಗೆ, ಅಣ್ಣಪ್ಪ ಕುಗ್ವೆ, ಫ್ರಾನ್ಸಿಸ್ ಲೂಪೀಸ್ ಮತ್ತಿತರರು ಇದ್ದರು.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.