ಬಿಜೆಪಿ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ವಾ?: ಕಿಮ್ಮನೆ ಪ್ರೆಶ್ನೆ
Team Udayavani, Sep 7, 2022, 6:19 PM IST
ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರ ಜೊತೆ ಒಟ್ಟಾಗಿ ಹೋಗುತ್ತೇವೆ ಎಂದು ಹೇಳುವ ಕಾರಣಕ್ಕೆ ಜನ ನಂಬದೆ ಇರಬಹುದು ಆದರೆ ಬಿಜೆಪಿ ಪಕ್ಷ ನಮಗೆ ಆ ಸಮುದಾಯದ ಮತವೇ ಬೇಡ ಎಂದು ಹೇಳುತ್ತಾರೆ ಇದರಿಂದಾಗಿ ಕೋಮು ಗಲಭೆ ಹೆಚ್ಚುವುದಿಲ್ಲವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಹೋರಾಟ ಮಾಡುತ್ತಾರೆ ಈದ್ಗಾ ಮೈದಾನದಲ್ಲಿ ಗಣಪತಿ ವಿಚಾರಕ್ಕೆ ಹೋರಾಟ ಮಾಡ್ತಾರೆ ಅದರ ಅವಶ್ಯಕತೆ ಏನಿದೆ ? ಹಸಿವಿನಿಂದ ಜನರು ಸಾಯ್ತಾ ಇದ್ದಾರೆ, ಮಳೆಯಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ ಇದಕ್ಕೆ ಬಿಜೆಪಿ ಹೋರಾಟ ಮಾಡುವುದಿಲ್ಲ ಯಾಕೆ ? ಹಲವು ದಿನಗಳಿಂದ ಕರ್ನಾಟಕದಲ್ಲಿ ಕೋಮುಗಲಭೆ ನೆಡೆಯುತ್ತಿದೆ ಇದರ ಬಗ್ಗೆ ಪ್ರಧಾನಿ ಮೋದಿ ಏನಾದರೂ ಮಾತನಾಡಿದರೆ ಎಂದು ಪ್ರೆಶ್ನಿಸಿದರು.
ಬಿಜೆಪಿಯವರು ಹಿಂದೂ ಮುಸ್ಲಿಂ ನಡುವೆ ಗಲಾಟೆ ಅಲ್ಲ ಅದು ದಲಿತರು ಮತ್ತು ಮುಸ್ಲಿಂ ಮದ್ಯೆ ಗಲಾಟೆ ಎನ್ನುತ್ತಾರೆ. ಹಾಗಾದರೆ ಬಿಜೆಪಿ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ವಾ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಪಕ್ಷವೇ ಉಳಿದುಕೊಂಡರೆ ಈ ದೇಶ ಒಂದು ದೇಶವಾಗಿ ಉಳಿಯುವುದಿಲ್ಲ. ಜಾತಿ, ಮತ ಎಂದು ವಿಭಜನೆ ಮಾಡುತ್ತಿರುವ ಪಕ್ಷವನ್ನು ಜನರು ಕಿತ್ತೊಗೆಯಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಚ್. ಎಸ್. ಸುಂದರೇಶ್ ಮಾತನಾಡಿ, ಈ ದೇಶದಲ್ಲಿ ಕೋಮು ಗಲಭೆಯನ್ನು ಹುಟ್ಟಿಸಿರುವ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ವಿಷಯಗಳ ಬಗ್ಗೆ ಜನರಿಗೆ ಸತ್ಯ ಸಂಗತಿಯನ್ನು ಮುಟ್ಟಿಸುವ ಸಲುವಾಗಿ ”ಭಾರತ್ ಜೋಡೋ” ಕಾರ್ಯಕ್ರಮ ಆರಂಭವಾಗಿದೆ. ಕನ್ಯಾಕುಮಾರಿ ಇಂದ ರಾಹುಲ್ ಗಾಂಧಿ ನೇತೃತ್ವದಲ್ಲಿ 350 ಕಿಮೀ ಪಾದಯಾತ್ರೆ ನೆಡೆಯಲಿದ್ದು ಹಲವು ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದುತಿಳಿಸಿದರು.
ದೇಶದ ಏಕತೆಗಾಗಿ ಈ ಭಾರತ್ ಜೋಡೋ ಕಾರ್ಯಕ್ರಮ ನೆಡೆಯಲಿದ್ದು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈ ಭಾರತ್ ಜೋಡೋ ಪಾದಯಾತ್ರೆ ನೆಡೆಯಲಿದೆ. ಗುಂಡ್ಲುಪೇಟೆಯಿಂದ ಆರಂಭವಾಗಿ ಬಳ್ಳಾರಿಯಲ್ಲಿ ಮುಗಿಯಲಿದೆ. ಇಡೀ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿದ್ದು ಬಿಜೆಪಿ ಸರ್ಕಾರದ ಆಡಳಿತದಿಂದ ದೇಶದ ಜನ ಬೇಸತ್ತು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.
ಪ್ರತಿ ಜಿಲ್ಲಾ ಮಟ್ಟದಲ್ಲಿ ಮಹಾತ್ಮಾ ಗಾಂಧಿ ಬಂದಂತಹ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತಿಳಿಸಿದ್ದರಿಂದ ತೀರ್ಥಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಶಿವಮೊಗ್ಗದಲ್ಲೂ ಕೂಡ ಪಾದಯಾತ್ರೆ ನೆಡೆಯಲಿದೆ. ರಾಹುಲ್ ಗಾಂಧಿ ಅವರ ಜತೆ ಇಲ್ಲಿನ ಮುಖಂಡರು 25 ಕಿಮೀ ಪಾದಯಾತ್ರೆ ನೆಡೆಸಲಿದ್ದೇವೆ ಎಂದರು.
ಮಧು ಬಂಗಾರಪ್ಪ ಮಾತನಾಡಿ, ದೇಶಾದ್ಯಂತ ಒಂದು ಐತಿಹಾಸಿಕ ಕಾರ್ಯಕ್ರಮ ನೆಡೆಯುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು ಇದೊಂದು ಒಳ್ಳೆ ಕಾರ್ಯಕ್ರಮವಾಗಿದೆ. ದೇಶದ ಪರಿಸ್ಥಿತಿ ನೋಡಿದರೆ ಈ ಜೋಡೋ ಕಾರ್ಯಕ್ರಮ ಅವಶ್ಯಕತೆ ಇದೆ. ಮಹಾತ್ಮಾ ಗಾಂಧಿ ಸ್ವಾತಂತ್ರ್ಯಕ್ಕಾಗಿ ಪಾದಯಾತ್ರೆ ಮಾಡಿದ್ದರು. ಈಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಪಾದಯಾತ್ರೆ ನೆಡೆಯಲಿದೆ. ಬಿಜೆಪಿ ಸರ್ಕಾರದ ಆಡಳಿತ ಸಂಪೂರ್ಣ ಹದಗೆಟ್ಟಿದೆ ಈ ಕಾರಣಕ್ಕೆ ಜನರಿಗೆ ಸ್ವಾತಂತ್ರ್ಯ ಇಲ್ಲದ ಹಾಗಾಗಿದೆ ಮತ್ತೊಮ್ಮೆ ಈ ಕಾರ್ಯಕ್ರಮದಿಂದಾಗಿ ಸ್ವಾತಂತ್ರ್ಯ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು.
ಶಿವಮೊಗ್ಗ ಮಾಜಿ ಎಂ ಎಲ್ ಸಿ ಆರ್ ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಕೆಸ್ತೂರು ಮಂಜುನಾಥ್, ಕಡ್ತೂರು ದಿನೇಶ್, ಮೂಡುಬಾ ರಾಘವೇಂದ್ರ, ವಿಲಿಯಮ್ಸ್, ಪಟಮಕ್ಕಿ ಮಹಾಬಲೇಶ್, ಅಮರನಾಥ್ ಶೆಟ್ಟಿ, ಪುಟ್ಳೊಡು ರಾಘವೇಂದ್ರ, ಸೇರಿ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.