Koppa ಸರ್ಕಲ್ ನಲ್ಲಿ ಅಪಾಯಕ್ಕೆ ಅಹ್ವಾನ ನೀಡುತ್ತಿದೆ ಹೊಂಡ, ಗುಂಡಿ.. ಅಧಿಕಾರಿಗಳು ಗಮನಿಸಲಿ!
Team Udayavani, Jul 26, 2024, 3:00 PM IST
ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169ರ ಕೊಪ್ಪ ಸರ್ಕಲ್ ನಲ್ಲಿ ಭಾರಿ ಗಾತ್ರದ ಹೊಂಡ ಗುಂಡಿಯೊಂದು ರಸ್ತೆ ಮಧ್ಯದಲ್ಲಿ ಬಾಯಿ ತೆರದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಇದರಲ್ಲಿ ಮಳೆಯ ನೀರು ತುಂಬಿ ರಸ್ತೆ ಪಕ್ಕದಲ್ಲಿ ಓಡಾಟ ನಡೆಸುವ ಜನರಿಗೆ ವಾಹನಗಳ ಓಡಾಟದಿಂದ ಕೊಳಚೆ ನೀರು ಸಿಂಪಡಣೆ ಆಗುತ್ತಿದೆ.
ಕೊಳಚೆ ನೀರು ಜನರಿಗೆ ಹಾರುತ್ತಿರುವುದರಿಂದ ಮಳೆಗಾಲದಲ್ಲಿ ಇದೊಂದು ಹೊಸ ಭಾಗ್ಯ ಎಂದು ಗೊಣಗುತ್ತಾ ಓಡಾಡುತ್ತಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ದಿನದಿಂದ ಈ ಹೊಂಡ ಬಾಯಿ ತೆರೆದು ಕೊಳಚೆ ನೀರು ತುಂಬಿಕೊಂಡು ಪ್ರತಿನಿತ್ಯ ಓಡಾಟ ನಡೆಸುವ ಜನರಿಗೆ ಸಮಸ್ಯೆ ಆಗುತ್ತಿದ್ದರು ಒಂದು ಬುಟ್ಟಿ ಮಣ್ಣು ಹಾಕಿ ಸುಮ್ಮನಾಗಿದ್ದರು. ಈಗ ಮತ್ತೆ ಬಾಯಿ ತೆರೆದಿದ್ದು ಇದುವರೆಗೂ ಅದನ್ನು ಮುಚ್ಚಬೇಕು ಎಂದು ಯಾರು ಕೂಡ ನೋಡಿಲ್ಲ.
ಅದೇ ರಸ್ತೆಯಲ್ಲಿ ಅಧಿಕಾರಿಗಳನ್ನು ಸೇರಿ ಸ್ಥಳೀಯ ಜನಪ್ರತಿನಿಧಿಗಳು ಓಡಾಟ ನಡೆಸುತ್ತಾರೆ ಆದರೆ ಇಲ್ಲಿಯವರೆಗೂ ಅವರ ಕಣ್ಣಿಗೆ ಈ ಬೃಹತ್ ಆಕಾರದ ಹೊಂಡ ಬಿದ್ದಿರುವುದು ಕಾಣದೇ ಇರುವುದು ವಿಷಾಧನಿಯ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಹೊಂಡ ಮುಚ್ಚಿಸಿ ಯಾವುದೇ ಕೊಳಚೆ ನೀರು ಹಾರದಂತೆ ಜನರಿಗೆ ಓಡಾಟ ನಡೆಸಲು ಅವಕಾಶ ಮಾಡಿಕೊಡುತ್ತಾರ? ಎಂದು ಕಾದು ನೋಡಬೇಕಿದೆ.
ಧಾರಾಕಾರ ಮಳೆ – ಕುಸಿದು ಬಿದ್ದ ಮನೆ ಗೋಡೆ!
ತೀರ್ಥಹಳ್ಳಿ : ತಾಲೂಕಿನಾದ್ಯಂತ ಪುಷ್ಯ ಮಳೆಯ ಆರ್ಭಟ ಹೆಚ್ಚಾಗಿದ್ದು ಭಾರಿ ಮಳೆ ಹಾಗೂ ಗಾಳಿಯಿಂದ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.
ರಥಬೀದಿಯ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಇರುವ ಸ್ಫೂರ್ತಿ ಕಿರಣ್ ಎಂಬುವರ ಮನೆಯ ಗೋಡೆ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ. ಮನೆಯ ಮೇಲ್ಭಾಗದ ಗೋಡೆಯಾಗಿದ್ದು ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.ಘಟನ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಾದ ಲೋಕೇಶ್ ಸೇರಿದಂತೆ ಅನೇಕ ಅದಿಕಾರಿಗಳು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಿಸಿ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Heavy Rains; ಚಿಕ್ಕೋಡಿಯ ಮತ್ತೆರಡು ಸೇತುವೆ ಮುಳುಗಡೆ: ಪ್ರವಾಹದ ಆತಂಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.