ಸಾಲು ಮರದ ಒಣರೆಂಬೆಗೆ 3ವರ್ಷದ ಮಗು ಬಲಿ
ಎಚ್ಚರಿಕೆಗೆ ಇಲಾಖೆಗಳ ನಿರ್ಲಕ್ಷ್ಯದ ಪರಿಣಾಮ 2019ರಲ್ಲೇ ಉದಯವಾಣಿ ವರದಿ
Team Udayavani, Feb 26, 2021, 5:36 PM IST
ಸಾಗರ: ಎರಡು ವರ್ಷಗಳ ಹಿಂದೆ “ಉದಯವಾಣಿ’ ಸಾಗರ ಆವಿನಹಳ್ಳಿ ರಸ್ತೆಯ ಸಾಲುಮರಗಳ ಒಣ ರೆಂಬೆಗಳ ಕುರಿತು ಎಚ್ಚರಿಕೆ ನೀಡಿದ್ದರೂ ತಾಲೂಕು ಆಡಳಿತ ಗಮನ ಹರಿಸದ ಹಿನ್ನೆಲೆಯಲ್ಲಿ, ರಸ್ತೆ ಪಕ್ಕದ ಮರದ ಒಣರೆಂಬೆಯೊಂದು ಮೂರು ವರ್ಷದ ಮಗುವಿನ ಸಾವಿಗೆ ಕಾರಣವಾದ ಘಟನೆ ಬುಧವಾರ ಸಂಜೆ ನಡೆದಿದೆ.
ಸಾಗರ ಸಿಗಂದೂರು ರಸ್ತೆಯಲ್ಲಿ ಸಂಜೆ ಆಟವಾಡುತ್ತಿದ್ದ ಮೂರು ವರ್ಷದ ಪ್ರತೀಕ್ಷಾ ಮೇಲೆ ಒಣರಂಬೆ ಬಿದ್ದು ಮುಖ, ತಲೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಮಗುವಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಗಾರ್ಮೆಂಟ್ ಒಂದರಲ್ಲಿ ಕೆಲಸ ನಿರ್ವಹಿಸುವ ತಾಯಿ ಪ್ರೇಮಾ ಅವರು ಕೇವಲ ಆರು ತಿಂಗಳ ಹಿಂದೆ ತಮ್ಮ ಪತಿ ನಾಗರಾಜ ಅವರನ್ನು ಕೂಡ ಕಳೆದುಕೊಂಡಿದ್ದರು.
“ಉದಯವಾಣಿ’ 2019ರಲ್ಲಿಯೇ ಮೊದಲ ಬಾರಿಗೆ ಹಾಗೂ 2020ರ ಸೆ. 14ರಂದು ವಾಹನ ದಟ್ಟಣೆಯ ಆವಿನಹಳ್ಳಿ- ಸಿಗಂದೂರು ರಸ್ತೆಯಲ್ಲಿ ಒಣ ಮರಗಳಿಂದ ಜೀವಕ್ಕೆ ಹಾನಿಯಾಗಬಹುದಾದ ಸಾಧ್ಯತೆಗಳ ಬಗ್ಗೆ ವರದಿ ಮಾಡಿತ್ತು. ಈ ವೇಳೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಸೆ. 18ರಂದು ಕೆಲವು ಅಪಾಯಕಾರಿ ಮರಗಳನ್ನು ಉರುಳಿಸಿತ್ತು. ಆದರೆ 2019ರಲ್ಲಿ ತುಂಡಾದ ಮರದ ರೆಂಬೆ ಸೇರಿದಂತೆ ಹಸಿ ಮರದಲ್ಲಿನ ಒಣ ರೆಂಬೆಗಳನ್ನು ತೆರವು ಮಾಡುವ ಕೆಲಸ ಮಾತ್ರ ನಡೆದಿರಲಿಲ್ಲ. ತುಂಡಾಗಿ ಜೋತಾಡುತ್ತಿರುವ ಒಣ ರೆಂಬೆ ಈಗಲೂ ಪುಡಿಪುಡಿಯಾಗಿ ಕೆಳಗೆ ಬೀಳುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಣ ರೆಂಬೆಗಳನ್ನು ನಿವಾರಿಸುವ ಕೆಲಸವನ್ನು ಮಾಡ ಲು ಮುಂದಾದರೆ ಅರಣ್ಯ ಇಲಾಖೆ ಅಧಿ ಕಾರಿಗಳು ತಕರಾರು ಎತ್ತಿ ಲಂಚಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಮಗುವಿನ ಜೀವ ತೆಗೆದ ರೆಂಬೆಯನ್ನು ತೆರವು ಮಾಡುವುದರಿಂದ ಅಲ್ಲಿನ ಜನ ಈ ಕಾರಣದಿಂದಲೇ ಹಿಂಜರಿದಿದ್ದಾರೆ. ಸ್ಥಳೀಯ ಕಲ್ಮನೆ ಗ್ರಾಪಂ, ತಾಪಂ, ಅರಣ್ಯ ಹಾಗೂ ಮೆಸ್ಕಾಂ ಈ ಬಗ್ಗೆ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯ ರೋಹಿತ್ ಸಾಗರ್ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.