ಡಿಸಿ ವರ್ಗಾವಣೆ ಪ್ರಜಾಪ್ರಭುತ್ವಕ್ಕೆ ಅವಮಾನ
ವರ್ಗಾವಣೆ ಮಾಡಿದವರಿಗೆ ಜಿಲ್ಲಾಧಿಕಾರಿಗಳ ಕಾರ್ಯವೈಖರಿಯೇ ಚಾಟಿಯೇಟು: ಗಂಗಾಧರ್
Team Udayavani, Aug 13, 2019, 3:25 PM IST
ಶಿವಮೊಗ್ಗ: ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರಿಗೆ ಕಾಯಕ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಶಿವಮೊಗ್ಗ: ಜಿಲ್ಲಾಧಿಕಾರಿಯಾಗಿ ಜನರ ಸೇವೆ ಮಾಡಿದ ಕೆ.ಎ.ದಯಾನಂದ ಅವರಿಗೆ ಸರ್ಕಾರ ವರ್ಗಾವಣೆ ಎಂಬ ಬಳುವಳಿ ನೀಡಿ, ಅವರನ್ನು ಅಸಹಾಯಕರನ್ನಾಗಿ ಮಾಡಿ ಕಳುಹಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ರಾಜ್ಯ ರೈತಸಂಘದ ಮುಖಂಡ ಕೆ.ಟಿ. ಗಂಗಾಧರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳು ಹಾಗೂ ನಾಗರಿಕರ ಪರವಾಗಿ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡಿರುವ ಕೆ.ಎ. ದಯಾನಂದ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ‘ಕಾಯಕ ಶ್ರೇಷ್ಠ’ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಲೆನಾಡಿನ ಜನ ಮಲೆನಾಡಿನ ಸಂಸೃ್ಕತಿಯಂತೆ ಅವರ ಕಾರ್ಯವೈಖರಿ ಮೆಚ್ಚಿ ಅವರಿಗೆ ಪ್ರಶಸ್ತಿ ನೀಡಿ ಕಳುಹಿಸುತ್ತಿರುವುದು ವರ್ಗಾವಣೆ ಮಾಡಿದವರಿಗೆ ಒಂದು ಚಾಟಿ ಏಟು ನೀಡಿದಂತಾಗಿದೆ. ಅವರಿಗೆ ಇದಕ್ಕಿಂದ ಅವಮಾನಕರವಾದುದು ಯಾವುದೂ ಇಲ್ಲ ಎಂದು ಭಾವಿಸುತ್ತೇನೆ ಎಂದರು.
ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ, ಕರ್ತವ್ಯ ನೈಪುಣ್ಯ ಹೊಂದಿದ್ದ ಇವರು ಕಾನೂನಿನ ವ್ಯಾಪ್ತಿಯಲ್ಲಿ ಕೆಲಸವಾಗದಿದ್ದರೂ ಮಾನವೀಯತೆ ಮೂಲಕ ಕೆಲಸ ಮಾಡಿದ್ದರು ಎಂದು ಶ್ಲಾಘಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಮೂರ್ತಿ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಅವರಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದರು.
34 ಗುತ್ತಿಗೆ ಪೌರ ಕಾರ್ಮಿಕರಿಗೆ ಕಾಯಂ ಹುದ್ದೆ ನೀಡಿದ್ದಾರೆ. ಹಕ್ಕಿಪಿಕ್ಕಿ ಕಾಲೋನಿ, ಸಹ್ಯಾದ್ರಿ ಕಾಲೇಜಿನ ಪಕ್ಕದಲ್ಲಿರುವ ಹಕ್ಕಿಪಿಕ್ಕಿ ತಾಂಡಾವನ್ನು ಸ್ಲಂ ಬಡಾವಣೆಯಾಗಿ ಘೋಷಣೆ ಮಾಡಿ, ಅವರಿಗೆ ಮೂಲ ಸೌಕರ್ಯಗಳು ಲಭಿಸುವಂತೆ ಮಾಡಿದರು. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಆ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಮಾಡಿದರು ಎಂದು ಸ್ಮರಿಸಿದರು.
ಹಳೇ ಜೈಲು ಆವರಣವನ್ನು ಮ್ಯೂಸಿಯಂ ಮಾಡುವ ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಪಾರ್ಕ್ ಮಾದರಿಯ ಪಾರ್ಕ್ ಮಾಡುವ ಉದ್ದೇಶವನ್ನು ಹೊಂದಿದ್ದರು. ಆದರೆ ಅದು ಈಡೇರಲಿಲ್ಲ. ಅವರನ್ನು ಸೋಮಾರಿಗಳು ಮಾಡುವ ವಿಭಾಗಕ್ಕೆ ವರ್ಗಾವಣೆ ಮಾಡಿರುವುದು ಅವರ ಕಾರ್ಯವೈಖರಿಗೆ ಹಿನ್ನಡೆಯಾಗಿದೆ ಎಂದರು.
ಕಟೀಲು ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಕಾವೇರಿ, ಯುವಕರಿಗೆ ಮಾದಕ ವ್ಯಸನದ ಬಗ್ಗ ಜಾಗೃತಿ ಮೂಡಿಸಿದರು. ಅವರು ದೂರದೃಷ್ಟಿ ಹೊಂದಿದ್ದ ಅಧಿಕಾರಿಯಾಗಿದ್ದರು ಎಂದು ಹೇಳಿದರು
ರಾಷ್ಟ್ರೀಯ ಶಿಕ್ಷಣ ಸಮಿತಿ ಖಜಾಂಚಿ ಅಶ್ವತ್ಥ್ ನಾರಾಯಣ ಶೆಟ್ಟಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ವಾಸುದೇವ, ಉದ್ಯಮಿ ಗೋಪಿನಾಥ್, ವಿಜಯ ಕುಮಾರ್, ರಜನಿ ಪೈ, ಕೆ.ಸಿ. ಬಸವರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.