ವಿಐಎಸ್‌ಎಲ್ ವಸತಿಗೃಹಗಳ ಬಾಡಿಗೆ ದರ ಇಳಿಕೆ
Team Udayavani, Aug 11, 2020, 1:36 PM IST
ಭದ್ರಾವತಿ: ವಿಐಎಸ್‌ಎಲ್ ಆಡಳಿತ ಮಂಡಳಿ ನಿವೃತ್ತ ಕಾರ್ಮಿಕರ ವಾಸಕ್ಕೆ ನೀಡಿರುವ ವಾಸದ ಮನೆಗಳ ಬಾಡಿಗೆಯನ್ನು ಪ್ರತಿಶತ ನೂರರಷ್ಟು ಏರಿಸಿರುವುದನ್ನುಕೈಬಿಟ್ಟು ಅದನ್ನು ಶೇ. 50ರಷ್ಟು ಇಳಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್. ರಾವ್ ಅವರೊಂದಿಗೆ ಮಾತನಾಡಿದರು.
ಸೋಮವಾರ ಇಲ್ಲಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಈ ಸ್ಥಿತಿಯಲ್ಲಿ ಬಾಡಿಗೆ ಹೆಚ್ಚಿಸಿರುವ ಕ್ರಮ ಸರಿಯಲ್ಲ. ಕೂಡಲೇ ಹೆಚ್ಚಿಸಿರುವ ಬಾಡಿಗೆ ಆದೇಶವನ್ನು ಹಿಂದೆ ಪಡೆಯುವಂತೆ ಅವರು ಅಧಿಕಾರಿಗಳಿಗೆ ಹೇಳಿದರು. ಸಂಸದರ ಮಾತಿಗೆ ಒಪ್ಪಿದ ಆಡಳಿತ ಮಂಡಳಿ ಹೆಚ್ಚಿಸಿರುವ ಬಾಡಿಗೆಯ ಆದೇಶವನ್ನು ಹಿಂದೆ ಪಡೆಯುವ ಕುರಿತು ಪರಿಶೀಲಿಸುವ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಕಾರ್ಮಿಕರೊಂದಿಗೆ ಸಂಸದರು ಅನೌಪಚಾರಿಕವಾಗಿ ಮಾತನಾಡಿ, ವಿಐಎಸ್ ಎಲ್ ಕಾರ್ಖಾನೆಗೆ ತಕ್ಷಣಕ್ಕೆ ಅಗತ್ಯವಾದ ಸುಮಾರು 20 ಕೋಟಿ ಬಂಡವಾಳ ಹೂಡುವ ಬಗ್ಗೆ ಸೈಲ್ ಚೇರ್ಮನ್ ಅವರ ಬಳಿ ಮಾತನಾಡಲಾಗಿದೆ. ಎಂಪಿಎಂ ಕಾರ್ಖಾನೆ ಪುನಶ್ಚೇತನ ಕುರಿತಂತೆ ಖಾಸಗಿಯವರ ಸಹಬಾಗಿತ್ವದಲ್ಲಿ ಪುನರಾರಂಭ ಮಾಡುವ ಚರ್ಚೆ ಪ್ರಗತಿಯಲ್ಲಿದೆ ಎಂದರು.
ವಿಐಎಸ್ ಎಲ್ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ವಿಶ್ವನಾಥ್, ನಿವೃತ್ತ ಕಾರ್ಮಿಕ ಮುಖಂಡರಾದ ಹನುಮಂತರಾವ್, ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್.ಎನ್. ಬಾಲಕೃಷ್ಣ, ಚಂದ್ರಹಾಸ, ಕಾರ್ಮಿಕ ಮುಖಂಡರಾದ ಜಗದೀಶ್, ಅಮೃತ್, ಬಿಜೆಪಿ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಮಂಡಲ ಅಧಕ್ಷ ಪ್ರಭಾಕರ್, ಕದಿರೇಶ್, ಮಂಗೋಟೆ ರುದ್ರೇಶ್, ಮಂಜುನಾಥ್ ಕದಿರೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.