ನಗರಸಭೆ ಆಯುಕ್ತರ ವರ್ಗಾವಣೆಗೆ ಖಂಡನೆ
Team Udayavani, Jul 27, 2017, 2:43 PM IST
ಭದ್ರಾವತಿ: ಸ್ವಚ್ಛತೆ, ಸೊಳ್ಳೆ ಕಾಟ, ನಿವಾಸಿಗಳಿಗೆ ಖಾತೆ ಮಾಡಿಕೊಡುವುದು, ಪೌರಾಯುಕ್ತರ ವರ್ಗಾವಣೆಗೆ ತಡೆ ಹಿಡಿಯುವುದು ಸೇರಿದಂತೆ ಇತ್ಯಾದಿ ಚರ್ಚೆಗಳ ನಡುವೆ ಬಹುತೇಕ ಪ್ರಸ್ತಾವನೆಗಳಿಗೆ ನಗರಸಭಾ ಸದಸ್ಯರು ಬುಧವಾರ ಅಧ್ಯಕ್ಷೆ ಎಸ್. ಹಾಲಮ್ಮ ಅಧ್ಯಕ್ಷತೆಯಲ್ಲಿ ನಡೆದ
ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದರು.
ಸಭೆ ಆರಂಭದಲ್ಲಿ ಹಿರಿಯ ಸದಸ್ಯ ವಿ. ಕದಿರೇಶ್ ಮಾತನಾಡಿ, ಪ್ರಾಮಾಣಿಕ ದಕ್ಷ ನಗರಸಭೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಮನೋಹರ್ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಪ್ರಸ್ತುತ ನಗರದ ಅಭಿವೃದ್ಧಿಗೆ ಅವರ ಅವಶ್ಯಕತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು
ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಒಂದಾಗಿ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಮನವಿ ಸಲ್ಲಿಸೋಣ ಎಂದರು.
ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಂಡರು. ನಂತರ ಇತ್ತೀಚೆಗೆ ನಿಧನರಾದ ಪುರಸಭಾ ಮಾಜಿ ಸದಸ್ಯ ಷಫಿ ಅಹಮ್ಮದ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಆಶ್ರಯ ಬಡಾವಣೆಗಳಲ್ಲಿ ವಿತರಿಸಲಾದ ಹಕ್ಕುಪತ್ರಗಳನ್ನು 20 ವರ್ಷಗಳ ಅವಧಿಯವರೆಗೂ ಪರಭಾರೆ ಮಾಡಬಾರದು ಎಂದು ಕಾನೂನು ಮಾಡಲಾಗಿದೆ. ಶೇ.90 ರಷ್ಟು
ಫಲಾನುಭವಿಗಳು ಇತರರಿಗೆ ಮಾರಿಕೊಂಡಿದ್ದಾರೆ. ಖರೀದಿಸಿರುವವರಿಗೆ ಖಾತೆ ಮಾಡಿಕೊಡುವ ಪ್ರಸ್ತಾವನೆಗೆ ಸಂಬಂ ಸಿದಂತೆ ಉತ್ತರಿಸಿದ ಪೌರಾಯುಕ್ತ ಮನೋಹರ್, ಖರೀದಿದಾರರಿಗೆ ಖಾತೆ ಮಾಡಿಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮೂಲ ಫಲಾನುಭವಿಗಳಿಗೆ ಮಾತ್ರ ಖಾತೆ ಮಾಡಿಕೊಡಲು ಸಾಧ್ಯ ಎಂದರು.
ಸದಸ್ಯರಾದ ಅಜಿತ್, ಆಂಜನಪ್ಪ ಮಾತನಾಡಿ, ಈಗಾಗಲೇ ಬಹುತೇಕ ಮೂಲ ಫಲಾನುಭವಿಗಳು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಖಾತೆ ಮಾಡಿಕೊಡುವುದು ಕಷ್ಟ. ಹುಡುಕಿದರೆ ಶೇ.10ರಷ್ಟು ಮಾತ್ರ ಸಿಗುತ್ತಾರೆ. ಈ ಹಿನ್ನಲೆಯಲ್ಲಿ ಹಾಲಿ ವಾಸವಿರುವವರಿಗೆ ಖಾತೆ ಮಾಡಿ ಕೊಡಿ ಎಂದು ಒತ್ತಾಯಿಸಿದರು.
ನಿವೇಶನ ಪಡೆದ ವ್ಯಾಪ್ತಿಗಳಿಗೆ ದಂಡ ವಿಧಿಸಿ ಖಾತೆ ಮಾಡಿಕೊಡಿ. ಇಲ್ಲದಿದ್ದರೆ ಎಲ್ಲಾ ಹಕ್ಕು ಪತ್ರಗಳನ್ನು ರದ್ದುಪಡಿಸಿ ಎಂದು ಸದಸ್ಯ ಟಿಪ್ಪು ಧ್ವನಿಗೂಡಿಸಿದರು. ಸದಸ್ಯರ ಮನವಿಗೆ ಸ್ಪಂದಿಸದ ಶಾಸಕ ಎಂ.ಜೆ. ಅಪ್ಪಾಜಿ, 94ಸಿ ಅಡಿಯಲ್ಲಿ ಖಾತೆ ಮಾಡಲು ಅವಕಾಶವಿದ್ದು, ಮಾಡಿಕೊಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ಶಿವಮೊಗ್ಗ ಮಾಚೇನಹಳ್ಳಿಯಲ್ಲಿರುವ ಡೈರಿಗೆ ನೀರು ಸರಬರಾಜು ಮಾಡುವಂತೆ ಡೈರಿ ವ್ಯವಸ್ಥಾಪಕರ ಬೇಡಿಕೆಗೆ ಶಾಸಕರು ಸೇರಿದಂತೆ ಹಲವು ಸದಸ್ಯರು ಡೈರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಮೂಲಕ ಪ್ರಸ್ತಾವನೆಯನ್ನು ತಳ್ಳಿಹಾಕಿದರು. ಮಳೆ ಬರದೆ ನೀರಿಗೆ ಬರವಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವುದರಿಂದ ನೀರು ಸರಬರಾಜು ಸಾಧ್ಯವಿಲ್ಲ ಎಂದರು. ಇದಕ್ಕೆ ಮತ್ತೆ ಕೆಲ ಸದಸ್ಯರು ಕಂದಾಯ ಬರುವುದಾದರೆ ನೀರು ಕೊಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ನಗರಸಭೆ ಸ್ವತ್ಛತೆಗಾಗಿ ನೇಮಿಸಿರುವ ಪೌರ ಕಾರ್ಮಿಕರು ತ್ಯಾಜ್ಯ ತೆಗೆದುಕೊಂಡು ಹೋಗುವವರಾಗಿದ್ದಾರೆ. ಸ್ವಚ್ಛತೆ ಮಾಡುವವರೇ ಇಲ್ಲವಾಗಿದೆ. ನಗರಸಭೆ ಅಧಿಕಾರಿಗಳು ಮಾತ್ರ ಸ್ವಚ್ಛತೆ ಮಾಡಲು ಪೌರ ಕಾರ್ಮಿಕರನ್ನು ನೇಮಿಸಲಾಗಿದೆ ಎನ್ನುತ್ತಾರೆ. ಹಾಗಾದರೆ ಆ ಕಾರ್ಮಿಕರು ಎಲ್ಲಿ ಹೋಗುತ್ತಾರೆ ಎಂದು ಸದಸ್ಯ ಶಿವರಾಜ್ ತರಾಟೆಗೆ ತೆಗೆದುಕೊಂಡರು.
ಬಯೋಮೆಟ್ರಿಕ್ ಅಳವಡಿಸಿರುವುದರಿಂದ ಪೌರಕಾರ್ಮಿಕರು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರ ಸಂಬಳ ಕಡಿತಗೊಳ್ಳುತ್ತದೆ ಎಂದು ಪೌರಾಯುಕ್ತ ಉತ್ತರಿಸಿದರು. ಅಧಿಕಾರಿಗಳು ನೀಡಿದ ಉತ್ತರವನ್ನು ಆಲಿಸಿದ ಶಾಸಕ ಅಪ್ಪಾಜಿ, ಪೌರಕಾರ್ಮಿಕರ ಕೊರತೆ ಇದ್ದರೆ ಹೆಚ್ಚುವರಿಯಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪರಿಸರ ಅಭಿಯಂತರ ರುದ್ರೇಗೌಡ ಹೊಸ ಟೆಂಡರ್‌ನಲ್ಲಿ ಈ ರೀತಿ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತೇನೆ ಎಂದರು.
ಸೊಳ್ಳೆ ನಿವಾರಣೆಗಾಗಿ ಫಾಗಿಂಗ್ ಮಾಡಲು ಬಳಸುತ್ತಿರುವ ಔಷಧ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗಾಗಲೇ ವಾಡ್
ìನಲ್ಲಿ ಸುಮಾರು 30 ಜನರು ಡೆಂಘೀ ಜ್ವರಕ್ಕೆ ತುತ್ತಾಗಿದ್ದಾರೆ. ಸೊಳ್ಳೆಗಳು ಸಾಯುತ್ತಿಲ್ಲ. ಫಾಗಿಂಗ್ ಬದಲಾಗಿ ಔಷ ಧ ಸಿಂಪಡಿಸಿ ಎಂದು ಸದಸ್ಯ ಶಿವರಾಜ್ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಸುಧಾಮಣಿ, ಟಿಪ್ಪು ಸೊಳ್ಳೆ ಔಷಧ ಮಿಶ್ರಣ ಸರಿಯಾದ ಪ್ರಮಾಣದಲ್ಲಿ
ಮಾಡುತ್ತಿಲ್ಲ. ಗಮನ ಹರಿಸಿ ಎಂದು ಆಯುಕ್ತರ ಗಮನಕ್ಕೆ ತಂದರು. ಸದಸ್ಯೆ ರೇಣುಕ ಮಾತನಾಡಿ, ತಮ್ಮಣ್ಣ ಕಾಲೋನಿಯಲ್ಲಿ ಮನೆ ಇಲ್ಲದವರಿಗೆ
ಮನೆ ನೀಡಿ ಇರುವ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹಕ್ಕು ಹೊಂದಿರುವ ನಿವಾಸಿಗಳಿಗೆ ಖಾತೆ ಮಾಡಿಸಿ ಕೊಡಿ ಎಂದರು.
87 ಪ್ರಸ್ತಾವನೆಗಳ ಪೈಕಿ ಬಹುತೇಕ ಪ್ರಸ್ತಾವನೆಗಳಿಗೆ ಸದಸ್ಯರು ತಮ್ಮ ಒಪ್ಪಿಗೆ ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ರಾಜು, ಉಪಾಧ್ಯಕ್ಷೆ
ಮಹಾದೇವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Poster Campaign: ಸಚಿವ ಪ್ರಿಯಾಂಕ್ ವಿರುದ್ಧ ಬಿಜೆಪಿ ಪೋಸ್ಟರ್ ಆಂದೋಲನ;ಎಫ್‌ಐಆರ್ ದಾಖಲು
Kollur: ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿ, ಅರ್ಚಕ ಮಂಜುನಾಥ ಅಡಿಗ ನಿಧನ
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.