ಹಿಂಸೆಯಿಂದ ಲೇಖನಿಗೆ ಅಡ್ಡಿಪಡಿಸುವುದು ಸಲ್ಲ; ಶಾಸಕ ಎಚ್.ಹಾಲಪ್ಪ ಹರತಾಳು
ಪತ್ರದಲ್ಲಿ ವಿಳಾಸ ಇಲ್ಲ. ದಾವಣಗೆರೆಯಿಂದ ನನಗೆ ಪತ್ರ ಬಂದಿದೆ
Team Udayavani, Oct 27, 2022, 6:32 PM IST
ಸಾಗರ: ಲೇಖಕರು, ಸಾಹಿತಿಗಳು ನಿರ್ಭಯವಾಗಿ ಬರವಣಿಗೆ ಮಾಡಲು ಅವಕಾಶವಾಗಬೇಕು. ಹಿಂಸೆ, ಭಯದ ಮೂಲಕ ಲೇಖನಿಯನ್ನು ತಡೆಯುವ ಯಾವುದೇ ಪ್ರಯತ್ನ ಸರಿಯಲ್ಲ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನೆಹರೂ ನಗರದಲ್ಲಿ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಅವರು ಮಾತನಾಡಿದರು. ಹಿಂದೆ ಗೌರಿ ಲಂಕೇಶ್, ಕಲಬುರ್ಗಿ ಅಂತವರ ಹತ್ಯೆ ನಡೆದಿದೆ. ಬೇರೆ ಬೇರೆ ವಿಚಾರಧಾರೆಯುಳ್ಳವರಿಂದ ಇಂತಹ ಕೆಲಸ ನಡೆದಿದೆ.
ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಹಿಂಸೆಗೆ ಇಳಿಯಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ಡಾ| ನಾ.ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಅವರ ಮನೆಗೆ ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನಗರ ಠಾಣೆ ವೃತ್ತ ನಿರೀಕ್ಷಕರಿಗೆ ಡಿಸೋಜಾ ಅವರ ಮನೆಗೆ ಭೇಟಿ ನೀಡಿ ವರದಿ ಪಡೆಯಲು ತಿಳಿಸಲಾಗಿತ್ತು. ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಸಹ ಮಾತುಕತೆ ನಡೆಸಲಾಗುತ್ತದೆ.
ಸಾಹಿತಿ ನಾ.ಡಿಸೋಜ ಅವರು ಮುಂಜಾಗ್ರತೆ ಹಿನ್ನೆಲೆಯಲ್ಲಿ ನಗರ ಠಾಣೆಗೆ ದೂರು ನೀಡಲು ಸಲಹೆ ನೀಡಿದ್ದೇನೆ ಎಂದು ಹೇಳಿದರು. ನಾ.ಡಿಸೋಜಾ ಮಾತನಾಡಿ, ಸುಮಾರು 6 ತಿಂಗಳ ಹಿಂದೆ ಎರಡು ಬೆದರಿಕೆ ಪತ್ರ ಬಂದಿತ್ತು. ಪತ್ರದಲ್ಲಿ ವಿಳಾಸ ಇಲ್ಲ. ದಾವಣಗೆರೆಯಿಂದ ನನಗೆ ಪತ್ರ ಬಂದಿದೆ. ನನಗೆ ಪ್ರತಿ ದಿನ ಹತ್ತಾರು ಪತ್ರಗಳು ಅಂಚೆ ಮೂಲಕ ಬರುತ್ತವೆ. ನನ್ನ ಸಾಹಿತ್ಯ ಹೊಗಳಿಯೋ, ವಿಮರ್ಶೆ ಮಾಡಿ ಪತ್ರ ಬರುವುದು ಸಹಜ. ಆದರೆ ಅನಾಮಧೇಯವಾಗಿ ಎರಡು ಪತ್ರ ಬಂದಾಗ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅನಗತ್ಯವಾಗಿ ಪೊಲೀಸರಿಗೆ ದೂರು ನೀಡಿ ವಿಷಯ ಇನ್ನಷ್ಟು ದೊಡ್ಡದು ಮಾಡುವ ಇಷ್ಟ
ತಮಗೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಪ್ಸ್‌ಕೋಸ್ ಸದಸ್ಯ ಆರ್.ಎಸ್.ಗಿರಿ, ಬಗರ್‌ಹುಕುಂ ಸಮಿತಿ ಸದಸ್ಯ ರೇವಪ್ಪ ಹೊಸಕೊಪ್ಪ, ನಗರಸಭೆ ಸದಸ್ಯೆ ನಾದೀರಾ ಪರ್ವಿನ್, ಲೇಖಕ ವಿಲಿಯಂ, ರವೀಂದ್ರ ಬಸರಾಣಿ, ವಿನಾಯಕ ರಾವ್ ಮನೇಘಟ್ಟ ಇನ್ನಿತರರು ಇದ್ದರು.
ಪೊಲೀಸರ ಭೇಟಿ: ಇದಕ್ಕೂ ಮೊದಲು ನಗರ ಠಾಣೆ ವೃತ್ತ ನಿರೀಕ್ಷಕ ಸೀತಾರಾಂ ಸಿಬ್ಬಂದಿ ಜೊತೆ ಸಾಹಿತಿ ಡಾ| ನಾ.ಡಿಸೋಜಾ ಅವರ ಮನೆಗೆ ತೆರಳಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಮಾಹಿತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.