ಡಾಕ್ಯುಮೆಂಟರಿಗಾಗಿ ಜೀವ ರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದ ಜ್ಯೋತಿರಾಜ್
Team Udayavani, Dec 16, 2020, 4:04 PM IST
ಶಿವಮೊಗ್ಗ: ದೊಡ್ಡ ಕಟ್ಟಡಗಳನ್ನು ಸಲಿಸಾಗಿ ಏರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೀವನದ ಬಗ್ಗೆ ಸಾಕ್ಷ್ಯಚಿತ್ರವೊಂದು ತಯಾರಾಗುತ್ತಿದೆ. ಇದಕ್ಕಾಗಿ ಜ್ಯೋತಿರಾಜ್ ಯಾವುದೇ ಜೀವ ರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದರು.
ಅನಿವಾಸಿ ಭಾರತೀಯ ಸ್ಟಾನ್ಲಿ ನಿರ್ಮಿಸುತ್ತಿರುವ ‘ಇನ್ ಕ್ರೆಡಿಬಲ್ ಮಂಕಿಮ್ಯಾನ್’ ಎಂಬ ಶೀರ್ಷಿಕೆಯ ಡಾಕ್ಯುಮೆಂಟರಿಯ ಚಿತ್ರೀಕರಣ ಮಂಗಳವಾರದಿಂದ ಜೋಗ ಜಲಪಾತದ ಬಳಿ ನಡೆಯುತ್ತಿದೆ.
ಈ ಹಿಂದೆ ಹಲವು ಬಾರಿ ಜೋಗ ಜಲಪಾತ ಹತ್ತಿ ಇಳಿದಿರುವ ಜ್ಯೋತಿರಾಜ್ ಈ ಬಾರಿಯೂ ಡಾಕ್ಯುಮೆಂಟರಿ ನೈಜವಾಗಿ ಮೂಡಿಬರಲಿ ಎಂಬ ಕಾರಣಕ್ಕೆ ಜೀವರಕ್ಷಕ ವಸ್ತುಗಳನ್ನು ಬಳಸದೆ ಜೋಗ ಜಲಪಾತ ಏರಿದ್ದಾರೆ.
ಇದನ್ನೂ ಓದಿ:ವಿಕಲಚೇತನ ಅಪ್ರಾಪ್ತೆ ಮೇಲೆ 52ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಯತ್ನ: ದೂರು ದಾಖಲಿಸದ ಪೊಲೀಸರು
ಜ್ಯೋತಿರಾಜ್ ಗೆ ಜೋಗ ಜಲಪಾತ ಏರಲು ಹಾಗೂ ರಾಜ ಫಾಲ್ಸ್ ನಿಂದ ಪ್ರಪಾತಕ್ಕಿಳಿಯಲು ಶಿವಮೊಗ್ಗ ಜಿಲ್ಲಾಡಳಿತವು ಷರತ್ತುಬದ್ಧ ಅನುಮತಿ ನೀಡಿದೆ. ಅದರಂತೆ ಒಟ್ಟು ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಹೆಲಿಕ್ಯಾಮ್ ಹಾಗೂ ಡ್ರೋಣ್ ಬಳಸಿ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.