ರಾಮಾಯಣದಲ್ಲಿ ನಾಟಕೀಯ ಅಂಶ ಕಡಿಮೆ; ವಿಜಯ ವಾಮನ್
ನಾಟಕ ಪ್ರಯೋಗದ ನಿರ್ಬಂಧತೆಯ ನಡುವೆ ಸಮನ್ವಯತೆ ತರುವ ಪ್ರಯತ್ನ ಮಾಡಿದ್ದೇನೆ
Team Udayavani, Nov 28, 2022, 6:39 PM IST
ಸಾಗರ: ಬದಲಾವಣೆ ಬಯಸುವ ಪ್ರಯತ್ನದೆಡೆಗಿನ ತುಡಿತವನ್ನು ಸಮರ್ಥವಾಗಿ ಬಿಂಬಿಸುವ ಕೃತಿ “ಗ್ಲಾನಿ’ ಎಂದು ರಂಗ ನಿರ್ದೇಶಕ ವಿಜಯ ವಾಮನ್ ಹೇಳಿದರು.
ನಗರದ ಪರಸ್ಪರ ಸಾಹಿತ್ಯ ವೇದಿಕೆಯಿಂದ ಲೇಖಕ ಜಿ.ಎಸ್.ಭಟ್ ಅವರ “ಗ್ಲಾನಿ’ ರಂಗ ಕೃತಿ ಕುರಿತು ಲೇಖಕರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣದಲ್ಲಿ ನಾಟಕೀಯ ಅಂಶಗಳು ಕಡಿಮೆ. ಅಂತಹ ಅಂಶಗಳನ್ನೇ ಆಯ್ಕೆ ಮಾಡಿಕೊಂಡು ಯಕ್ಷಗಾನದ ಜೊತೆಗೆ ರಂಗವಸ್ತುವನ್ನು ಮೇಳೈಸಿರುವುದು ಗ್ಲಾನಿ ಕೃತಿಯ ವಿಶೇಷವಾಗಿದೆ.
ಕೃತಿಯಲ್ಲಿ ಬಳಕೆಯಾಗಿರುವ “ರಾಜಧರ್ಮ’ ಪದದ ಹಿಂದೆ ಸಮಕಾಲೀನ ರಾಜಕೀಯವನ್ನು ವಿಶ್ಲೇಷಿಸುವ ಆಯಾಮವಿದೆ ಎಂದು ಅಭಿಪ್ರಾಯಪಟ್ಟರು. ಸ್ಥಿರತೆಗಿಂತ ಎಲ್ಲವೂ ಚಲನಶೀಲವಾಗಿರಬೇಕು ಎಂಬ ಆಶಯದ ಧ್ವನಿಯ ಮೂಲಕ ಗ್ಲಾನಿ ರಂಗ ಕೃತಿಯು ವಿಶೇಷ ಅನುಭವ ನೀಡುತ್ತದೆ.
ಮೇಲ್ನೋಟಕ್ಕೆ ಇದರ ವಸ್ತು ಸರಳವಾಗಿ ಕಂಡರೂ ಸಂಕೀರ್ಣ ಸಂಗತಿಗಳನ್ನು ಅದು ಒಳಗೊಂಡಿದೆ. ಹಲವು ಕಥನಗಳನ್ನು ಕಟ್ಟುವ ಮೂಲಕ ರಂಗದ ಮೇಲೆ ತರುವ ಸಾಧ್ಯತೆಯನ್ನು ಕೃತಿಯು ಒಳಗೊಂಡಿದೆ ಎಂದು ಬರಹಗಾರ ದೇವೇಂದ್ರ ಬೆಳೆಯೂರು ಹೇಳಿದರು.
ರಾಮನ ಸದ್ಗುಣಗಳ ಜೊತೆಗೆ ಅವಗುಣಗಳನ್ನು ಕೂಡ ವಿಶ್ಲೇಷಣೆ ಮಾಡಿರುವುದು ಕೃತಿಯ ವಿಶೇಷತೆಯಾಗಿದೆ. ವ್ಯಕ್ತಿಯನ್ನು ದೇವರನ್ನಾಗಿ ಮಾಡುವ ಪ್ರಕ್ರಿಯೆ ಸ್ವತಃ ರಾಮನಿಗೂ ಇಷ್ಟವಿರಲಿಲ್ಲ ಎಂಬ ಧ್ವನಿಯನ್ನು ಕೃತಿಯಲ್ಲಿ ವ್ಯಕ್ತಪಡಿಸುವ ಮೂಲಕ ಈ ಬಗೆಯ ರಾಜಕಾರಣದಲ್ಲಿ ತೊಡಗಿರುವ ಬಲಪಂಥದ ಮಾದರಿ ಕೊನೆಯಾಗಬೇಕು ಎಂಬ ಆಶಯ ಲೇಖಕರಲ್ಲಿ ಇರುವಂತೆ ಕಾಣುತ್ತದೆ ಎಂದು ಉಪನ್ಯಾಸಕಿ ಎಂ.ಎಸ್. ಸರೋಜ ಅಭಿಪ್ರಾಯಪಟ್ಟರು.
ಲೇಖಕ ಜಿ.ಎಸ್. ಭಟ್, ದೃಶ್ಯದ ನಿರಂತರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ಕೃತಿ ಲಕ್ಷ್ಮಣ ಹಾಗೂ ಸ್ತ್ರೀ ಪಾತ್ರಗಳನ್ನು ಒಳಗೊಂಡಿಲ್ಲ. ಇದಕ್ಕೊಂದು ಸಾಂಕೇತಿಕ ಅರ್ಥವಿದೆ. ಯಕ್ಷಗಾನದ ಚಲನಶೀಲತೆ ಮತ್ತು ನಾಟಕ ಪ್ರಯೋಗದ ನಿರ್ಬಂಧತೆಯ ನಡುವೆ ಸಮನ್ವಯತೆ ತರುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.
ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ| ಸಫ್ರಾಜ್ ಚಂದ್ರಗುತ್ತಿ, ಎಸ್.ಎಂ.ಗಣಪತಿ ಇದ್ದರು. ಸಿ.ಟಿ. ಬ್ರಹ್ಮಾಚಾರ್, ಡಾ| ಟಿ.ಎಸ್.ರಾಘವೇಂದ್ರ, ರಾಧಾಕೃಷ್ಣ ಬಂದಗದ್ದೆ, ಮೃತ್ಯುಂಜಯ, ಎಲ್.ಎಂ. ಹೆಗಡೆ, ಕೆ.ಜಿ. ರಾಮರಾವ್, ಡಾ| ದೇವೇಂದ್ರ ಕೆ.ಎಸ್., ಎಂ.ಎಸ್. ಕೃಷ್ಣಯ್ಯ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.