ಭಾರೀ ಹೆಸರು ಗಳಿಸಿದ್ದ ‘ಈಸೂರು ದಂಗೆ’ ಇನ್ನಿಲ್ಲ..!
ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸಿದ್ದ ಹೋರಿ
Team Udayavani, Mar 5, 2021, 5:48 PM IST
ಶಿವಮೊಗ್ಗ : ಭಾರೀ ಜನಮನ್ನಣೆ ಗಳಿಸಿದ್ದ ಈಸೂರು ದಂಗೆ ಹೋರಿ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಈ ಹೋರಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜನಪ್ರಿಯತೆ ಗಳಿಸಿತ್ತು.
ಈಸೂರು ಗ್ರಾಮದ ರೈತ ಕೊಪ್ಪದರ ಮಂಜಣ್ಣ ಎಂಬುವರು ಈ ಹೋರಿಯನ್ನು ಸಾಕಿದ್ದು, ಹೋರಿಹಬ್ಬದಂದು ಎಲ್ಲರ ಗಮನ ಸೆಳೆಯುತ್ತಿತ್ತು. ಅಲ್ಲದೆ ಈ ಹೋರಿಯನ್ನು ನೋಡಲೆಂದೇ ಅಕ್ಕ ಪಕ್ಕದ ಜಿಲ್ಲೆಯವರು ಹೋರಿ ಹಬ್ಬಕ್ಕೆ ಬರುತ್ತಿದ್ದರಂತೆ.
ಸ್ಪರ್ಧೆಯಲ್ಲಿ ಭಾಗವಹಿಸಿದರೆ ಬಹುಮಾನ ಫಿಕ್ಸ್ ಎನ್ನುವ ಮಟ್ಟಿಗೆ ಈಸೂರು ದಂಗೆ ನಂಬಿಕೆ ಗಳಿಸಿತ್ತು. 7 ಬೈಕ್, 15 ಫ್ರಿಜ್, 15 ಟಿವಿ, ಎತ್ತಿನಗಾಡಿ, ಬಂಗಾರ ಬಳೆ, 10ಕ್ಕೂ ಹೆಚ್ಚು ಗ್ರಾಂ ಬಂಗಾರ ಸೇರಿದಂತೆ ಹಲವು ಬಹುಮಾನ ಗೆದ್ದಿದೆ.
ಇಷ್ಟು ಜನಪ್ರಿಯತೆ ಪಡೆದ ಹೋರಿ ನಿನ್ನೆ ಸಂಜೆ ವಯೋಸಹಜವಾಗಿ ಮೃತಪಟ್ಟಿದ್ದು, ಟ್ರಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ಅಂತಿಮ ಸಂಸ್ಕಾರ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.