ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ: ರಮೇಶ್
Team Udayavani, Jun 10, 2018, 5:40 PM IST
ಶಿವಮೊಗ್ಗ: ಮಕ್ಕಳಲ್ಲಿ ಪರಿಸರ ಕುರಿತು ತಿಳುವಳಿಕೆ ಮೂಡಿಸಿದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಪರಿಸರ
ಕಾಪಾಡಲು ಸಾಧ್ಯ ಎಂದು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತ ಎಚ್.ಡಿ. ರಮೇಶ್ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಕೌಟ್ ಭವನದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಆವರಣದಲ್ಲಿ ಗಿಡ ನೆಟ್ಟು, ಮಕ್ಕಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು. ಪರಿಸರದ ಮಹತ್ವ ಗೊತ್ತಿದ್ದವರು ಅದರ ನಾಶ ಮಾಡಲಾರರು. ಇಂದು ಪರಿಸರ ತೀವ್ರ ಪ್ರಮಾಣದಲ್ಲಿ ನಾಶವಾಗುತ್ತಿರುವುದರಿಂದ ವಿವಿಧ ರೀತಿಯ ದುಷ್ಪರಿಣಾಮಗಳನ್ನು ನಾವು ಎದುರಿಸುವಂತಾಗಿದೆ.
ಇದರಿಂದಾಗಿ ಪರಿಸರದ ಮಹತ್ವ ಏನು ಎನ್ನುವುದು ಈಗ ಅರಿವಾಗತೊಡಗಿದೆ ಎಂದರು.
ಎಲ್ಲಿಯವರೆಗೆ ಮಕ್ಕಳಲ್ಲಿ ನಾವು ಪರಿಸರ, ಆರೋಗ್ಯ, ಪ್ರಕೃತಿ, ಕಾಡಿನ ಬಗ್ಗೆ ವಿಚಾರವನ್ನು ತುಂಬುವುದಿಲ್ಲವೋ
ಅಲ್ಲಿಯವರೆಗೆ ಅದರ ಮಹತ್ವ ಅವರಿಗೆ ಗೊತ್ತಾಗುವುದಿಲ್ಲ. ಪಠ್ಯ ಕ್ರಮದಲ್ಲಿ ಈ ಸಂಬಂಧ ವಿಚಾರಗಳಿದ್ದಲ್ಲಿ ಅದು ಮಕ್ಕಳ ಮನಸ್ಸನ್ನು ಸೆಳೆಯಲು ಯಶಸ್ವಿಯಾಗುತ್ತದೆ. ಈ ದೃಷ್ಟಿಯಿಂದ ಪರಿಸರ ಕುರಿತು ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದರು.
ಜಿಲ್ಲಾ ಸ್ಕೌಟ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ನೆಲ, ಜಲ, ಕಾಡು ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಗೊತ್ತಿದ್ದರೂ ಸಹ ಅದನ್ನು ನಾಶ ಮಾಡುವುದಕ್ಕೆ ಹೆಚ್ಚಿನ ಅದ್ಯತೆ ಕೊಟ್ಟಿರುವ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಬಳುವಳಿಯಾಗಿ ಬಂದ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ ಎಂದರು.
ಸ್ಕೌಟ್ ಆಯುಕ್ತ ಉಮೇಶ್ ಶಾಸ್ತ್ರಿ ಮಾತನಾಡಿ, ಪ್ರಕೃತಿದತ್ತವಾದ ಪರಿಸರ ಉಳಿಸುವ ಬಗ್ಗೆ ಮಕ್ಕಳಲ್ಲಿ
ಅರಿವು ಮೂಡಿಸಬೇಕು. ಪರಿಸರ ಸ್ವತ್ಛತೆ ಸಹಾ ಇಂದಿನ ದಿನದಲ್ಲಿ ಮಹತ್ವವಾಗಿದೆ. ಪ್ರತೀ ಮಕ್ಕಳು ತಮ್ಮ ಮನೆಯ
ಅಂಗಳದಲ್ಲಿ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದರು. ನಗರ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ
ಏರ್ಪಡಿಸಿದ್ದ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಕೌಟ್- ಗೈಡ್ಸ್ ತರಬೇತುದಾರ ರಾಜೇಶ್ ಇದ್ದರು. ಸಹಾಯಕ ಆಯುಕ್ತೆ ಭಾರತಿ ಡಯಾಸ್ ಉಸ್ತುವಾರಿ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.