ಮತದಾನದಲ್ಲೂ ಪರಿಸರ ಪ್ರೇಮ!
Team Udayavani, May 14, 2018, 5:28 PM IST
ಶಿವಮೊಗ್ಗ: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ-
ಯುವತಿಯರಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿತ್ತು. ಬಹುತೇಕರು ಮತದಾನ ಮಾಡಿದ ಬಳಿಕ ಉಗುರಿಗೆ
ಹಾಕಿದ ಶಾಹಿಯ ಗುರುತನ್ನು ಮೊಬೈಲ್‌ನಲ್ಲಿ “ಸೆಲ್ಫಿ’ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಮೊದಲ ಮತದಾನದ ಖುಷಿಯನ್ನು ಹಂಚಿಕೊಂಡರು.
ಮತ್ತೆ ಕೆಲವರು ಪ್ರಥಮ ಮತದಾನದ ಅನುಭವವನ್ನು ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ
ಮೂಲಕ ಸದಾ ನೆನಪಿನಲ್ಲುಳಿಯುವ ಮಾದರಿ ಕೆಲಸ ಮಾಡಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಶಿವಮೊಗ್ಗ
ನಗರದ ಪಾರ್ಕ್ ಬಡಾವಣೆ ನಿವಾಸಿ ಹಾಗೂ ಬಿಕಾಂ ವಿದ್ಯಾರ್ಥಿನಿ ವೈಭವಿ ತನ್ನ ಮೊದಲ ಮತದಾನದ ನೆನಪಿಗಾಗಿ
ವ್ಯಕ್ತಪಡಿಸಿದ ಪರಿಸರ ಕಾಳಜಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮೊದಲ ಮತದಾನದ ಸಂಭ್ರಮವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ವೈಭವಿ ಸೋಮಿನಕೊಪ್ಪದ
ಕೆಎಚ್‌ಬಿ ಕಾಲೋನಿಯಲ್ಲಿ ಹೊಂಗೆ ಗಿಡ ನೆಟ್ಟಿದ್ದಾರೆ. ತಾವು ನೆಟ್ಟ ಗಿಡದ ಪಕ್ಕ ಕುಳಿತುಕೊಂಡು, ಕಪ್ಪು ಶಾಹಿ ಹಾಕಿದ
ಬೆರಳನ್ನು ತೋರ್ಪಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ
ಕಾರಣ ಸಾಕಷ್ಟು ಎಗ್ಸೆ„ಟ್ ಆಗಿದ್ದೆ. ಜೊತೆಗೆ ಕುತೂಹಲವಿತ್ತು.
ಮತದಾನ ಮಾಡಿದ ನಂತರ ಖುಷಿಯಾಯ್ತು. ಈ ಖುಷಿಯನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನೆನಪಿಟ್ಟುಕೊಳ್ಳುವ ಕೆಲಸ ಮಾಡುವಂತೆ ತಂದೆ ಸಲಹೆ ನೀಡಿದರು. ಅದರಂತೆ ತಂದೆಯ ಜೊತೆ ತೆರಳಿ ಹೊಂಗೆ
ಗಿಡಗಳನ್ನು ಖರೀದಿಸಿ ನೆಟ್ಟಿದ್ದೇನೆ. ಆ ಗಿಡಗಳನ್ನು ದೊಡ್ಡದಾಗಿ ಮಾಡುವವರಿಗೂ ಪೋಷಣೆ ಮಾಡುತ್ತೇನೆ. ತಂದೆ ನೀಡಿದ ಸಲಹೆಯಿಂದ ತಮ್ಮಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗುವಂತೆ ಮಾಡಿತು. ಜೊತೆಗೆ ಮತದಾನದ ಮಹತ್ವದ ಬಗ್ಗೆಯೂ ಅರಿವು ಉಂಟು ಮಾಡಿತು ಎಂದು ವೈಭವಿ ತಿಳಿಸಿದ್ದಾರೆ.
ಪ್ರಪ್ರಥಮ ಬಾರಿಗೆ ಮತದಾನ ಮಾಡುವ ಯುವಕ- ಯುವತಿಯರು ಮೊದಲ ಮತದಾನದ ಸವಿನೆನಪಿಗಾಗಿ
ಪ್ರಕೃತಿ ಸಂರಕ್ಷಣೆಯ ಕಾರ್ಯ ಮಾಡಬೇಕೆಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದೆ.
ಈ ವಿಷಯವನ್ನು ತಮ್ಮ ಪುತ್ರಿಗೆ ತಿಳಿಸಿದ್ದೆ. ಅದರಂತೆ ಆಕೆ ಗಿಡಗಳನ್ನು ನೆಡುವುದರ ಜೊತೆಗೆ, ಪೋಷಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾಳೆ. ಇದು ತಮ್ಮಲ್ಲಿ ಸಂತಸ ಉಂಟು ಮಾಡಿದೆ ಎಂದು ವೈಭವಿ ಅವರ ತಂದೆ ಕುಶಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.