ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ
•ಉದ್ಯೋಗ ಖಾತ್ರಿಯಲ್ಲಿ ಶೇ. 77 ಪ್ರಗತಿ •ಕಂದಾಯ ವಸೂಲಾತಿಗೆ ಆದ್ಯತೆ ನೀಡಿ: ಹಕ್ರೆ
Team Udayavani, Aug 4, 2019, 1:06 PM IST
ಸಾಗರ: ತಾಪಂ ಸಾಮರ್ಥ್ಯ ಸೌಧದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನಡೆಸಿದರು.
ಸಾಗರ: ಬರುವ ದಿನಗಳಲ್ಲಿ ಪ್ರತಿ ಗ್ರಾಪಂ ಕೇಂದ್ರ ಭಾಗಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಅನಿವಾರ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾಪಂನಲ್ಲಿ ಈ ಘಟಕಕ್ಕಾಗಿ ಒಂದರಿಂದ ಎರಡು ಎಕರೆ ಸ್ಥಳವನ್ನು ಕಾಯ್ದಿರಿಸಬೇಕು. ರಿಪ್ಪನ್‌ಪೇಟೆಯಲ್ಲಿ ಕೇವಲ 50-60 ಅಡಿ ಜಾಗದಲ್ಲಿ ಇಂತಹ ಘಟಕ ರಚನೆಯಾಗಿ ಯಶಸ್ವಿಯಾಗಿರುವುದನ್ನು ಗ್ರಾಪಂ ಆಡಳಿತಗಳು ಗಮನಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಸೂಚಿಸಿದರು.
ನಗರದ ಸಾಮರ್ಥ್ಯ ಸೌಧದಲ್ಲಿ ಶನಿವಾರ ಕರೆಯಲಾಗಿದ್ದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿ ಘಟಕ ಯೋಜನೆಯಲ್ಲಿ ತಾಲೂಕಿನ ಮೂರು ಗ್ರಾಪಂನಲ್ಲಿ ಮಾತ್ರ ಪ್ರಗತಿ ಆಗಿದೆ. ಉಳಿದೆಡೆ ಯಾವುದೇ ಕೆಲಸ ಆಗಿಲ್ಲ. ಇಂತಹ ವಿಚಾರಗಳಲ್ಲಿ ತುಸು ಮಟ್ಟಿನ ವಿರೋಧ ಸಹಜ. ಜನರಲ್ಲಿ ಮನವರಿಕೆ ಮೂಡಿಸಿ ದೊಡ್ಡ ಪ್ರಮಾಣದ ಸಮಸ್ಯೆ ಉಂಟಾಗುವ ಮೊದಲು ಕ್ರಮ ಕೈಗೊಳ್ಳಬೇಕು. ಈ ಘಟಕಕ್ಕೆ ಸರ್ಕಾರದಿಂದ 20 ಲಕ್ಷ ರೂ. ಅನುದಾನ ಸಿಗುತ್ತದೆ. ಹೆಚ್ಚುವರಿಗೂ ಪ್ರಯತ್ನಿಸಬಹುದು ಎಂದು ತಿಳಿಸಿದರು.
ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾನಗಳ ಜಾಗ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ಒಂದಕ್ಕಿಂತ ಹೆಚ್ಚು ಸ್ಮಶಾನ ನಿರ್ಮಾಣಕ್ಕೂ ಮುಂದಾಗಬಹುದು. ಈ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅಗತ್ಯವಿರುವ ಸ್ಮಶಾನಕ್ಕಾಗಿ ಸ್ಥಳವನ್ನು ಗುರುತು ಮಾಡಿ ಪ್ರಸ್ತಾವನೆಯನ್ನು ತಾಪಂಗೆ ಕಳಿಸಿ ಎಂದು ಹೇಳಿದರು.
ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಶೇ. 77ರಷ್ಟು ಮಾತ್ರ ಪ್ರಗತಿಯಲ್ಲಿದೆ. ಅರಲಗೋಡು, ಪಡವಗೋಡು, ಖಂಡಿಕಾ ಮೊದಲಾದ ಪಂಚಾಯತ್‌ಗಳಲ್ಲಿ ಶೇ. 50ರಷ್ಟೂ ಎನ್‌ಆರ್‌ಇಜಿ ಕೆಲಸ ಆಗಿಲ್ಲ. ತ್ಯಾಗರ್ತಿ, ಹಿರೇನೆಲ್ಲೂರು, ಕೆಳದಿ, ಬರೂರು, ಭೀಮನೇರಿ, ಆನಂದಪುರ, ಆವಿನಹಳ್ಳಿ ಮೊದಲಾದೆಡೆ ಗುರಿ ಮೀರಿದ ಸಾಧನೆ ಆಗಿರುವುದು ಸಂತೋಷ. ಈ ಯೋಜನೆ ಇನ್ನೂ ಸಮರ್ಪಕವಾಗಿ ನಡೆಯುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಯತ್ನಿಸಬೇಕು. ಉದ್ಯೋಗ ಖಾತ್ರಿಯು ಕಳೆದ ವರ್ಷಕ್ಕಿಂತ ಈ ವರ್ಷ ಹಿನ್ನಡೆ ಪಡೆದಿದೆ. ಇದಕ್ಕೆ ಕಾರಣ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕಾಮಗಾರಿಗೆ ಅನುದಾನವು ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದೆ. ಇದು ನಮ್ಮ ಗಮನಕ್ಕೂ ಬಂದಿದ್ದು. ಈಗಾಗಲೇ ಜಿಪಂ ಸಭೆಯಲ್ಲಿ ಅನುದಾನದ ಹಣ ಬಿಡುಗಡೆ ಮಾಡುವುದಕ್ಕಾಗಿ ಒತ್ತಾಯಿಸಲಾಗಿದೆ ಎಂದರು. ಉದ್ಯೋಗ ಖಾತ್ರಿ ಕಾಮಗಾರಿ ಸಂಬಂಧ ಹಲವು ಗ್ರಾಪಂಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಆವಿನಹಳ್ಳಿ, ತಲವಾಟ ಮುಂತಾದ ಗ್ರಾಪಂಗಳಲ್ಲಿ ನಡೆಸಲಾದ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಅಧ್ಯಕ್ಷರು, ಪಿಡಿಒಗಳು ಪ್ರಸ್ತಾಪಿಸಿ ದರು. ಎನಾರ್‌ಇಜೆ ಸಂಬಂಧ ಸಾಮಗ್ರಿಗಳನ್ನು ನೀಡಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಅಹವಾಲು ಹೇಳಿಕೊಂಡರು.
ಕಂದಾಯ ವಸೂಲಾತಿ ಕಾರ್ಯ ವಿಳಂಬವಾಗುತ್ತಿದೆ. ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಶೇ. 64ರಷ್ಟು ಕಂದಾಯ ವಸೂಲಾತಿ ಆಗಿದೆ. ಹೆಗ್ಗೋಡು ಸೇರಿದಂತೆ ಕೆಲವು ಗ್ರಾಪಂಗಳು ಕಳೆದ ಸಾಲಿನಲ್ಲಿ ಶೇ. 90ರಷ್ಟು ಕಂದಾಯ ವಸೂಲಿ ಮಾಡಿವೆ. ಕಾನಲೆಯಂಥ ಗ್ರಾಪಂಗಳು ಕೇವಲ ಶೇ. 48ರಷ್ಟು ಕಂದಾಯ ವಸೂಲಾತಿ ಮಾಡಿವೆ. ಈ ಬಾರಿ ಅರಳಗೋಡು ಶೇ. 7, ಆಚಾಪುರ ಶೇ.3 ಚೆನಗೊಂಡ ಶೇ. 4, ಗೌತಮಪುರ ಶೇ. 6 ತರಹದ ಪ್ರಮಾಣದಲ್ಲಿ ಕಂದಾಯ ವಸೂಲಾತಿ ನಡೆಯುತ್ತಿದೆ. ಮಳೆಗಾಲದಲ್ಲಿ ವಸೂಲಾತಿ ವಿಳಂಬ ಎಂಬಿತ್ಯಾದಿ ನೆಪ ಕೊಡದೇ ಕಂದಾಯ ವಸೂಲಾತಿಗೆ ಆದ್ಯತೆ ನೀಡಬೇಕು. ಪರಿಷ್ಕರಣೆ ಮಾಡಿ ಆದಾಯ ಹೆಚ್ಚಿಸಿಕೊಳ್ಳುವ ಚಿಂತನೆ ಅಗತ್ಯ ಎಂದರು.
ಗ್ರಾಮಸಭೆಯಲ್ಲಿ ವಸತಿ ರಹಿತರ ಆಯ್ಕೆ ಮಾಡಿ ಪಟ್ಟಿ ಕಳುಹಿಸಿದರೂ ಆಯ್ಕೆ ಪಟ್ಟಿ ಅಂತಿಮವಾಗಿ ಜಿಪಂನಿಂದ ಅನುಮೋದನೆ ಬರಲು ವಿಳಂಬವಾಗಿ ಗ್ರಾಪಂ ಬಗ್ಗೆ ತಪ್ಪು ಕಲ್ಪನೆ ಬರುವುದು, ಎಸ್‌ಸಿ ಫಲಾನುಭವಿಗಳ ಮನೆ ಸೌಲಭ್ಯ ಸ್ಥಗಿತಗೊಳಿಸಿರುವುದು, ಜಿಪಂನಿಂದ ಕ್ರಿಯಾಯೋಜನೆ, 14ನೇ ಹಣಕಾಸಿಗೆ ಸಂಬಂಧಿಸಿದ ಕ್ರಿಯಾಯೋಜನೆ ಮುಂತಾದವು ವಾಪಸಾಗುವುದು ಮುಂತಾದ ವಿಷಯಗಳನ್ನು ಪ್ರಸ್ತಾಪಿಸಲಾಯಿತು.
ತಾಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.