ನೋಡ ನೋಡುತ್ತಿದ್ದಂತೆ ಬಿದ್ದ ಮರ: ಮಾಜಿ ಸಚಿವರು, ಶಾಸಕರ ತಂಡದಿಂದಲೇ ತೆರವು ಕಾರ್ಯ
Team Udayavani, Aug 1, 2024, 10:35 AM IST
ಹೊಸನಗರ: ಮಳೆ ದುರಂತದ ಜೊತೆಗೆ ಇಂತಹದ್ದೊಂದು ವಿಶೇಷತೆಗೆ ನಗರ ಹೋಬಳಿ ಸಾಕ್ಷಿಯಾಗಿದೆ.
ಚಕ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಮಾಜಿ ಸಚಿವರು ಶಾಸಕರ ದಂಡೇ ತೆರಳುತ್ತಿದ್ದಂತೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇನ್ನೇನು ಮಾಡೋದು ಎಂದು ಯೋಚಿಸುವಷ್ಟರಲ್ಲೇ ಅಲ್ಲೇ ಇದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ಇಷ್ಟು ಜನ ಇದೀವಿ ಎಳೆದು ಹಾಕೋದಲ್ವಾ ಅಂತ ಕೈಹಾಕಿಯೇ ಬಿಟ್ಟರು.
ತಡಮಾಡದೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ರವಿಕುಮಾರ್ ಮರ ತೆರವಿಗೆ ಕೈಹಾಕಿಯೇ ಬಿಟ್ಟರು. ಹುರುಪುಗೊಂಡ ಉಳಿದ ಮುಖಂಡರು, ಕಾರ್ಯಕರ್ತರು ಹೊಸ ಹುರುಪಿನೊಂದಿಗೆ ಅಖಾಡಕ್ಕಿಳಿದರೇ.. ನೋಡ ನೋಡುತ್ತಲೇ ಮರ ಬಿದ್ದ ರೀತಿಯಲ್ಲೇ.. ಮರವನ್ನು ರಸ್ತೆಯಿಂದಾಚೇ ಎಳೆದು ಹಾಕಿಯೇ ಬಿಟ್ಟರು.
ಜನಪ್ರತಿನಿಧಿಗಳ ದಂಡು ಬರುವ ಕೆಲವೇ ಕ್ಷಣದಲ್ಲಿ ಮರ ಉರುಳಿತ್ತು. ಅದೃಷ್ಟ ವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.