ಈತ ಮಸಾಲೆ ರುಬ್ಬುವುದು,ಮೊಬೈಲ್ ಚಾರ್ಜ್ ಇಡುವುದು ಮೆಸ್ಕಾಂ ಆಫೀಸಲ್ಲೇ! ಏನಿದು ಪ್ರತಿಭಟನೆ
Team Udayavani, May 30, 2022, 4:31 PM IST
ಹೊಳೆಹೊನ್ನೂರು: ಮನೆಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನಲೆಯಲ್ಲಿ ರೈತನೋರ್ವ ಮೆಸ್ಕಾಂಗೆ ಕಚೇರಿಗೆ ಮಿಕ್ಸಿ ತೆಗೆದುಕೊಂಡು ಹೋಗಿ ಮಸಾಲೆ ರುಬ್ಬುವುದು ಹಾಗೂ ಮೊಬೈಲ್ ಚಾರ್ಜ್ ಇಟ್ಟು ಕಳೆದ 8 ತಿಂಗಳಿನಿಂದ ವಿನೂತನ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದಾರೆ.
ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ ಕಳೆದ ವರ್ಷ ಸ್ವಂತ ಹಣದಲ್ಲಿ ಟಿ.ಸಿ. ಅಳವಡಿಸಿಕೊಂಡು, ಮನೆಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದು, ಮೆಸ್ಕಾಂ ಅಧಿಕಾರಿಗಳು ಮೀಟರ್ ಹಾಗೂ ವಿದ್ಯುತ್ ಕಂಬವನ್ನು ಹಾಕಿದ್ದು ಆದರೆ, ಪ್ರತಿನಿತ್ಯ ಕೇವಲ 2 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಒಂದೆರೆಡು ತಿಂಗಳು ಅಕ್ಕ ಪಕ್ಕದ ಮನೆಗಳಲ್ಲಿ ಮಸಾಲೆ ರುಬ್ಬಿಕೊಂಡು ,ಮೊಬೈಲ್ ಚಾರ್ಜ್ ಮಾಡಿಕೊಂಡು ರೋಸಿ ಹೋದ ಹನುಮಂತ ಮೆಸ್ಕಾಂ ಇಂಜಿನಿಯರ್‌ಗೆ ತರಾಟೆಗೆ ತೆಗೆದು ಕೊಂಡಾಗ ಮಾತಿನ ಚಕಮಕಿಯಲ್ಲಿ ಅಧಿಕಾರಿ ಬಾಯ್ತಪ್ಪಿ ಮನೆಯಲ್ಲಿ ಕರೆಂಟ್ ಇಲ್ಲ ಎಂದರೆ ಕೆಇಬಿಗೆ ತಂದು ಮಸಾಲೆ ರುಬ್ಬಿಕೊಂಡು ಹೋಗ್ತೀಯಾ ಎಂದಿದ್ದಾರೆ. ಅಂದಿನಿಂದ ಹನುಮಂತ ಕೆಇಬಿಗೆ ಬಂದು ಮಿಕ್ಸಿ ತಂದು ಮಸಾಲೆ ರುಬ್ಬಿಕೊಂಡು ಹೋಗಲು ಶುರು ಮಾಡಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ಹನುಮಂತನ ವಿದ್ಯುತ್ ಸಮಸ್ಯೆ ಸರಿಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಹನುಮಂತ ಮಂಗೋಟೆಯಲ್ಲಿ ನಿರ್ಮಿಸಿರುವ ಮನೆಗೆ ಸಮಪರ್ಕ ವಿದ್ಯುತ್ ವಿತರಣೆಗೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳು, ಶಾಸಕರು, ಸಂಸದರನ್ನು ಭೇಟಿ ಮಾಡಿ ಹತ್ತಾರು ಬಾರಿ ಮನವಿ ಮಾಡಿದರು ಯಾರೊಬ್ಬರು ಸ್ವಂದಿಸಿದ ಕಾರಣ ಹನುಮಂತ ಪ್ರತಿನಿತ್ಯ ಮಂಗೋಟೆಯಿಂದ ಮಲ್ಲಾಪುರದ ವಿತರಣಾ ಕೇಂದ್ರಕ್ಕೆ ಬಂದು ಮನೆಗೆ ಬೇಕಾದ ಮಸಾಲೆಯನ್ನು ರುಬ್ಬಿಕೊಂಡು ಮನೆಯಲ್ಲಿರುವ 4-5 ಮೊಬೈಲ್‌ಗಳನ್ನು ಚಾರ್ಜ್ ಗೆ ಹಾಕಿ ಬ್ಯಾಟರಿ ಪುಲ್ ಮಾಡಿಕೊಂಡು ಹೋಗುತ್ತಿದ್ದಾನೆ. ವ್ಯಕ್ತಿಯೊಬ್ಬ ಕೆಇಬಿ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದರೂ ಯಾವೊಬ್ಬ ಸಿಬ್ಬಂದಿಯೂ ಹನುಮಂತನನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮೇಲಾಧಿಕಾರಿಗಳಿಗೆ ಯಾವುದೇ ದೂರನ್ನು ನೀಡಿಲ್ಲ.
ಮನೆಯಲ್ಲಿ ಎಂಎಸ್ಸಿ ಓದುತ್ತಿರುವ ವಿದ್ಯಾರ್ಥಿಯಿದ್ದು, ವಿದ್ಯುತ್ ಸಮಸ್ಯೆಯಿಂದಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಅಲ್ಲದೇ ರಾತ್ರಿ ವೇಳೆಯಲ್ಲಿ ವಿದ್ಯುತ್ ಇಲ್ಲದೇ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗಿದೆ. ಇದನ್ನು ಆದಷ್ಟು ಬೇಗ ನಿವಾರಿಸಿ ನಮಗೆ ಸಮಪರ್ಕ ವಿದ್ಯುತ್ ಪೂರೈಸಬೇಕಾಗಿ ಮನವಿ – ಮಾರಿಗುಡಿ ಹನುಮಂತ, ಮಂಗೋಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.