Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Team Udayavani, Jan 9, 2025, 9:04 PM IST
ಶಿವಮೊಗ್ಗ: ಆಕಸ್ಮಿಕವಾಗಿ ಕಾಲುವೆಗೆ ಬಿದ್ದಿದ್ದ ಕುದುರೆಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಆಲ್ಕೊಳ ಸಮೀಪದ ಗೋಲ್ಡನ್ ಸಿಟಿ ಲೇಔಟ್ ಬಳಿ ಗುರುವಾರ (ಅ.09) ಸಂಜೆ ಕಾರ್ಯಾಚರಣೆ ನಡೆಸಿ, ಕುದುರೆಯನ್ನು ಮೇಲೆತ್ತಲಾಗಿದೆ.
ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮೇಯಲು ಹೋಗಿದ್ದ ಕುದುರೆ ಮೂರು ದಿನದ ಹಿಂದೆ ಆಯಾತಪ್ಪಿ ಕಾಲುವೆಗೆ ಬಿದ್ದಿರುವ ಸಾಧ್ಯತೆಯಿದೆ. ಹಾಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು.
ಕತ್ತಲಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಹರಸಾಹಸ ಪಡಬೇಕಾಯಿತು. ಅಲ್ಲದೆ ಅತ್ಯಂತ ಆಳವಿದ್ದರಿಂದ ಸಿಬ್ಬಂದಿ ರೋಪ್ ಬಳಸಿ ಕಾಲುವೆಗೆ ಇಳಿದು ಕಾರ್ಯಾಚರಣೆ ನಡೆಸಿದರು. ರೋಪ್, ಲ್ಯಾಡರ್ ಬಳಿಸಿ ಕುದುರೆಯನ್ನು ಮೇಲೆತ್ತಲಾಗಿದೆ. ಸದ್ಯ ಕುದುರೆ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ನರೇಂದ್ರ, ಶರತ್, ರಾಜೀವ್ ಸುಣಗಾರ, ಸಂತೋಷ್, ಯಶ್ವಂತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.