ಭದ್ರಾವತಿಯಲ್ಲಿ ಐವರಿಗೆ ಕೋವಿಡ್ ಸೋಂಕು
Team Udayavani, Jul 18, 2020, 3:59 PM IST
ಭದ್ರಾವತಿ: ಶುಕ್ರವಾರ ತಾಲೂಕಿನಲ್ಲಿ 5 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಈವರೆಗೆ ಒಟ್ಟು 55 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಸೋಂಕಿತರ ಸಂಖ್ಯೆ ಅರ್ಧಶತಕ ದಾಟಿದಂತಾಗಿದೆ.
ದೇವರನರಸಿಪುರ: ದೇವರನರಸಿಪುರದಲ್ಲಿ 38 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದ್ದು ಶುಕ್ರವಾರ ಸಂಜೆ ಪತ್ತೆಯಾಗಿದೆ. ಅಣ್ಣಾನಗರ: ಆರ್.ಎಂ.ಸಿ. ಸಮೀಪವಿರುವ ಅಣ್ಣಾನಗರದಲ್ಲಿನ 65 ವರ್ಷದ ವೃದ್ಧನಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಸೀಗೆಬಾಗಿ: ಸೀಗೆಬಾಗಿಯ ನಿವಾಸಿ 27 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.
ಸರ್ಕಾರಿ ಬಸ್ ಡಿಪೋ ಹಿಂಭಾಗ: ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹಿಂಭಾಗದಲ್ಲಿರುವ ಪ್ರದೇಶದ ನಿವಾಸಿ 49 ವರ್ಷದ ವ್ಯಕಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈತ ಉಡುಪಿಗೆ ಹೋಗಿ ಬಂದಿದ್ದನೆನ್ನಲಾಗಿದೆ. ಹಳೇನಗರದ ನಿರ್ಮಲಾ ಆಸ್ಪತ್ರೆಯ ನರ್ಸ್ ವೃತ್ತಿಯ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದ್ದು ಆಕೆಯ ಶುಶ್ರೂಷೆಯನ್ನು ಆಸ್ಪತ್ರೆಯಲ್ಲಿಯೇ ಮಾಡಲಾಗುತ್ತಿದೆ.
ಸೋಂಕಿತ ವ್ಯಕ್ತಿಗಳ ವಾಸದ ಪ್ರದೇಶದ ಸ್ಥಳಕ್ಕೆ ನಗರಸಭಾ ಆಯುಕ್ತ ಮನೋಹರ್, ತಾಲೂಕು ಆರೋಗ್ಯಾ ಧಿಕಾರಿ ಡಾ| ಗಾಯತ್ರಿ, ಆರೋಗ್ಯ ಇಲಾಖೆ ಸಿಬ್ಬಂದಿ ನೀಲೇಶ್ ರಾಜ್ ಹಾಗೂ ಪೊಲೀಸ್ ಅಧಿ ಕಾರಿಗಳು ಭೇಟಿ ನೀಡಿ ಆ ಎಲ್ಲಾ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ, ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.