3000 ಮಂದಿಗೆ ಆಹಾರದ ಕಿಟ್
Team Udayavani, Jun 12, 2021, 4:18 PM IST
ತೀರ್ಥಹಳ್ಳಿ: ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಹಮಾಲಿಗಳು, ಬಡ ಕಾರ್ಮಿಕರು, ಕ್ಷೇತ್ರದ ಬಡವರು ಸೇರಿದಂತೆ ಹಲವರಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ ನಿರಂತರವಾಗಿ ಸಾಗಿದೆ. ಈ ನಡುವೆ ಗುರುವಾರ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಸುಮಾರು 3000 ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಚಾಲನೆ ನೀಡಿದರು.
ಪ್ರೇರಣಾ ಟ್ರಸ್ಟ್, ಸೇವಾ ಭಾರತಿ ಮತ್ತು ಪರಿವಾರ ಸಂಘಟನೆಗಳ ನೂರಾರು ಕಾರ್ಯಕರ್ತರು ಈ ಕಿಟ್ ಸಿದ್ಧಪಡಿಸಿದ್ದಾರೆ. ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೇವಾ ಭಾರತಿ, ಪ್ರೇರಣಾ ಟ್ರಸ್ಟ್, ಪರಿವಾರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಶ್ರಮಿಕ ವರ್ಗದವರಿಗೆ ಆಹಾರದಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದಸಂಸದ ರಾಘವೇಂದ್ರ ಅವರು, ಪ್ರಧಾನಿ ಮೋದಿ ಅವರು ಇಂತಹ ಸ್ಥಿತಿಯಲ್ಲಿ ಅಧಿಕಾರದಲ್ಲಿಇಲ್ಲದಿದ್ದರೆ ಈ ದೇಶದ ಸ್ಥಿತಿ ಕಷ್ಟ ಇತ್ತು. ವಿಶ್ವದಲ್ಲೇಅತೀ ಹೆಚ್ಚು ಜನರಿಗೆ ಲಸಿಕೆ ಕೊಟ್ಟ ದೇಶ ನಮ್ಮದು ಎಂದರು.
ಶಿವಮೊಗ್ಗ ಜಿಲ್ಲೆಗೆ ಕರೋನಾ ನಡುವೆಯೂ ಕೇಂದ್ರ ಸರಕಾರ 5000 ಕೋಟಿ ಬಿಡುಗಡೆ ಮಾಡಿದೆ. 350 ಕೋಟಿ ಆಗುಂಬೆ ರಸ್ತೆಗೆ ಮಂಜೂರಾಗಿದ್ದು, ಘಾಟಿಯಲ್ಲಿ ಯೋಜನೆ ಬಳಿಕಹೆವಿ ವಾಹನ ಕೂಡ ಓಡಾಡಬಹುದು. ಎಲ್ಲಾಸೇರಿ ಕರೋನಾ ವಿರುದ್ಧ ಹೋರಾಟ ಮಾಡೋಣ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪ್ರತಿಯೊಬ್ಬರೂ ಕಷ್ಟದಲ್ಲಿದ್ದಾರೆ. ಬಹುತೇಕರ ಬದುಕನ್ನು ಕೊರೊನಾ ಬೀದಿಗೆ ತಂದಿದೆ. ಆಟೋ ಚಾಲಕರು, ಬಡವರು, ಕಾರ್ಮಿಕರಿಗೆ ಅನ್ನ ಇಲ್ಲ ಎನ್ನಬಾರದು. ಹೀಗಾಗಿ ಕಿಟ್ ವಿತರಣೆ ಮಾಡಿದ್ದೇವೆ ಎಂದರು.
ಬಿಜೆಪಿ ನಾಯಕ ಭಾನುಪ್ರಕಾಶ್ ಮಾತನಾಡಿ, ದೇಶಕ್ಕೆ ಪ್ರಧಾನಿ ಮೋದಿ ಅವರು ಏಕೈಕ ಆಶಾಕಿರಣ. ಎಲ್ಲರೂ ಸೇರಿ ಕೊರೊನಾ ಓಡಿಸಬೇಕು. ಎಲ್ಲರಿಗೂ ಧೈರ್ಯ ತುಂಬಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ತೀರ್ಥಹಳ್ಳಿಯ ನಾಯಕರಾದ ಬಾಳೆಬೈಲುರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ಗೀತಾ ಶೆಟ್ಟಿ, ಸಿ.ಬಿ. ಈಶ್ವರ್, ನಾಗರಾಜ ಶೆಟ್ಟಿ, ಸಾಲೆಕೊಪ್ಪರಾಮಚಂದ್ರ, ಕಾಸರವಳ್ಳಿ ಶ್ರೀನಿವಾಸ್, ಯಶೋಧ ಮಂಜುನಾಥ, ಸಂದೇಶ್ ಜವಳಿ, ಕುಕ್ಕೆ ಪ್ರಶಾಂತ್, ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಖರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.