ಸಾಗರ: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
Team Udayavani, Jul 23, 2022, 4:44 PM IST
ಸಾಗರ: ಇಲ್ಲಿನ ಹೊಸನಗರ ರಸ್ತೆಯಲ್ಲಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಸಿರ್ ಎಂಬಾತನನ್ನು ಅಬಕಾರಿ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಆರೋಪಿ ಬಳಿ ಇದ್ದ 60 ಗ್ರಾಂ ಒಣ ಗಾಂಜಾವನ್ನು ಬೈಕ್ ಸಮೇತ ವಶಪಡಿಸಿಕೊಳ್ಳಲಾಗಿದೆ. ಅಬ್ಕಾರಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಬಕಾರಿ ನಿರೀಕ್ಷಕ ಸಂದೀಪ್ ಎಲ್.ಸಿ., ಉಪ ನಿರೀಕ್ಷಕ ಸಂತೋಷ್, ವಿನ್ನಿ ಎಚ್.ಲೋಬೋ, ಸಿಬ್ಬಂದಿ ಗುರುಮೂರ್ತಿ, ಮುದಾಸಿರ್, ದೀಪಕ್ ಯು.ಪಿ., ಅರುಣ್ ಜಿ. ಮಡಿವಾಳ, ಕನ್ನಯ್ಯ, ಗಣಪತಿ ಗುಡ್ಡೇಮನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮತ್ತೊಂದು ಪ್ರಕರಣ: ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಧರ ನಗರದ ಕಡೆ ಹೋಗುವ ಸೊರಬ ಮುಖ್ಯ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಜನ್ನತ್ ನಗರ ಕಿಶೋರ್ ಸಿಂಗ್ ಹಾಗೂ ನೆಹರು ನಗರದ ಸುನಿಲ್ (27) ಅವರನ್ನು ವಶಕ್ಕೆ ಪಡೆದರು.
ಆರೋಪಿಗಳಿಂದ ಅಂದಾಜು ಮೌಲ್ಯ 30 ಸಾವಿರ ರೂ.ಗಳ ಒಟ್ಟು 1.135 ಕೆಜಿ ಒಣ ಗಾಂಜಾವನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.