ಗೌರಿ ಲಂಕೇಶ್ ಹತ್ಯೆಗೆ ಆಕ್ರೋಶ
Team Udayavani, Sep 15, 2017, 4:50 PM IST
ಶಿವಮೊಗ್ಗ: ಪತ್ರಕರ್ತೆ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಒಕ್ಕೂಟ ನಗರದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಸಾವಿರಾರರು ಜನ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಗೌರಿ ಹತ್ಯೆಯನ್ನು ಖಂಡಿಸಿದರು. ನಾನು ಗೌರಿ, ನಾವೆಲ್ಲರೂ
ಗೌರಿ ಎಂಬ ಘೋಷಣೆ ಮೆರವಣಿಗೆ ಉದ್ದಕ್ಕೂ ಪ್ರತಿಧ್ವನಿಸಿತು. ಹತ್ಯೆ ಮಾಡಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರದ ಕುವೆಂಪು ರಂಗಮಂದಿದ ಆವರಣದಿಂದ ಹೊರಟ ಮೆರವಣಿಗೆಗೆ ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್
ಚಾಲನೆ ನೀಡಿದರು. ಮೆರಣಿಗೆಯಲ್ಲಿ ಪತ್ರಕರ್ತರು, ವಿವಿಧ ಧರ್ಮಗಳ ಧರ್ಮ ಗುರುಗಳು, ಪ್ರಗತಿಪರ ಸಂಘಟನೆಗಳ ಪ್ರಮುಖರರು, ರೈತ ಸಂಘಟನೆ ಪ್ರಮುಖರು, ವಿವಿಧ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು, ಚಿಂತಕರು, ಸಾಹಿತಿಗಳು, ಹೋರಾಟಗಾರರು ಮತ್ತಿತರರು ಪಾಲ್ಗೊಂಡಿದ್ದರು.
ರಂಗಮಂದಿರದಿಂದ ಹೊರಟ ಪಂಜಿನ ಮೆರವಣಿಗೆ, ಬಸವೇಶ್ವರ ವೃತ್ತ, ವೀರಭದ್ರ ಚಿತ್ರಮಂದಿರ ರಸ್ತೆ, ಬಿಎಚ್ ರಸ್ತೆ. ಮುಖ್ಯ ಬಸ್ ನಿಲ್ದಾಣ, ಎಎ ವೃತ್ತ ಮೂಲಕ ನೆಹರೂ ರಸ್ತೆ ಮಾರ್ಗವಾಗಿ ಗೋಪಿ ವೃತ್ತ ತಲುಪಿತು. ಗೋಪಿವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ವಿಚಾರವಾದ, ಮನುಷ್ಯತ್ವ, ಬಹುತ್ವ ವಿರೋಧಿಗಳು ಗೌರಿಯನ್ನು ಹತ್ಯೆ ಮಾಡಿದ್ದಾರೆ. ಆಕೆ ಯಾರನ್ನು ಹತ್ಯೆ ಮಾಡಲು ಸಂಚು ರೂಪಿಸಿರಲಿಲ್ಲ. ಆಕೆಗೆ ಅನಿಸಿದ್ದನ್ನು ನೇರವಾಗಿ ಹಾಗೂ ನಿಷ್ಠುರವಾಗಿ ಹೇಳುತ್ತಿದ್ದಳು. ಇದೇ ಗೌರಿಯ ಹತ್ಯೆಗೆ ಕಾರಣವಾಗಿದೆ. ಇದು ಅತ್ಯಂತ ಹೇಯ ಕೃತ್ಯ. ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕೆಂದರು.
ಚರಕ ಪ್ರಸನ್ನ ಮಾತನಾಡಿ, ಗೌರಿ ಲಂಕೇಶ್‌ಳನ್ನು ಕಳೆದ 40 ವರ್ಷಗಳಿಂದ ಬಲ್ಲೆ. ಆಕೆ ಹತ್ಯೆಯಾಗಿದ್ದಾಳೆ ಎಂದರೆ ಒಪ್ಪಲೂ ಸಾಧ್ಯವಾಗುತ್ತಿಲ್ಲ. ಹೇಯ ಕೃತ್ಯ ನಮ್ಮ ನಡುವೆ ನಡೆದುಹೋದದ್ದು ಅತ್ಯಂತ ಖಂಡನಾರ್ಹ ಎಂದರು.
ಪ್ರಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಭಿನ್ನಾಭಿಪ್ರಾಯ ಏನೇ ಇರಲಿ ಅದನ್ನು ನೇರವಾಗಿ ಎದುರಿಸಬೇಕು. ಹತ್ಯೆ ಯಾವುದಕ್ಕೂ ಉತ್ತರವಲ್ಲ. ನಾವು ಈ ಅನ್ಯಾಯದ ಹತ್ಯೆಗೆ ನ್ಯಾಯ ಪಡೆಯಬೇಕಿದೆ ಎಂದು ಹೇಳಿದರು.
ಫಾ. ಫೆಲಿಕ್ಸ್ ನರೋನ್ಹ , ಫಾ. ಗಿಲ್ಬರ್ಟ್ ಲೋಬೊ, ಫಾ. ಆಲ್ವಿನ್ ಸೆರಾವೊ, ಫಾ. ವಿರೇಶ್ ಮೊರಾಸ್, ಮೌಲಾನ ಮುಜಕ್ಕಿರ್ ಖಾಸ್ಮಿ, ಮೌಲಾನ ಹಾಮಿದ್ ಉಮ್ರಿ, ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಕೆ.ಟಿ. ಗಂಗಾದರ, ಹಿರಿಯ ಸಮಾಜವಾದಿ ಪಿ. ಪುಟ್ಟಯ್ಯ, ದಲಿತ ಮುಖಂಡ ಎಂ. ಗುರುಮೂರ್ತಿ, ಹೋರಾಟಗಾರರಾದ ದೇವೇಂದ್ರಪ್ಪ, ಕೆ.ಪಿ. ಶ್ರೀಪಾಲ್, ಕಸಾಪ ಮಾಜಿ ಅಧ್ಯಕ್ಷ ಡಿ. ಮಂಜುನಾಥ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.