ಹಿಂದೂ ವಿರೋಧಿ ಸರ್ಕಾರ ಕಿತ್ತೂಗೆಯಿರಿ
Team Udayavani, Apr 20, 2018, 3:29 PM IST
ಶಿಕಾರಿಪುರ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದಿಂದ ಆಡಳಿತದಲ್ಲಿ ಕತ್ತಲು ಕವಿದಿದೆ. ರೈತ, ಬಡವರ ಹಾಗೂ ಹಿಂದೂ ವಿರೋಧಿ ಸರ್ಕಾರವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರವನ್ನು ಕಿತ್ತೂಗೆದು, ಅಭಿವೃದ್ಧಿಯ ಬೆಳಕು ಚೆಲ್ಲಲು ಬಿ.ಎಸ್. ಯಡಿಯೂರಪ್ಪ ಅವರನ್ನು ಭಾರಿ ಬಹುಮತದಿಂದ ಆರಿಸಿ ಕಳಿಸಿ ಎಂದು ಛತ್ತೀಸ್‌ಘಡ್ ರಾಜ್ಯದ ಮುಖ್ಯಮಂತ್ರಿ ರಮಣ್‌ಸಿಂಗ್ ಹೇಳಿದರು ಪಟ್ಟಣದ ಹೊಸ ಸಂತೆ ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿಯನ್ನು ನೀವು ಬೆಳೆಸಿದ್ದೀರಿ. ನಿಮ್ಮನ್ನು ನೋಡಲು ನಾನು 2 ಸಾವಿರ ಕಿಮೀನಿಂದ ಶುಭ ಹಾರೈಕೆಯನ್ನು ಹೊತ್ತು ಬಂದಿದ್ದೇನೆ. ಇದು ಶುಭ ಮಹೂರ್ತದ ಸಮಾರಂಭ.
ಈ ಮಹೂರ್ತದಿಂದಲೇ ಯಡಿಯೂರಪ್ಪ ನವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಶಯದಂತೆ ಕಾಂಗ್ರೆಸ್ ಮುಕ್ತ ಕರ್ನಾಟಕದ ದಿನ ದೂರವಿಲ್ಲ ಎಂದರು.
ಭಷ್ಟಾಚಾರದಿಂದ ತುಂಬಿರುವ ಸಿದ್ದರಾಮಯ್ಯ ನವರ ಸರ್ಕಾರ ತೊಲಗಬೇಕಾಗಿದೆ. ಯಡಿಯೂರಪ್ಪ ನವರ ಜನಪರವಾದ , ರೈತಪರವಾದ, ಹಿಂದುಳಿದವರ ಪರವಾದ ಕನಸುಗಳಿಗೆ ಜೀವ ಬರಬೇಕು. ಮತ್ತೆ ಕರ್ನಾಟಕದಲ್ಲಿ ಸ್ವತ್ಛ, ದಕ್ಷ, ಸಮರ್ಥವಾದ ಆಡಳಿತ ನೀಡುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು .
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೊದಲ ಬಾರಿಗೆ ಬಿಜೆಪಿಯ ದಕ್ಷಿಣದ ವಿಜಯದ ಬಾಗಿಲು ತೆಗೆಯಿರಿ ಎಂದು ಯಡಿಯೂರಪ್ಪನವರಿಗೆ ಹೇಳಿದ್ದಾರೆ.
ಯಡಿಯೂರಪ್ಪ ಅವರು ಈ ಬಾರಿ 3 ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸಮರ್ಥವಾದ ದಕ್ಷಿಣದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಲು ಗೆದ್ದು ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದರು. ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ 150 ಶಾಸಕರು ಆಯ್ಕೆ ಆಗಬೇಕಾದರೆ, ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಕಾಣಬೇಕಾದರೆ, ಪ್ರತಿಯೊಬ್ಬ ಕಾರ್ಯಕರ್ತರೂ ಯಡಿಯೂರಪ್ಪನಂತೆ ಕೆಲಸ ಮಾಡಬೇಕು. ನನ್ನಂತಹ ಬಿಜೆಪಿ ಶಾಸಕರು ಗೆಲ್ಲಲು ಅನುವು ಮಾಡಿಕೊಡಬೇಕು. ರಾಜ್ಯವನ್ನು ದೇಶವನ್ನು ನಾವು ಕಾಂಗ್ರೆಸ್ ಮುಕ್ತ ಮಾಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಾಮಾನ್ಯ ರೈತನ ಮಗನಾದ ನನ್ನನ್ನು ಹಂತಹಂತವಾಗಿ ಮುಖ್ಯಮಂತ್ರಿ ಮಾಡಿದ ಋಣ ನನ್ನ ತಲೆಯ ಮೇಲಿದೆ. ಅದನ್ನು ತೀರಿಸುವ ಪರ್ವ ಕಾಲ ಈಗ ಬಂದಿದೆ. ಪ್ರತಿ ಬೂತ್ ನಲ್ಲಿ ಶೇಕಡ 77 ಮತಗಳನ್ನು ಬಿಜೆಪಿಗೆ ಹಾಕಿಸುವ ಮೂಲಕ ವಿರೊಧಿಗಳಿಗೆ ಠೇವಣಿ ಸಿಗದಂತೆ ಮಾಡಿ ಹೊಸ ದಾಖಲೆ ನಿರ್ಮಿಸಬೇಕು ಎಂದರು.
ನಾನು ಮುಖ್ಯ ಮಂತ್ರಿಯಾದ 24 ಗಂಟೆಯೊಳಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ, ಮೂಲ ಸೌಕರ್ಯಗಳಿಗೆ, ಶಾಶ್ವತ ನೀರಾವರಿ ಯೋಜನೆ ಗಳಿಗೆ ಪೂರಕವಾದ ಯೋಜನೆ ರೂಪಿಸುತ್ತೇನೆ. ನೀರಾವರಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ ಗಳನ್ನು ಮೀಸಲಿಡುತ್ತೇನೆ ಎಂದು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಭಾವುಕರಾಗಿ ನುಡಿದರು. ಐದಾರು ತಿಂಗಳಲ್ಲಿ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರಿಗೆ ತೆರಳುವ ರೈಲ್ವೆ ಯೋಜನೆ ಜಾರಿಗೆ ಬರಲಿದೆ ಎಂದರು ತಾಲೂಕಿನ ನಿರೂದ್ಯೋಗಿಗಳಿಗೆ ಮತ್ತು
ಹೆಣ್ಣುಮಕ್ಕಳಿಗಾಗಿ ಕೈಗಾರಿಕೆಗಳನ್ನು ಹಾಗೂ ಗಾರ್ಮೆಂಟ್ಸ್‌ಗಳನ್ನು ತಾಲೂಕಿಗೆ ತಂದು ಹತ್ತಾರು ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು. ರೈತರಿಗೆ ಪೂರಕವಾಗಿ ನಿರಂತರ ವಿದ್ಯುತ್ ನೀಡುವುದಲ್ಲದೆ ಮೆಕ್ಕೆ ಜೋಳಕ್ಕೆ ಕ್ವಿಂಟಾಲ್‌ಗೆ 1500 ರೂ. ಬೆಲೆ ನೀಡುತ್ತೇನೆ ಹಾಗೂ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನವನ್ನು 1000 ರೂ ಗಳಿಗೆ ಏರಿಸುವುದಲ್ಲದೆ ರೈತರ ವಿಚಾರ ಬಂದಾಗ ಯಾವುದೆ ಧರ್ಮ, ಜಾತಿ,ಸಮುದಾಯದ ಭೇದವಿಲ್ಲದೆ ನ್ಯಾಯ ಒದಗಿಸುತ್ತೇನೆ ಎಂದರು.
ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿವೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಾಲೂಕಿನ ಮತದಾರರಿಗೆ ಋಣಿಯಾಗಿದ್ದೇನೆ ಎಂದರು. ಸಂಸದ, ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್, ಶಾಸಕರಾದ ಬಿ.ವೈ. ರಾಘವೇಂದ್ರ, ಚನ್ನಪಟ್ಟಣದ, ಶಾಸಕ ಸಿ.ಪಿ. ಯೋಗೀಶ್ವರ್, ಕುಡಚಿ ಶಾಸಕ ರಾಜೀವ್, ಮುಖಂಡರಾದ ಆಯನೂರು ಮಂಜುನಾಥ , ಕುಮಾರ ಬಂಗಾರಪ್ಪ , ಕೆ.ಪಿ. ನಂಜುಂಡಿ, ಡಿ.ಎಸ್. ವೀರಯ್ಯ, ಅಲ್ಪಾಸಂಖ್ಯಾತರ ಘಟಕದ ಅಬ್ದುಲ್ ಅಜೀಮ್, ಪದ್ಮನಾಭ ಭಟ್, ರಾಮಾನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ರೇವಣಪ್ಪ ಕೊಳಗಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.