ಆಯುರ್ವೇದಿಕ್ ಕಿಟ್ ವಿತರಣೆಗೆ ಉತ್ತಮ ಸ್ಪಂದನೆ
Team Udayavani, Aug 4, 2020, 1:28 PM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಶಿವಮೊಗ್ಗ: ನಗರದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಸುರಕ್ಷಾ ಪಡೆಯಿಂದ ಮನೆ- ಮನೆಗೆ ಆಯುರ್ವೇದಿಕ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸುರಕ್ಷಾ ಪಡೆಯಿಂದ ನಗರದ ನಾಲ್ಕು ಲಕ್ಷ ಜನರಿಗೆ ಕಿಟ್ ವಿತರಿಸುವ ಗುರಿ ಹೊಂದಲಾಗಿದ್ದು, ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು. ಜು.29ರಿಂದ ನಗರದಲ್ಲಿ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್‌ಗಳನ್ನು ನೀಡಲಾಗುತ್ತಿದ್ದು, ಆಯುರ್ವೇದ ತಜ್ಞ ಡಾ| ಗಿರಿಧರ್ ಕಜೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದ ಅವರು, ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳ 82 ಬೂತ್‌ಗಳಲ್ಲಿ ಇದುವರೆಗೂ 84705 ಜನರಿಗೆ ಕಿಟ್ ವಿತರಿಸಲಾಗಿದೆ. ಇಂದಿನಿಂದ 2ನೇ ಹಂತದ ಕಿಟ್ ವಿತರಣಾ ಕಾರ್ಯ ಪ್ರಾರಂಭವಾಗಲಿದೆ ಎಂದರು.
ನಗರದಲ್ಲಿ ಆಯುರ್ವೇದ ಕಿಟ್ ವಿತರಣೆ ಕಾರ್ಯಕ್ರಮಕ್ಕೂ ಮುನ್ನ ಎಲ್ಲರಿಂದ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ. ಕಿಟ್ ವಿತರಣೆಯಲ್ಲಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಇದನ್ನು ಪಡೆಯಲಾಗುತ್ತಿದೆ. ಕಿಟ್ ಎಲ್ಲರಿಗೂ ತಲುಪಬೇಕೆಂಬ ಸದಾಶಯದೊಂದಿಗೆ ಮತ್ತು ಕೊಟ್ಟವರಿಗೆ ಮತ್ತೆ ಕೊಡುವುದದನ್ನು ತಪ್ಪಿಸುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಕೊಡಲಾಗುತ್ತಿದೆ. ಆಧಾರ್ ಸಂಖ್ಯೆ ಪುನರಾವರ್ತನೆಯಾಗಲು ಸಾಧ್ಯವಿಲ್ಲ. ಇದರಿಂದ ಒಬ್ಬ ವ್ಯಕ್ತಿಯೇ ಪದೇ ಪದೇ ಕಿಟ್ ಪಡೆಯಲು ಮುಂದಾಗುವುದು ತಪ್ಪಲಿದೆ ಎಂದರು.
ನಮ್ಮ ಸುರಕ್ಷಾ ಪಡೆ ವಿತರಿಸುತ್ತಿರುವ ಒಂದು ಕಿಟ್‌ಗೆ 100 ರೂ. ಖರ್ಚಾಗುತ್ತಿದೆ. 4 ಲಕ್ಷ ಜನರಿಗೆ 4 ಕೋಟಿ ರೂ.ಗಳ ಅವಶ್ಯಕತೆ ಇದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೇರಿದಂತೆ 30 ಸಂಘ- ಸಂಸ್ಥೆಗಳಿಂದ ವೈಯಕ್ತಿ ಕವಾಗಿ ನಗರದ ಸಹೃದಯ ದಾನಿಗಳಿಂದ ಸಹಕಾರ ಪಡೆಯಲಾಗುತ್ತಿದೆ ಎಂದರು. ಇದುವರೆಗೂ ಒಂದು ಲಕ್ಷ ಕಿಟ್ ಬಂದಿದ್ದು, 10 ವಾರ್ಡ್‌ಗಳಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ. 3 ಲಕ್ಷ ಕಿಟ್ ಗೆ ಬೇಡಿಕೆ ಸಲ್ಲಿಸಲಾಗಿದೆ. ಅದನ್ನೂ ಸಹ ಹಂತ-ಹಂತವಾಗಿ ವಿತರಿಸಲಾಗುತ್ತಿದ್ದು, ಈ ಮುಂಚೆ ತಿಳಿಸಿದಂತೆ ಆ.5ರವರೆಗೆ ಇದ್ದ ಹಂಚಿಕೆಯ ಕಾರ್ಯವನ್ನು 14ರವರೆಗೆ ವಿಸ್ತರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್, ವಿಜಯೇಂದ್ರ ಸೂಲೀಕೆರೆ, ಎನ್.ಜಿ. ನಾಗರಾಜ್ ಮತ್ತಿತರರು ಇದ್ದರು.
ಸುರಕ್ಷಾ ಪಡೆಯ ಮಹತ್ಕಾರ್ಯಕ್ಕೆ ನಗರದ ಸಂಘ- ಸಂಸ್ಥೆಗಳು, ಸಾರ್ವಜನಿಕರು ಹಣದ ನೆರವು ನೀಡುತ್ತಿದ್ದು, ಆಸಕ್ತರು ಈ ಕಾರ್ಯಕ್ಕೆ ಸಹಕಾರ ನೀಡಬಹುದಾಗಿದೆ. ಕೋವಿಡ್ ಸುರಕ್ಷಾ ಪಡೆ ಖಾತೆ ಸಂಖ್ಯೆ: 119401012000290, IFSC ಸಂಖ್ಯೆ: BABOJSHBH, ಶಾಖೆ, ಬ್ಯಾಂಕ್ ಆಫ್ ಬರೋಡ, ಶಿವಮೊಗ್ಗ ಖಾತೆಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.