ಸರ್ಕಾರದಿಂದ ಮತ್ತೆ ಅಕೇಶಿಯಾ ಮೋಹ: ಶಿವಮೊಗ್ಗದಲ್ಲಿ ಸಿಸಿಎಫ್ ಕಚೇರಿಗೆ ಮುತ್ತಿಗೆ ಪ್ರತಿಭಟನೆ
Team Udayavani, Jan 7, 2021, 11:38 AM IST
ಶಿವಮೊಗ್ಗ: ಅಕೇಶಿಯಾ ಬೆಳೆಯಲು ಸರ್ಕಾತ ಎಂಪಿಎಂಗೆ 40 ವರ್ಷ ಅನುಮತಿ ನೀಡಿದ್ದು, ಇದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ರಾಜ್ಯ ಸರ್ಕಾರದ ನೀತಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಮೊಗ್ಗದಲ್ಲಿ ಇಂದು ಪರಿಸರ ಹೋರಾಟಗಾರರು ಸಿಸಿಎಫ್ ಕಛೇರಿಗೆ ಮುತ್ತಿಗೆ ಹಾಕಲಿದ್ದಾರೆ.
ಆಕೇಶಿಯಾ ಬೇಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಶಿವಮೊಗ್ಗದ ಬೆಕ್ಕಿನಕಲ್ಮಠದಿಂದ ಪಾದಯಾತ್ರೆ ನಡೆಸಿ ಸಿಸಿಎಫ್ ಕಛೇರಿಗೆ ಮುತ್ತಿಗೆ ಹಾಕಲಿದ್ದಾರೆ.
ರಾಜ್ಯದಲ್ಲಿ ನೀಲಗಿರಿ, ಅಕೇಶಿಯ ಗಿಡ ಬೆಳೆಸಲು 2017 ರಲ್ಲಿ ನಿಷೇಧ ಹೇರಲಾಗಿತ್ತು. ಅಕೇಶಿಯ ಮರ ಬೆಳೆಯುವುದರಿಂದ ಭೂಮಿ ಬರಡಾಗುತ್ತದೆ ಎಂಬ ತಜ್ಞರ ಅಭಿಪ್ರಾಯದ ನಡುವೆಯೂ ರಾಜ್ಯ ಸರ್ಕಾರ ಸದ್ದಿಲ್ಲದೆ ಅಕೇಶಿಯ ಮರ ಬೆಳೆಸಲು ಅನುಮತಿ ನೀಡಿದೆ.
ಇದನ್ನೂ ಓದಿ:ಸರ್ಕಾರಿ ಮೆಡಿಕಲ್ ಕಾಲೇಜು ವಸತಿಗೃಹದಲ್ಲೇ ಚಿರತೆ ಓಡಾಟ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಅರಣ್ಯ, ಅರಣ್ಯೇತರ ಪ್ರದೇಶದಲ್ಲಿ ಅಕೇಶಿಯ ಬೆಳೆಯಲು ಸರ್ಕಾರ ಎಂಪಿಎಂಗೆ ಅನುಮತಿ ನೀಡಿದೆ. ಶಿವಮೊಗ್ಗದ 16,584 ಹೆಕ್ಟೇರ್ ಅರಣ್ಯ ಭೂಮಿ, 2473 ಹೆ. ಅರಣ್ಯೇತರ ಭೂಮಿ, ಚಿಕ್ಕಮಗಳೂರು ಜಿಲ್ಲೆಯ 2005 ಅರಣ್ಯ, 73 ಹೆ. ಅರಣ್ಯೇತರ ಪ್ರದೇಶ, ದಾವಣಗೆರೆ ಜಿಲ್ಲೆಯ 1310 ಹೆ. ಅರಣ್ಯ, 11 ಹೆ. ಅರಣ್ಯೇತರ ಜಾಗ, ಚಿತ್ರದುರ್ಗದ 104 ಹೆ. ಅರಣ್ಯ, 53 ಹೆ. ಅರಣ್ಯೇತರ ಪ್ರದೇಶದಲ್ಲಿ ಅಕೇಶಿಯಾ ಬೆಳೆಯಲು ಸರ್ಕಾರ ಅನುಮತಿ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.