ಗ್ರಾಮರಾಜ್ಯ ರಾಮ ರಾಜ್ಯವಾಗಿಸುವುದೇ ಬಿಜೆಪಿ ಕನಸು
Team Udayavani, Dec 25, 2020, 6:08 PM IST
ಸಾಗರ: ಗ್ರಾಮರಾಜ್ಯ ರಾಮರಾಜ್ಯವಾಗಬೇಕು ಎನ್ನುವುದು ಬಿಜೆಪಿ ಕನಸು. ಕೇಂದ್ರ ಮತ್ತುರಾಜ್ಯದಿಂದ ಬಂದಿರುವ ಎಲ್ಲ ಯೋಜನೆಗಳುತಳಮಟ್ಟದ ಫಲಾನುಭವಿಗಳಿಗೂ ತಲುಪಿಸಬೇಕು ಎನ್ನುವ ಮಹತ್ತರ ಉದ್ದೇಶ ಬಿಜೆಪಿ ಕಾರ್ಯಕರ್ತರು ಹೊಂದಿರುತ್ತಾರೆ. ಅಂತಹವರನ್ನು ಗ್ರಾಪಂ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಆಶಯ ಈಡೇರಿಸಲು ಮತದಾರರು ಸಹಕಾರ ನೀಡಬೇಕು ಎಂದು ವಿಧಾನ ಪರಿಷತ್‌ಸದಸ್ಯೆ ಭಾರತಿ ಶೆಟ್ಟಿ ಮನವಿ ಮಾಡಿದ್ದಾರೆ.
ತಾಲೂಕಿನ ಆಲಳ್ಳಿಯಲ್ಲಿ ಬಿಜೆಪಿ ವತಿಯಿಂದ ಗುರುವಾರ ಗ್ರಾಪಂ ಚುನಾವಣೆಯಲ್ಲಿ ಮತದಾರಮನೆ- ಮನೆಗೆ ತೆರಳಿ ಮತಯಾಚನೆ ನಡೆಸಿದ ನಂತರ ಮಾತನಾಡಿದ ಅವರು, ನಾನು ಅನೇಕಕಡೆ ಪ್ರವಾಸ ಮಾಡಿದಾಗ ಕೇಂದ್ರ ಸರ್ಕಾರದ ಯೋಜನೆಗಳು ಗ್ರಾಮೀಣ ಜನರಿಗೆ ತಲುಪಿಲ್ಲ.ಇದರಿಂದ ಯೋಜನೆ ವಿಫಲವಾಗುತ್ತಿದೆ. ಸೊರಬ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸದೃಢ ಗ್ರಾಪಂ ರಚನೆಗೆ ಬಿಜೆಪಿಗೆ ಅಭ್ಯರ್ಥಿಗಳು ಸಮರ್ಥರು ಎನ್ನುವುದು ನನ್ನ ಭಾವನೆ ಎಂದರು.
ಮತದಾರರು ಆಮಿಷಕ್ಕೆ ಒಳಗಾಗದೆಅಭಿವೃದ್ಧಿಪರವಾಗಿ ಇರುವವರಿಗೆ ಮತದಾನಮಾಡಿ ಎಂದು ಜನರಲ್ಲಿ ಗ್ರಾಪಂ ಚುನಾವಣೆಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನನಡೆಸಲಾಗುತ್ತಿದೆ. ಸೊರಬ ಕ್ಷೇತ್ರದಲ್ಲಿ ಎರಡು-ಮೂರು ತಂಡಗಳಲ್ಲಿ ಪ್ರಚಾರ ಮಾಡುತ್ತಿದ್ದೇವೆ.ಸೊರಬ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲ ಇದೆ. ಪಕ್ಷ ದೊಡ್ಡದಾಗಿ ಬೆಳೆದಾಗಸಣ್ಣಪುಟ್ಟ ಸಮಸ್ಯೆಗಳು ಸಹಜ. ಹೊಸಬರಾಗಲಿ, ಹಳಬರಾಗಲಿ ಅದನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕೆಇದೆ. ಸೊರಬ ಕ್ಷೇತ್ರದಲ್ಲಿ ಶಾಸಕರು ಮತ್ತು ಪಕ್ಷ ಬೇರೆಬೇರೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಶಾಸಕರುಮತ್ತು ಸಂಘಟನೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕೆಲವರು ಪಕ್ಷವಿಲ್ಲದೆ ಅಭಿಮಾನಿ ಬಳಗದಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷದಹೆಸರು ಹೇಳಿಕೊಂಡು ಮತಯಾಚನೆ ಮಾಡುವ ಶಕ್ತಿ ಅವರಲ್ಲಿ ಉಳಿದಿಲ್ಲ. ಸೊರಬ ಕ್ಷೇತ್ರದ ಅಭಿವೃದ್ಧಿಆಗಿದ್ದರೆ ಅದು ಬಿಜೆಪಿ ಆಡಳಿತ ಅವ ಧಿಯಲ್ಲಿ ಮಾತ್ರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷದಲ್ಲಿಚುನಾವಣೆಗೆ ಮತಯಾಚಿಸುವ ಅಸ್ತ್ರ ಇಲ್ಲ. ಆದರೆಬಿಜೆಪಿ ಬಳಿ ಅಭಿವೃದ್ಧಿ ಅಸ್ತ್ರವಿದೆ. ಪ್ರತಿ ಗ್ರಾಪಂಗೆ ಕನಿಷ್ಠ 7ರಿಂದ 8 ಕೋಟಿ ರೂಪಾಯಿ ಅನುದಾನನೀಡಿದ್ದೇವೆ. ಇನ್ನು ಕೆಲವು ಕಡೆಗಳಲ್ಲಿ ಸಣ್ಣಪುಟ್ಟಅಭಿವೃದ್ಧಿ ಬೇಡಿಕೆಗಳಿದ್ದು ಅದನ್ನು ಸಹ ಬಿಜೆಪಿಸರ್ಕಾರ ಮುಂದಿನ ದಿನಗಳಲ್ಲಿ ಮಾಡಿಕೊಡಲಿದೆ.ಕಳೆದ ಬಾರಿ ನಮ್ಮ ಶಾಸಕರು ಇಲ್ಲದೆ ಇದ್ದಾಗಸೊರಬ ಕ್ಷೇತ್ರದಲ್ಲಿ ನಾವು 22 ಗ್ರಾಪಂ ಗೆದ್ದಿದ್ದೇವೆ. ಈಗ ಶಾಸಕರು ಇದ್ದಾರೆ. ಜೊತೆಗೆ ಸಮಗ್ರಅಭಿವೃದ್ಧಿ ಮಾಡಿದ್ದೇವೆ. ಕನಿಷ್ಟ 30ಕ್ಕೂ ಹೆಚ್ಚುಗ್ರಾಪಂನಲ್ಲಿ ಬಿಜೆಪಿ ಅ ಕಧಿಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ತಾಳಗುಪ್ಪ ಹೋಬಳಿಯಲ್ಲಿ 8ಗ್ರಾಪಂ ಪೈಕಿ ಕನಿಷ್ಠ 7 ಗ್ರಾಪಂನಲ್ಲಿ ಬಿಜೆಪಿ ಅಧಿಕಾರಹಿಡಿಯಲಿದೆ. ತಾಳಗುಪ್ಪ ಜಿಪಂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಸಂಸದರು ಸುಮಾರು 10.50 ಕೋಟಿ ರೂ. ಅನುದಾನತಾಳಗುಪ್ಪ ಹೋಬಳಿಗೆ ನೀಡಿದ್ದಾರೆ. ಅಭಿವೃದ್ಧಿಯೇಬಿಜೆಪಿ ಮಂತ್ರವಾಗಿದ್ದು, ಮತದಾರರು ಬಿಜೆಪಿಯ ಕೈ ಹಿಡಿಯಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಗಜಾನನರಾವ್, ಗುರುಪ್ರಸನ್ನ ಗೌಡ, ಶ್ರೀಪಾದ ಹೆಗಡೆ ನಿಸ್ರಾಣಿ, ಗೌರಮ್ಮ, ಗೀತಾ ಮಲ್ಲಿಕಾರ್ಜುನ್, ಕುಸುಮಾ ಪಾಟೀಲ್, ಮಲ್ಲಿಕಾರ್ಜುನ್, ಯೋಗೀಶ್, ರವಿ ಕೈತೋಟ, ಉಲ್ಲಾಸ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.