ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಿರಿ


Team Udayavani, Jul 13, 2017, 2:29 PM IST

13-SHV-1.jpg

ಶಿವಮೊಗ್ಗ: ಮಳೆಯ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಪ್ರಸ್ತುತ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತ ಸಾಕಷ್ಟು
ಕಡಿಮೆ ಇರುವುದರಿಂದ ರೈತರು ಭತ್ತಕ್ಕೆ ಪರ್ಯಾಯವಾಗಿ ಖುಷ್ಕಿ ಹಾಗೂ ಅರೆ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಭದ್ರಾ
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ 140 ಅಡಿಗಳಷ್ಟಿತ್ತು. ಆದರೆ ಪ್ರಸ್ತುತ 125ಅಡಿ ಭರ್ತಿಯಾಗಿದೆ. ಕಳೆದ ವರ್ಷಕ್ಕಿಂತ 15ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಿದೆ. ನೀರಿನ ಒಳ ಹರಿವು ಸಹ ಕಡಿಮೆಯಿದ್ದು ಕೇವಲ 1641ಕ್ಯೂಸೆಕ್‌ಗೆ ಇಳಿದಿದೆ ಎಂದು ತಿಳಿಸಿದರು.

ಜಲಾಶಯದ ಒಟ್ಟು ನೀರಿನ ಸಂಗ್ರಹಣೆ ಸಾಮರ್ಥ್ಯ 71.53ಟಿಎಂಸಿ ಇದೆ. ಪ್ರಸ್ತುತ 18.37ಟಿಎಂಸಿ ಸಂಗ್ರಹವಿದ್ದು, ಕಳೆದ ವರ್ಷ
ಇದೇ ಅವಧಿಯಲ್ಲಿ 26ಟಿಎಂಸಿ ನೀರು ಸಂಗ್ರಹವಿತ್ತು. ಇದುವರೆಗಿನ ವಾಡಿಕೆ ಮಳೆ 8681ಮಿಮೀ ಸುರಿಯಬೇಕಿತ್ತು. ಆದರೆ
637ಮಿಮೀ ಮಳೆಯಾಗಿದೆ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಭತ್ತದ ಬೆಳೆಗೆ ನೀರು ಬಿಡುವ ಕುರಿತು
ರೈತರಿಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಭತ್ತಕ್ಕೆ ಪರ್ಯಾವಾಗಿ ಮೆಕ್ಕೆಜೋಳವನ್ನು ಈ ತಿಂಗಳ ಅಂತ್ಯದವರೆಗೂ
ಬಿತ್ತನೆ ಮಾಡಬಹುದಾಗಿದೆ. ರಾಗಿಯನ್ನು ಆಗಸ್ಟ್‌ ಅಂತ್ಯದವರೆಗೂ ನಾಟಿ ಮಾಡಲು ಅವಕಾಶವಿದೆ. ಆಗಲೂ ಮಳೆಯಾಗದಿದ್ದರೆ
ಹೆಸರು, ಉದ್ದು, ಅಲಸಂದೆಯಂತಹ ದ್ವಿದಳ ಧಾನ್ಯಗಳನ್ನು ಸೆಪ್ಟಂಬರ್‌ವರೆಗೂ ಬಿತ್ತನೆ ಮಾಡಬಹುದು ಎಂದು ತಿಳಿಸಿದರು.

ಕಳೆದ ವರ್ಷ ಆರಂಭದಲ್ಲಿ ಮುಂಗಾರು ವಿಳಂಬವಾದರೂ ಜುಲೈ, ಆಗಸ್ಟ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಅದೇ ರೀತಿ
ಮುಂದಿನ ದಿನದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. ಆದರೂ ರೈತರಲ್ಲಿ ಪರ್ಯಾಯ ಬೆಳೆಗಳ ಕುರಿತು ಜಾಗೃತಿ
ಮೂಡಿಸಲಾಗುತ್ತಿದೆ ಎಂದರು. 

ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹಿರೇಕೆರೂರು, ರಾಣೆಬೆನ್ನೂರು ಹಾಗೂ ಹೊನ್ನಾಳಿ ತಾಲೂಕಿನ 620ಹೆಕ್ಟೇರ್‌
ಪ್ರದೇಶಗಳಲ್ಲಿ ರೈತರಿಗೆ ಪರ್ಯಾಯ ಬೆಳೆ ಪ್ರಾತ್ಯಕ್ಷಿತೆ ಮತ್ತು ಅಳವಡಿಕೆ ಕಾರ್ಯಕ್ರಮದಡಿ ಬಿತ್ತನೆ ಬೀಜಗಳ ಕಿಟ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಇದರಂತೆ ಪ್ರತಿ ಹೆಕ್ಟೇರ್‌ಗೆ 15ಕೆಜಿ ಮೆಕ್ಕೆಜೋಳ, ಐದು ಕೆಜಿ ತೊಗರಿ, 10ಕೆಜಿ ಝಿಂಕ್‌ ಸಲ್ಫೆಟ್‌ ಮತ್ತು ಎರಡು ಕೆಜಿ ಬೋರಾಕ್ಸ್‌ ಒಳಗೊಂಡ ಕಿಟ್‌ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾಡಾ ವ್ಯಾಪ್ತಿಯಲ್ಲಿ ಒಟ್ಟು 1.5ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿಗಾಗಿ ಭದ್ರಾ ಜಲಾಶಯವನ್ನು ಅವಲಂಬಿಸಿದ್ದು, ಕಳೆದ ವರ್ಷ 100ದಿನಗಳ ಭತ್ತ ಬಿತ್ತನೆಗೆ ಬಲದಂಡೆ ಕಾಲುವೆ ಮೂಲಕ 23ಟಿಎಂಸಿ ಹಾಗೂ ಎಡದಂಡೆ ಕಾಲುವೆ ಮೂಲಕ 3ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ
ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯದಿಂದ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನಿರ್ದೇಶಕಿ ವಾಣಿ, ಕಾಡಾ ಕೃಷಿ ವಿಭಾಗದ ಜಂಟಿ ನಿರ್ದೇಶಕಿ ಪೂರ್ಣಿಮ ಇದ್ದರು.

ಗದಗ, ಹಾವೇರಿ, ದಾವಣಗೆರೆ ನಗರಗಳಿಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲು 700ಕೋಟಿ ರೂ.
ವೆಚ್ಚದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ನೀರು ಪೋಲಾಗುವುದನ್ನು ತಡೆಗಟ್ಟಲು ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ.

ಕಾಡಾ ವ್ಯಾಪ್ತಿಯಲ್ಲಿನ ಕೆರೆಗಳ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. ಇಲ್ಲಿಯವರೆಗೆ ಸುಮಾರು 250-300ಕ್ಕೂ ಹೆಚ್ಚು
ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿಸಲಾಗುವುದು. 
ಎಚ್‌.ಎಸ್‌. ಸುಂದರೇಶ್‌, ಕಾಡಾ ಅಧ್ಯಕ್ಷ

ಟಾಪ್ ನ್ಯೂಸ್

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.