Congress ಸರ್ಕಾರ ನೀಡಿದ ಯೋಜನೆಗಳು ಇತಿಹಾಸ ಪುಟಗಳಲ್ಲಿ ಸೇರುತ್ತಿದೆ: ಮಧು ಬಂಗಾರಪ್ಪ
Team Udayavani, Aug 30, 2023, 1:02 PM IST
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳು ರಾಜ್ಯದ ಇತಿಹಾಸ ಪುಟಗಳಲ್ಲಿ ಸೇರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮನೆ ಯಜಮಾನಿಗೆ 2,000 ರೂಗಳನ್ನು ಅವರ ಜೀವನಕ್ಕೆ ಉಪಯೋಗವಾಗಲಿ ಎಂದು ಕೊಡುತ್ತಿದ್ದೇವೆ ಇದರೊಂದಿಗೆ ನಾರಿ ಶಕ್ತಿ, ಅನ್ನಭಾಗ್ಯ, ಗೃಹಜೋತಿ ಯೋಜನೆಗಳನ್ನು ಕೂಡ ನೀಡಲಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದವರು ಇಷ್ಟು ದಿನ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು ಇವತ್ತಿನಿಂದ ನಾವು ಅವರನ್ನು ಒಂದು ಕಡೆ ನಿಲ್ಲಿಸಿಲ್ಲ ಸ್ವತಃ ಪ್ರಧಾನಿಯವರೇ ಬಿಜೆಪಿ ರಾಜ್ಯಾಧ್ಯಕ್ಷರನ್ನು ಸೇರಿದಂತೆ ಬಿಜೆಪಿಯವರನ್ನು ಬ್ಯಾರೆಕೇಡ್ ಹಿಂದೆ ನಿಲ್ಲಿಸಿ ರಾಜ್ಯದ ಬಿಜೆಪಿಯವರಿಗೆ ಪ್ರಧಾನಿಯವರೇ ಉತ್ತರ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 30,000ಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಒಂದು ಕೋಟಿ 43 ಲಕ್ಷ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿವೆ ಎಂದು ಹೇಳಿದರು.
ಕೇಂದ್ರ ಗ್ಯಾಸ್ ಸಿಲಿಂಡರ್ ದರ ಇಳಿಕೆ ವಿಚಾರ:
ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸುವ ವಿಚಾರದ ಬಗ್ಗೆ ಹೇಳಿಕೆ ನೀಡಿದ ಸಚಿವರು ಪ್ರಧಾನಿ ನರೇಂದ್ರ ಮೋದಿ ಪುಕ್ಸಟ್ಟೆ ಗ್ಯಾಸ್ ಸಿಲಿಂಡರ್ ಕೊಡುವುದಾಗಿ ಹೇಳಿದ್ದರು ಮೊದಲು ಅದನ್ನು ಮಾಡಲಿ ಆಗ ನಾನು ಬಿಜೆಪಿಯವರಿಗೆ ಹಾರ ಹಾಕಿ ಸನ್ಮಾನಿಸುತ್ತೇನೆ ಎಂದು ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರಡಾ ಬಗ್ಗೆ ಮಾತನಾಡಿದ ಅವರು ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಮಾಜಿ ಸಿಎಂ ಬಂಗಾರಪ್ಪನವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಕಾನೂನನ್ನು ನಾವು ಗೌರವಿಸಬೇಕಾಗಿದೆ ನ್ಯಾಯಾಲಯ ಕೂಡ ನಮ್ಮ ವಾಸ್ತವಿಕತೆ ಅರಿತು ತೀರ್ಪು ನೀಡಲಿ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಇರುವ ರೈತರೆಲ್ಲರೂ ನಮ್ಮ ದೇಶದ ರೈತರೇ ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಬರಗಾಲಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕಿದೆ ಈ ಹಿಂದೆ ಕೂಡ ಎರಡು ಮೂರು ವರ್ಷಗಳ ಕಾಲ ಬರಗಾಲ ಬಂದಿತ್ತು ರಾಷ್ಟ್ರೀಯ ಕಾನೂನುಗಳನ್ನು ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ ಬರಗಾಲದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ಸೌಲಭ್ಯಗಳನ್ನು ತರಬೇಕಾಗಿದೆ ಎಂದರು.
ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ವಿಚಾರಡಾ ಬಗ್ಗೆ ಹೇಳಿಕೆ ನೀಡಿದ ಸಚಿವರು ಬಿಜೆಪಿಯವರು ಪಟ್ಟಿ ಬಿಡುಗಡೆ ಮಾಡಿದರೆ ಆಗುವುದಿಲ್ಲ ಅದರಲ್ಲಿ ಏನಾದರೂ ಅಂಶಗಳಿರಬೇಕು, ಸೋತವರು ಟೀಕೆ ಟಿಪ್ಪಣಿ ಮಾಡದೆ ಮತ್ತೇನು ಮಾಡುತ್ತಾರೆ ಭ್ರಷ್ಟಾಚಾರ ನಡೆದಿದ್ದರೆ ನಿಖರ ದಾಖಲೆ ನೀಡಲಿ ಅದನ್ನು ತನಿಖೆ ಮಾಡಿ ಉತ್ತರ ನೀಡುತ್ತೇವೆ, ಸುಮ್ಮ ಸುಮ್ಮನೆ ಹೀಗೆ ಮಾಡುವುದು ಬಿಜೆಪಿಯವರಿಗೆ ಒಂದು ರೋಗ ಎಂದು ಹೇಳಿದರು.
ಇದನ್ನೂ ಓದಿ: ISRO ವಿಜ್ಞಾನಿ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ ಟ್ಯೂಷನ್ ಶಿಕ್ಷಕನ ಬಂಧನ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.