ಜಿಎಸ್ಟಿ ಎಫೆಕ್ಟ್: ಅಡಿಕೆ ವಹಿವಾಟು ಬಂದ್
Team Udayavani, Jul 2, 2017, 3:45 AM IST
ಶಿವಮೊಗ್ಗ: ಜಿಎಸ್ಟಿ ಜಾರಿಗೆ ಬರುತ್ತಿದ್ದಂತೆ ಇಲ್ಲಿನ ಅಡಿಕೆ ವಲಯ ಮಾತ್ರ ಅಕ್ಷರಶಃ ಗೊಂದಲಕ್ಕೆ ಈಡಾಗಿದೆ. ಹೀಗಾಗಿ ಮೊದಲ ದಿನ ಯಾವುದೇ ವಹಿವಾಟು ಇಲ್ಲಿ ನಡೆಯಲಿಲ್ಲ. ಇಡೀ ಉದ್ಯಮ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಜಿಎಸ್ಟಿಯಲ್ಲಿ ಅಡಿಕೆ ಕುರಿತಾಗಿ ಯಾವುದೇ ರೀತಿಯಲ್ಲಿ ಸ್ಪಷ್ಟವಾಗಿ ಹೇಳದೆ ಇರುವುದೇ ಈ ಆತಂಕಕ್ಕೆ ಕಾರಣವಾಗಿದೆ. ಜಿಎಸ್ಟಿ ಅಡಿಯಲ್ಲಿ ಅಡಿಕೆಗೆ ಯಾವ ಹಂತದ ತೆರಿಗೆ ಬೀಳುತ್ತದೆ ಎಂಬ ಗೊಂದಲ ವರ್ತಕರಲ್ಲಿದೆ. ಈ ಕುರಿತು ವರ್ತಕರು ಸ್ಪಷ್ಟನೆಗೆ ಯತ್ನಿಸಿದರೂ ಎಲ್ಲಿಂದಲೂ ಯಾವುದೇ ರೀತಿಯ ನಿಖರ ಉತ್ತರ ಸಿಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ಹಣ್ಣಡಿಕೆಯನ್ನು ಒಣಗಿಸಿ ಇಟ್ಟರೆ ಅದಕ್ಕೆ ತೆರಿಗೆಯಿಲ್ಲ. ಅದನ್ನು ಸುಲಿದರೆ ಶೇ.5 ರಷ್ಟು ತೆರಿಗೆ ವಿಧಿಸಲಾಗಿದೆ. ಇದರೊಂದಿಗೆ ಒಣ ಹಣ್ಣಿಗೆ ಶೇ.12ರಷ್ಟು ತೆರಿಗೆ ವಿಧಿಸಿದ್ದು, ಒಣಗಿಸಿದ ಅಡಿಕೆ ಇದರಡಿ ಬರುವುದರಿಂದ ಇದಕ್ಕೆ ಶೇ.12 ರಷ್ಟು ತೆರಿಗೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಒಣ ಅಡಿಕೆ ಎಂದರೆ ಹಣ್ಣಡಿಕೆ ಒಣಗಿಸಿ ಬಳಿಕ ಸುಲಿದ ಚಾಲಿ. ಇದಕ್ಕೆ ಶೇ.5 ರಷ್ಟು ತೆರಿಗೆ ಇದೆ.
ಆದರೆ, ಕೆಂಪಡಿಕೆಯನ್ನು ಹಸಿ ಇರುವಾಗಲೇ ಸುಲಿದು, ಬಳಿಕ ಜೊಗರಿನಲ್ಲಿ ಬೇಯಿಸಲಾಗುತ್ತದೆ. ಆಗ ಇದು ಸಂಸ್ಕರಿತ ಅಡಿಕೆಯಾಗತ್ತದೆ. ಆಗ ಇದಕ್ಕೆ ಬೇರೆಯದೇ ತೆರಿಗೆ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಈ ನಡುವೆ ಸಿಪ್ಪೆ ತೆಗೆಯದ ಒಣಗಿದ ಅಡಿಕೆಗೆ ಶೂನ್ಯ ಜಿಎಸ್ಟಿ ಇದೆ. ಅಡಿಕೆಯಲ್ಲಿ ಎರಡು ವಿಧದ ವರ್ಗಿàಕರಣ ಮಾತ್ರ ಮಾಡಿ ಕೋಡ್ ನೀಡಲಾಗಿದೆ. ಆದರೆ, ಅಡಿಕೆಯಲ್ಲಿ ತರೇಹವಾರಿ ಅಡಿಕೆಯಿದ್ದು, ಒಂದೊಂದು ಅಡಿಕೆ ಮಾದರಿಗೂ ಒಂದೊಂದು ರೀತಿಯ ಧಾರಣೆ ಇದೆ. ಈ ಧಾರಣೆಯಲ್ಲಿ ಕೂಡ ಅಗಾಧ ವ್ಯತ್ಯಾಸವಿದೆ. ಹೀಗಾಗಿ ವರ್ತಕರಲ್ಲಿ ಗೊಂದಲ ಕಾಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.