Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Team Udayavani, Apr 29, 2024, 4:26 PM IST
ತೀರ್ಥಹಳ್ಳಿ : ಇವತ್ತು ಕಾಂಗ್ರೆಸ್ ಪಕ್ಷದ ಸುಳ್ಳು ಅಪಪ್ರಚಾರವನ್ನು ನೋಡುತ್ತಿದ್ದೇವೆ. ನಮ್ಮ ದೇಶಕ್ಕೆ ಸುಭದ್ರ ನಾಯಕನನ್ನು ಕೊಡುವಂತದ್ದು ನಮ್ಮ ಕರ್ತವ್ಯ. ಭಾರತ ದೇಶದ ಭದ್ರತೆಗಾಗಿ ಹಲವಾರು ಆರ್ಥಿಕ ಸುಧಾರಣೆಗಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈಗಾಗಲೇ ನಡೆಯುತ್ತಿದೆ. ಐದನೇ ಸ್ಥಾನದಲ್ಲಿರುವ ಆರ್ಥಿಕ ಶಕ್ತಿಯನ್ನು ಮೂರನೇ ಸ್ಥಾನಕ್ಕೆ ತರಲು ಹೊರಟಿರುವ ನಾಯಕತ್ವವನ್ನು ನೋಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಸೋಮವಾರ ತಾಲೂಕಿನ ಕೋಣಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇವತ್ತು ಹೊರ ದೇಶಗಳು ಕೂಡ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿವೆ. ಕಳೆದ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಹೊಸದಾಗಿ ಅಭಿವೃದ್ಧಿ ಕಾರ್ಯಗಳನ್ನು ಆರಂಭ ಮಾಡಿದ್ದೇವೆ ಎಂದು ಎಲ್ಲೂ ಸಹ ಅವರು ಚರ್ಚೆ ಮಾಡಿಲ್ಲ.
ಇವತ್ತು ರಾಜ್ಯದ ಭದ್ರತೆಗೆ ಸಂಚಕಾರ ಇದೆ ಎಂದರು.
ಪ್ರತಿನಿತ್ಯ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಅಲ್ಲಿಂದ ನಮಗೆ ದುಡ್ಡು ಬಂದಿಲ್ಲ ದುಡ್ಡು ಬಂದಿಲ್ಲ ಎಂದು, ಸ್ವಾತಂತ್ರ್ಯ ಬಂದು ಇಷ್ಟು ವರ್ಷ ನೀವು ಏನು ಮಾಡಿದ್ದೀರಿ? ಇವತ್ತು ಅವರು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ ಅದರ ಬಗ್ಗೆ ನಮ್ಮ ತಕರಾರು ಇಲ್ಲ, ಆದರೆ ಯಾವ ಬೆಲೆಯನ್ನು ತೆರುತ್ತಿದ್ದಾರೆ, ಈ 5 ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ನಮ್ಮ ಆರ್ಥಿಕ ಶಕ್ತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಮೊದಲು ಹೇಳಿದ್ದರು 200 ಯೂನಿಟ್ ಎಂದು ಈಗ ಕೊಡುತ್ತಿರುವುದೇ 30 ರಿಂದ 40 ಯೂನಿಟ್ ಅದು ಎಲ್ಲರಿಗೂ ಅಲ್ಲ ಒಂದು ಕೋಟಿ ಜನರಿಗೆ ಮಾತ್ರ, ಚುನಾವಣೆಯಲ್ಲಿ ಮತ ಪಡೆಯಬೇಕು ಎಂದು ಮೊದಲು ಹೇಳಿದ್ದೆ ಒಂದು ಈಗ ಮಾಡುತ್ತಿರುವುದೇ ಇನ್ನೊಂದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ 11,000 ಹಣವನ್ನು ಗ್ಯಾರಂಟಿಗಾಗಿ ಉಪಯೋಗಿಸಿಕೊಂಡರು. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಒಂದು ಲಕ್ಷದ ಐದು ಸಾವಿರ ಕೋಟಿ ಸಾಲವನ್ನು ಮಾಡಿದ್ದಾರೆ ಇವತ್ತು ಈ ಸಾಲವನ್ನು ತೀರಿಸುವವರು ಯಾರು? ನಾನು ಇದು ಪಿಕ್ ಪ್ಯಾಕೆಟ್ ಸರ್ಕಾರ ಎಂದು ಈಗಾಗಲೇ 3-4 ಕಡೆ ಹೇಳಿದ್ದೇನೆ. ಇವತ್ತು ರೈತರ ಒಂದು ಟಿಸಿ ತಗೊಳ್ಳಬೇಕಾದರೆ 2 ಲಕ್ಷ ಹಣ ಕಟ್ಟಬೇಕು ಇದು ಸಾಧ್ಯನ? ಮಧ್ಯದ ಬೆಲೆ ಏರಿಕೆ ಮಾಡಿ ತಿಂಗಳಿಗೆ 5 ರಿಂದ 6 ಸಾವಿರ ಪ್ರತಿ ಮನೆಯ ಗಂಡಂದಿರಿಂದ ಸರ್ಕಾರ ಪಡೆದುಕೊಳ್ಳುತ್ತಿದೆ. ಇವತ್ತು 6 ಲಕ್ಷದ 65,000 ಕೋಟಿ ಸಾಲ ಮಾಡಿದೆ.ಒಬ್ಬೊಬ್ಬರ ತಲೆಯ ಮೇಲೆ 36,000 ಸಾಲವನ್ನು ಹೊರಿಸಿದ್ದಾರೆ ಆದ್ದರಿಂದ ಎಚ್ಚರಿಕೆಯಿಂದ ತೀರ್ಮಾನವನ್ನು ತೆಗೆದುಕೊಳ್ಳಿ ಎಂದರು.
ಬರಗಾಲದಿಂದ ಜನ ತತ್ತರಿಸಿ ಹೋಗಿದ್ದಾರೆ ರೈತರ ಬಗ್ಗೆ ಕಿಂಚಿತ್ತು ಈ ಸರ್ಕಾರಕ್ಕೆ ಅನುಕಂಪ ಇಲ್ಲ. ಕೇವಲ ಸುಳ್ಳು ಹೇಳಿ ಚುನಾವಣೆ ಮಾಡಲು ಹೊರಟಿದ್ದಾರೆ. ಈ ಚುನಾವಣೆಯ ನಂತರ ಈ ಸರ್ಕಾರ ಎಲ್ಲಿಗೆ ಹೋಗಿ ಮುಟ್ಟುತ್ತದೆ ಗೊತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ತಂದಿದೆ. ಯಡಿಯೂರಪ್ಪನ ಕಾಲದಲ್ಲಿ ಕೊಡುತ್ತಿದ್ದ ನಾಲ್ಕು ಸಾವಿರವನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ . ಒಂದು ಕಾಲದಲ್ಲಿ ನಾವು ಕೂಡ ಮೋದಿಯವರನ್ನು ವಿರೋಧ ಮಾಡಿದ್ದೆವು ಆದರೆ ಈಗ ಅಂತಹದನ್ನು ಮಾಡುವುದಿಲ್ಲ ಎಂದರು.
ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆಯಲ್ಲಿ 14ಕ್ಕೆ 14 ಬಿಜೆಪಿ ಜೆಡಿಎಸ್ ಗೆಲ್ಲಲಿದೆ. ಮಂಡ್ಯದಲ್ಲಿ ಜನರೇ ಚುನಾವಣೆ ನಡೆಸಿದ್ದಾರೆ. ಮುಂಬರುವ 14 ಕ್ಷೇತ್ರದಲ್ಲೂ ಗೆದ್ದು ಎನ್ ಡಿ ಎ ಮೈತ್ರಿ ಕೂಟ ಬಲಪಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.